ETV Bharat / bharat

ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ 'ಗ್ರಹಗಳ ಮೆರವಣಿಗೆ': ಒಂದೇ ಸಾಲಿಗೆ ಬರಲಿವೆ 6 ಗ್ರಹಗಳು?

ಸೌರವ್ಯೂಹದಲ್ಲಿ ಬುಧ, ಶುಕ್ರ, ಶನಿ, ಯುರೇನಸ್, ನೆಪ್ಚೂನ್ ಮತ್ತು ಗುರು ಗ್ರಹಗಳು ಇಂದು ಬಹುತೇಕ ಒಂದೇ ಸಾಲಿನಲ್ಲಿ ಕಾಣಬಹುದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.

SOLAR SYSTEM
ಇಂದು ಸಂಜೆ ಒಂದೇ ಸಾಲಿಗೆ ಬರಲಿವೆ 6 ಗ್ರಹಗಳು (ETV Bharat)
author img

By ETV Bharat Karnataka Team

Published : February 28, 2026 at 5:30 PM IST

2 Min Read
Choose ETV Bharat

ಗೋರಖ್‌ಪುರ (ಉತ್ತರಪ್ರದೇಶ): ಇಂದು (ಫೆಬ್ರವರಿ 28) ಸಂಜೆ ನೀವು ನಿಮ್ಮ ಕಣ್ಣುಗಳನ್ನು ಆಕಾಶದತ್ತ ಹರಿಸಿ. ಈ ದಿನ ನಮ್ಮ ಸೌರವ್ಯೂಹದ ವಿಸ್ಮಯವೊಂದು ಕಾಣಿಸುವ ಸಾಧ್ಯತೆ ಇದೆ. ಬುಧ, ಶುಕ್ರ, ಶನಿ, ಯುರೇನಸ್, ನೆಪ್ಚೂನ್ ಮತ್ತು ಗುರು ಗ್ರಹಗಳು ಬಹುತೇಕ ಒಂದೇ ಕಕ್ಷೆಯಲ್ಲಿ ಕಾಣಿಸಿಕೊಳ್ಳಬಹುದು. ಸೌರವ್ಯೂಹದ 6 ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಕಾಲ್ಪನಿಕ ರೇಖೆಯ ಸುತ್ತಲೂ (ಎಕ್ಲಿಪ್ಟಿಕ್) ಏಕಕಾಲದಲ್ಲಿ ಕಾಣಿಸಿಕೊಳ್ಳಬಹುದಾದ ಖಗೋಳ ವಿಸ್ಮಯ ಇದಾಗಿದೆ.

ಖಗೋಳಶಾಸ್ತ್ರಜ್ಞರು ಹೇಳೋದೇನು? ಗೋರಖ್‌ಪುರದ ವೀರ್ ಬಹದ್ದೂರ್ ಸಿಂಗ್ ತಾರಾಲಯದ ಖಗೋಳಶಾಸ್ತ್ರಜ್ಞ ಅಮರ್ ಪಾಲ್ ಸಿಂಗ್ ಅವರು ವಿವರಿಸುವಂತೆ, "ಈ ಅದ್ಭುತ ಆಕಾಶ ದೃಶ್ಯವು ಸೂರ್ಯಾಸ್ತದ ಸುಮಾರು 30 ನಿಮಿಷಗಳ ನಂತರ ಪ್ರಾರಂಭವಾಗುತ್ತದೆ. ನೀವು ದಿಗಂತದ ಪಶ್ಚಿಮ ಭಾಗದತ್ತ ವೀಕ್ಷಿಸುವ ಮೂಲಕ ಗ್ರಹಗಳ ಸಾಲನ್ನು ಕಾಣಬಹುದು ಎಂದು ತಿಳಿಸಿದ್ದಾರೆ.

ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ
ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ (ETV Bharat)

ಎಲ್ಲಾ ಗ್ರಹಗಳು ಸುಮಾರು ಒಂದೇ ಸಮತಲದಲ್ಲಿ ಸೂರ್ಯನ ಸುತ್ತ ಸುತ್ತುತ್ತವೆ. ಇದು ಭೂಮಿಯಿಂದ ನೋಡಿದಾಗ, ಒಂದೇ ಹಾದಿಯಲ್ಲಿ ಅಥವಾ ರೇಖೆಯಲ್ಲಿ ಕಾಣುತ್ತವೆ. ಮೂರು ಅಥವಾ ಹೆಚ್ಚಿನ ಗ್ರಹಗಳು ಒಟ್ಟಿಗೆ ಗೋಚರಿಸಿದಾಗ, ಅದನ್ನು 'ಗ್ರಹಗಳ ಮೆರವಣಿಗೆ' ಎಂದು ಕರೆಯಲಾಗುತ್ತದೆ. ಆರು ಅಥವಾ ಹೆಚ್ಚಿನ ಗ್ರಹಗಳು ಏಕಕಾಲದಲ್ಲಿ ಒಂದೇ ಸಾಲಿನಲ್ಲಿ ಗೋಚರಿಸುವುದು ವಿಸ್ಮಯ ಸಂಗತಿ ಎನ್ನುತ್ತಾರೆ.

ಶುಕ್ರ, ಗುರು, ಬುಧ, ಶನಿ, ಯುರೇನಸ್ ಮತ್ತು ನೆಪ್ಚೂನ್ ಅನ್ನು ವೀಕ್ಷಿಸಲು ಉತ್ತಮ ದೂರದರ್ಶಕ/ಬೈನಾಕ್ಯುಲರ್‌ಗಳು ಅಥವಾ ವಿಶೇಷ ಬೈನಾಕ್ಯುಲರ್‌ಗಳು ಬೇಕಾಗುತ್ತವೆ. ಈ ಸಮಯದಲ್ಲಿ ಚಂದ್ರ ಗ್ರಹವೂ ಆಕಾಶದಲ್ಲಿ ಕಾಣಿಸುತ್ತದೆ. ಇಂದು ಸಂಜೆ ಚಂದ್ರನು 92% ಹೊಳಪಿನಲ್ಲಿ, ಗುರುಗ್ರಹಕ್ಕೆ ಬಹಳ ಹತ್ತಿರದಲ್ಲಿ (ಸರಿಸುಮಾರು 4 ಡಿಗ್ರಿ) ಗೋಚರಿಸುತ್ತಾನೆ. ಇದನ್ನು ಖಗೋಳಶಾಸ್ತ್ರದಲ್ಲಿ 'ಗ್ರಹಗಳ ಜೋಡಣೆ' ಎಂದೂ ಕರೆಯಲಾಗುತ್ತದೆ.

ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ
ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ (ETV Bharat)

ಗ್ರಹಗಳು ನಿಜವಾಗಿಯೂ ಒಂದೇ ಕಕ್ಷೆಗೆ ಬರುತ್ತವೆಯೇ? ಭೂಮಿಯಿಂದ ನೋಡಿದಾಗ ಮಾತ್ರ ಈ ಗ್ರಹಗಳು ಒಂದೇ ಸಾಲಿನಲ್ಲಿ ಇರುವಂತೆ ಕಾಣುತ್ತವೆ ಎಂದು ಖಗೋಳಶಾಸ್ತ್ರಜ್ಞ ಅಮರ್ ಪಾಲ್ ಸಿಂಗ್ ಅವರು ವಿವರಿಸುತ್ತಾರೆ. ಬಾಹ್ಯಾಕಾಶದಲ್ಲಿ ಅವು ಲಕ್ಷಾಂತರ ಕಿಲೋಮೀಟರ್ ಅಂತರದಲ್ಲಿ ಸುತ್ತುತ್ತವೆ. ನಿಮ್ಮ ಮುಂದೆ ಎತ್ತರದ ಕಟ್ಟಡಗಳು ಅಥವಾ ಮರಗಳಿದ್ದರೆ ಬುಧ ಮತ್ತು ಶನಿ ಗ್ರಹಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ವಾತಾವರಣದ ಪರಿಸ್ಥಿತಿಯೂ ಇದರ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ
ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ (ETV Bharat)

ಖಗೋಳಶಾಸ್ತ್ರಜ್ಞರ ಪ್ರಕಾರ, ಈ ಗ್ರಹಗಳನ್ನು ನೋಡಲು ಬಯಸುವರು ಫೆಬ್ರವರಿ 28 ರಂದು ಸೂರ್ಯಾಸ್ತದ ನಂತರ ಸುಮಾರು 25 ರಿಂದ 30 ನಿಮಿಷಗಳ ನಂತರ ದೂರದರ್ಶಕ ಅಥವಾ ವಿಶೇಷ ಬೈನಾಕ್ಯುಲರ್‌ಗಳೊಂದಿಗೆ ಪಶ್ಚಿಮ ಆಕಾಶದ ಕಡೆಗೆ ನೋಡಬೇಕು ಎಂದಿದ್ದಾರೆ.

ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ
ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ (ETV Bharat)

ಇಂಥದ್ದೇ ಖಗೋಳ ವಿಸ್ಮಯ ಮುಂದೆ 2028 ರ ಅಕ್ಟೋಬರ್ ಅಂತ್ಯದಲ್ಲಿ ಸಂಭವಿಸಲಿದೆ. ಆಗ ಸೂರ್ಯೋದಯಕ್ಕೆ ಮೊದಲು ಐದು ಗ್ರಹಗಳು ಒಟ್ಟಿಗೆ ಗೋಚರಿಸುತ್ತವೆ. 2034 ರ ಫೆಬ್ರವರಿ ಕೊನೆಯಲ್ಲಿ ಐದು ಗ್ರಹಗಳು ಸೂರ್ಯಾಸ್ತದ ನಂತರ ಮತ್ತೆ ಒಟ್ಟಿಗೆ ಗೋಚರಿಸಲಿವೆ, ಆಗಲೂ, ಶುಕ್ರ ಮತ್ತು ಬುಧವನ್ನು ಸ್ಪಷ್ಟವಾಗಿ ನೋಡುವುದು ಕಷ್ಟ ಎಂದು ಖಗೋಳಶಾಸ್ತ್ರಜ್ಞರು ವಿವರಿಸಿದ್ದಾರೆ.

ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ
ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ (ETV Bharat)

ಇಂದು ಖಗೋಳ ವಿಸ್ಮಯ ಇಲ್ಲ- ಐಐಎ: ಇಂದು ನಡೆಯಲಿದೆ ಎನ್ನಲಾಗುವ ಖಗೋಳ ವಿಸ್ಮಯ ಇರುವುದಿಲ್ಲ ಎಂದು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಹೇಳಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳು ಸುಳ್ಳು ಮತ್ತು ಉತ್ಪ್ರೇಕ್ಷೆಯಿಂದ ಕೂಡಿವೆ ಎಂದಿದೆ.

ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ
ಆಕಾಶದಲ್ಲಿ ಇಂದು ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ (ETV Bharat)

ಐಐಎ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಪುಟದಲ್ಲಿ ಬಿಡುಗಡೆ ಮಾಡಿದೆ ಎಂದು ಹೇಳಲಾಗುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದ್ದು, ಇದಕ್ಕೆ ಸಂಸ್ಥೆಯು ವಿವರಣೆ ನೀಡಿದೆ.

ಇವುಗಳನ್ನೂ ಓದಿ: