ETV Bharat / bharat

ಜೈಸಲ್ಮೇರ್​ನಿಂದ ಜಾಮ್​ನಗರ್​ಗೆ ಪ್ರಯಾಣ ಬೆಳಸಿದ ಟಿಫಾನಿ ಟ್ರಂಪ್​; ಸೋನಾರ್​ ಫೋರ್ಟ್​​ ಸೌಂದರ್ಯಕ್ಕೆ ಫಿದಾ!

ಭಾರತಕ್ಕೆ ಖಾಸಗಿ ಭೇಟಿ ನೀಡಿರುವ ಟಿಫಾನಿ ಟ್ರಂಪ್​, ದೇಶದ ಪ್ರಮುಖ ತಾಣಗಳಿಗೆ ಭೇಟಿ ಕೊಡುತ್ತಿದ್ದಾರೆ.

Tiffany Trump departs Jaisalmer for Jamnagar, calls Sonar Fort "incredible"
ಟಿಞಆನಿ ಟ್ರಂಪ್​ (ANI)
author img

By ANI

Published : June 1, 2026 at 1:41 PM IST

2 Min Read
Choose ETV Bharat

ಜೈಸಲ್ಮೇರ್ (ರಾಜಸ್ಥಾನ): ಭಾರತ ಪ್ರವಾಸ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪುತ್ರಿ ಟಿಫಾನಿ ಟ್ರಂಪ್​ ಇಂದು ಜೈಸಲ್ಮೇರ್​ನಿಂದ ಖಾಸಗಿ ವಿಮಾನದಲ್ಲಿ ಗುಜರಾತ್​ನ ಜಾಮ್​ನಗರದವರೆಗೂ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ, ಅವರ ಜೊತೆಗೆ ಪತಿ ಮೈಕೆಲ್​ ಬೌಲೋಸ್ ಮತ್ತು ಭಾರತದಲ್ಲಿನ ಯುಎಸ್ ರಾಯಭಾರಿ ಸರ್ಗಿಯೋ ಗೋರ್ ಜೊತೆಯಾಗಿದ್ದಾರೆ.

ಟಿಫಾನಿ ಮತ್ತು ಬೌಲೋಸ್​ ನಿರ್ಗಮನದ ವೇಳೆ ಜೈಸಲ್ಮೇರ್​ ಜಿಲ್ಲಾಡಳಿತ ಮತ್ತು ಇತರ ಅಧಿಕಾರಿಗಳು ಜೈಸಲ್ಮೇರ್​ ವಿಮಾನ ನಿಲ್ದಾಣದಲ್ಲಿ ಅವರಿಗೆ ಆತ್ಮೀಯ ಬಿಳ್ಕೋಡುಗೆ ಕೊಟ್ಟರು.

ಮೈಕೆಲ್​ ಬೌಲೋಸ್ (ANI)
ಟಿಫಾನಿ ಟ್ರಂಪ್​(ANI)


ಈ ವೇಳೆ, ಮರುಭೂಮಿ ನಗರವಾಗಿರುವ ಜೈಸಲ್ಮೇರ್​ನ ಸೋನಾರ್​​ ಕೋಟೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಟಿಫಾನಿ, ಇದೊಂದು ಅದ್ಭುತ ಎಂದು ಬಣ್ಣಿಸಿದರು. ಜೈಪುರದಲ್ಲಿನ ಭಾರೀ ಶಾಖದ ಪರಿಸ್ಥಿತಿ ಹಿನ್ನೆಲೆ ಟಿಫಾನಿ ಪ್ರವಾಸದ ವೇಳಾಪಟ್ಟಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಮುಂಚಿ ನಿಗದಿಯಾದಂತೆ ಟಿಫಾನಿ ಸೋಮವಾರ ಸಂಜೆ 4ಕ್ಕೆ ಜೈಸಲ್ಮೇರ್​ನಿಂದ ಹೊರಡಬೇಕಿತ್ತು. ಆದರೆ, ಇದೀಗ ಬದಲಾದ ವೇಳಾಪಟ್ಟಿಯಿಂದಾಗಿ ಬೆಳಗ್ಗೆಯೇ ಅವರು ಅಲ್ಲಿಂದ ಹೊರಟಿದ್ದಾರೆ. ಪರಿಣಾಮವಾಗಿ ಅವರು ಜೈಸಲ್ಮೇರ್​ನ ಪ್ರಮುಖ ಆಕರ್ಷಣೀಯ ಸ್ಥಳಗಳಾದ ಗಡಿಸಾರ ಲೇಕ್​ ಮತ್ತು ಪಟ್ವಾನ್​ ಕಿ ಹವೇಲಿಯನ್ನು ವೀಕ್ಷಿಸಲು ಸಾಧ್ಯವಾಗಿಲ್ಲ.

ಐತಿಹಾಸಿಕ ಪಾರಂಪರಿಕ ತಾಣಕ್ಕೆ ಭೇಟಿ: ಆದಾಗ್ಯೂ ಅವರು ಭಾನುವಾರ ಜೈಸಲ್ಮೇರ್​ ಪ್ರಮುಖ ಪಾರಂಪರಿಕ ತಾಣಕ್ಕೆ ಭೇಟಿ ನೀಡಿದ್ದು, ಇಲ್ಲಿನ ಪ್ರಖ್ಯಾತ ಸೋನಾರ್​ ಕೋಟೆಗೆ ಭೇಟಿ ನೀಡಿದರು. ಟಿಫಾನಿ ಅವರ ಈ ಭೇಟಿಯು ಭಾರಿ ಗಮನ ಸೆಳೆದಿದ್ದು, ಅವರು ಜಾಮ್​ನಗರಕ್ಕೆ ಪ್ರಯಾಣ ಬೆಳಸುವುದಕ್ಕೂ ಮೊದಲು, ಸ್ಥಳೀಯ ಅಧಿಕಾರಿಗಳು ಗೋಲ್ಡನ್ ಸಿಟಿಯಲ್ಲಿ ಅವರಿಗೆ ಬೇಕಾದ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದರು.

ಶನಿವಾರ ಆಗ್ರಾಕ್ಕೆ ಭೇಟಿ ನೀಡಿದ್ದ ಟಿಫಾನಿ, ತಾಜ್​ ಮಹಲ್​ ಮುಂದೆ ನಿಂತು ಪತಿ ಬೌಲೋಸ್ ಜೊತೆಗೆ ಫೋಟೋಗೆ ಫೋಸ್​ ನೀಡಿದ್ದರು. ಈ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಅವರು, ಅದ್ಬುತ ತಾಜ್​ ಮಹಲ್​ ಎಂದು ಶೀರ್ಷಿಕೆ ನೀಡಿದ್ದರು.

ಶನಿವಾರ ಮಧ್ಯಾಹ್ನ ತಾಜ್​ಮಹಲ್​ನಲ್ಲಿ ಕಾಲ ಕಳೆದ ಇಬ್ಬರೂ 17ನೇ ಶತಮಾನದ ಐತಿಹಾಸಿಕ ಸ್ಮಾರಕ ವಿನ್ಯಾಸದ ಬಗ್ಗೆ ಅನ್ವೇಷಣೆ ನಡೆಸಿದರು.

ಭಾರತಕ್ಕೆ ಖಾಸಗಿಯಾಗಿ ಭೇಟಿ ನೀಡಿರುವ ಟ್ರಂಪ್​ ಪುತ್ರಿ ಟಿಫಾನಿ, ಭಾರತದ ಪ್ರಮುಖ ತಾಣಗಳಿಗೆ ಭೇಟಿ ಅಲ್ಲಿನ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಶುಕ್ರವಾರ ಅಕ್ಷರಧಾಮದಿಂದ ತಮ್ಮ ಪ್ರವಾಸ ಆರಂಭಿಸಿದ ಅವರು, ಅಲ್ಲಿನ ವಾಸ್ತುಶಿಲ್ಪಕ್ಕೆ ಕ್ಲೀನ್ ಬೌಲ್ಡ್ ಆದರು. ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು, ಆ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಭಾರತ ಪ್ರವಾಸದಲ್ಲಿ ಟ್ರಂಪ್​ ಪುತ್ರಿ; ಅಕ್ಷರಧಾಮ ದೇಗುಲಕ್ಕೆ ಪತಿಯೊಂದಿಗೆ ಟಿಫಾನಿ ಭೇಟಿ