ETV Bharat / bharat

ಭಾರತ ಪ್ರವಾಸದಲ್ಲಿ ಟ್ರಂಪ್​ ಪುತ್ರಿ; ಅಕ್ಷರಧಾಮ ದೇಗುಲಕ್ಕೆ ಪತಿಯೊಂದಿಗೆ ಟಿಫಾನಿ ಭೇಟಿ

ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಟಿಫಾನಿ ಟ್ರಂಪ್​, ಅಕ್ಷರಧಾಮ ದೇಗುಲದ ಅನುಭವವನ್ನು ಬಣ್ಣಿಸಿದ್ದು, ಇದು ಅದ್ಬುತವಾಗಿದ್ದು ಎಂದು ಇಲ್ಲಿನ ಸಾಂಸ್ಕೃತಿಕ ವೈಭವವನ್ನು ಮೆಚ್ಚಿದ್ದಾರೆ.

Tiffany Trump and her husband on India tour
ಟ್ರಂಪ್​ ಪುತ್ರಿ- ಅಳಿಯ ಭಾರತ ಪ್ರವಾಸ (ANI)
author img

By ANI

Published : May 30, 2026 at 1:56 PM IST

2 Min Read
Choose ETV Bharat

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಗಳು ಟಿಫಾನಿ ಟ್ರಂಪ್ ಮತ್ತು ಅವರ ಅಳಿಯ ಮೈಕೆಲ್ ಬೌಲೋಸ್ ಭಾರತಕ್ಕೆ ಭೇಟಿ ನೀಡಿದ್ದು, ಇದು ಸಂಪೂರ್ಣ ಖಾಸಗಿ ಭೇಟಿಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡಿದ ದಂಪತಿ ಈ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಂಸ್ಕೃತಿಕ ಭೇಟಿ ಎಂದಿದ್ದಾರೆ.

ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಟಿಫಾನಿ, ಅಕ್ಷರಧಾಮ ದೇಗುಲದ ಅನುಭವವನ್ನು ಬಣ್ಣಿಸಿದ್ದು, ಇದು ಅದ್ಬುತವಾಗಿದ್ದು ಎಂದು ಇಲ್ಲಿನ ಸಾಂಸ್ಕೃತಿಕ ವೈಭವವನ್ನು ಮೆಚ್ಚಿದ್ದಾರೆ. ಟಿಫಾನಿ ಪ್ರವಾಸಕ್ಕೆ ಪತಿ ಮೈಕೆಲ್​ ಮತ್ತು ಅವರ ಸ್ನೇಹಿತರು ಜೊತೆಯಾಗಿದ್ದಾರೆ.

ಸ್ವಾಮಿನಾರಾಯಣ ಅಕ್ಷರಧಾಮ ಕೂಡ ಟ್ರಂಪ್​ ಪುತ್ರಿಯ ಭೇಟಿಯನ್ನು ಅಧಿಕೃತಗೊಳಿಸಿ ಎಕ್ಸ್ ಜಾಲತಾಣದಲ್ಲಿ​ ಪೋಸ್ಟ್​ ಮಾಡಿದ್ದು, ಈ ಭೇಟಿಯನ್ನು ಅವರು, ಸುಂದರ ಸಾಂಸ್ಕೃತಿಕ ಮತ್ತು ಪರಂಪರೆಯ ಅನ್ವೇಷಣೆಯ ದಿನ ಅಂತಾ ಕರೆದಿದ್ದಾರೆ. ಟಿಫಾನಿ ಟ್ರಂಪ್​ ಮತ್ತು ಮೈಕೆಲ್​ ಬೌಲೋಸ್​ ಹಾಗೂ ಅವರ ಸ್ನೇಹಿತರು ಇಂದು ದೇಗುಲಕ್ಕೆ ಭೇಟಿ ನೀಡಿದ್ದು, ಅಲ್ಲಿ ತಮಗೆ ಸ್ವಾಗತ ನೀಡಲಾಯಿತು ಎಂದು ಬರೆದುಕೊಂಡಿದ್ದಾರೆ.

ಭಾರತಕ್ಕೆ ಅಮೆರಿಕ ರಾಯಭಾರಿಯಾಗಿರುವ ಸರ್ಗಿಯೋ ಗೋರ್​ ಕೂಡ ಟಿಫಾನಿ ದಂಪತಿಯ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಭಾರತಕ್ಕೆ ಸ್ವಾಗತ ಎಂದಿದ್ದಾರೆ.

ಟಿಫಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಮಾಜಿ ಪತ್ನಿ ಮಾರ್ಲಾ ಮೇಪಲ್ಸ್ ದಂಪತಿಯ ನಾಲ್ಕನೇ ಮಗಳು. ಈಕೆಗೆ ಟ್ರಂಪ್​ ಅವರ ಇತರೆ ವೈವಾಹಿಕ ಸಂಬಂಧಗಳಿಂದಾಗಿ ಡೊನಾಲ್ಡ್ ಟ್ರಂಪ್ ಜೂನಿಯರ್, ಇವಾಂಕಾ ಟ್ರಂಪ್, ಎರಿಕ್ ಟ್ರಂಪ್ ಮತ್ತು ಬ್ಯಾರನ್ ಟ್ರಂಪ್ ಎಂಬ ನಾಲ್ವರು ಮಲಸಹೋದರಿಯರಿದ್ದಾರೆ.

ಟಿಫಾನಿ 2020ರಲ್ಲಿ ಜಾರ್ಜ್​ಟೌನ್​ ವಿಶ್ವವಿದ್ಯಾಲಯ ಕಾನೂನು ಕೇಂದ್ರದಿಂದ ಜೂರಿಸ್​ ಡಾಕ್ಟರ್​ ಪದವಿಯನ್ನು ಪಡೆದಿದ್ದಾರೆ. ಅಮೆರಿಕನ್-ಲೆಬನಾನಿನ ಉದ್ಯಮಿ ಮೈಕೆಲ್ ಬೌಲೋಸ್- ಟಿಫಾನಿ 2022ರ ನವೆಂಬರ್​ 12ರಂದು ವಿವಾಹವಾದರು.

ಟ್ರಂಪ್​​ ಆರೋಗ್ಯ ಅತ್ಯುತ್ತಮ: ಈ ನಡುವೆ ಡೊನಾಲ್ಡ್​​ ಟ್ರಂಪ್​ ತಮ್ಮ ವಾರ್ಷಿಕ ದೈಹಿಕ ಪರೀಕ್ಷೆಗೆ ಒಳಗಾಗಿದ್ದು, ಈ ಕುರಿತು ಅಮೆರಿಕ ಸರ್ಕಾರ ಹೊರಡಿಸಿರುವ ಹೇಳಿಕೆಯಲ್ಲಿ ಅಮೆರಿಕ ಅಧ್ಯಕ್ಷರು ಅತ್ಯುತ್ತಮ ಆರೋಗ್ಯ ಹೊಂದಿದ್ದಾರೆ ಎಂದು ತಿಳಿಸಿದೆ.

ಮಂಗಳವಾರ ಟ್ರಂಪ್​ ರೋಗನಿರ್ಣಯ ಅಧ್ಯಯನಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳ ಸಂಪೂರ್ಣ ವಿಮರ್ಶೆಗೆ ಒಳಗಾಗಿದ್ದಾರೆ. ಈ ಎಲ್ಲಾ ಮೌಲ್ಯಮಾಪನಗಳನ್ನು ಯುಎಸ್​ ಪ್ರಿವೆಂಟಿವ್ ಸರ್ವೀಸಸ್ ಟಾಸ್ಕ್ ಫೋರ್ಸ್ ಶಿಫಾರಸುಗಳಿಗೆ ಅನುಗುಣವಾಗಿ ನಡೆಸಲಾಗಿದೆ ಮತ್ತು ಸಮಗ್ರ ತಡೆಗಟ್ಟುವ ಆರೋಗ್ಯ ವಿಮರ್ಶೆಯ ಭಾಗವಾಗಿದೆ ಎಂದು ತಿಳಿಸಿದೆ.

ಟ್ರಂಪ್​ ಅತ್ಯುತ್ತಮ ಆರೋಗ್ಯ ಹೊಂದಿದ್ದು, ಅವರ ಹೃದಯ, ಶ್ವಾಸಕೋಶ, ನರ ವ್ಯವಸ್ಥೆ ಸೇರಿದಂತೆ ಒಟ್ಟಾರೆ ದೈಹಿಕ ಕಾರ್ಯಾಚರಣೆಗಳು ಉತ್ತಮವಾಗಿವೆ. ಅರಿವಿನ ಮತ್ತು ದೈಹಿಕ ಕಾರ್ಯಕ್ಷಮತೆಯು ಅತ್ಯುತ್ತಮವಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಇವುಗಳನ್ನೂ ಓದಿ:

ಅಧ್ಯಕ್ಷ ಟ್ರಂಪ್​ ಚೀನಾ ಪ್ರವಾಸದ ಬಗ್ಗೆ ಫ್ಯಾಕ್ಟ್​ ಶೀಟ್​ ಪ್ರಕಟ: ಉಭಯ ದೇಶಗಳ ನಡುವಿನ ಒಪ್ಪಂದಗಳೇನು?

ಥ್ಯಾಂಕ್ಯೂ ಇಂಡಿಯಾ... ಭಾರತದ ಸೌಂದರ್ಯಕ್ಕೆ ಇವಾಂಕಾ ಫಿದಾ, ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​!