ಟಾಪ್ 10 ರ್ಯಾಂಕಿಂಗ್ನಲ್ಲಿ 2 ರಾಜ್ಯಗಳ ಮೂವರು ವಿದ್ಯಾರ್ಥಿಗಳು; ಸಾಮಾಜಿಕ ಜಾಲತಾಣ, ನಕಾರಾತ್ಮಕ ಚಿಂತನೆಗಳಿಂದ ದೂರ ಉಳಿದು ಸಕ್ಸಸ್ ಕಂಡವರು!
ಕಳೆದ ಬಾರಿ ಕೇವಲ ಟಾಪ್ 10ರಲ್ಲಿ ಒಬ್ಬ ತೆಲುಗು ಅಭ್ಯರ್ಥಿ ಸ್ಥಾನ ಪಡೆದಿದ್ದ. ಆದರೆ, ಈ ಬಾರಿ ಮೂವರು ಈ ಸ್ಥಾನ ಪಡೆದುಕೊಂಡಿದ್ದಾರೆ.


Published : June 2, 2026 at 1:56 PM IST
ಹೈದರಾಬಾದ್: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ತೆಲುಗು ರಾಜ್ಯದ ವಿದ್ಯಾರ್ಥಿಗಳು ಟಾಪ್ 10ರೊಳಗಿನ ರ್ಯಾಂಕ್ನಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಇಲ್ಲಿ ವಿದ್ಯಾರ್ಥಿಗಳು ನಾಲ್ಕು, ಐದು ಮತ್ತು ಒಂಬತ್ತನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕಳೆದ ಬಾರಿ ತೆಲುಗು ರಾಜ್ಯ ಕೇವಲ 10ನೇ ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಮೂರು ಶ್ರೇಯಾಂಕಗಳನ್ನು ಪಡೆದು ಸಂತಸ ಪಡುತ್ತಿದೆ.
ಹೈದರಾಬಾದ್‌ನ ಮೋಹಿತ್ ಶೇಖರ್ ಶುಕ್ಲಾ 360 ಅಂಕಗಳಲ್ಲಿ 319 ಅಂಕಗಳನ್ನು ಗಳಿಸುವ ಮೂಲಕ 4ನೇ ರ‍್ಯಾಂಕ್ ಪಡೆದಿದ್ದು, ತೆಲುಗು ರಾಜ್ಯದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಕುಚಿ ಸಂದೀಪ್ 318 ಅಂಕಗಳೊಂದಿಗೆ 5 ನೇ ರ‍್ಯಾಂಕ್ ಪಡೆದರೆ, ಮೆಡಿಸೆಟ್ಟಿ ನಾಗ ಸಹರ್ಷ 312 ಅಂಕಗಳೊಂದಿಗೆ 9ನೇ ರ‍್ಯಾಂಕ್ ಪಡೆದಿದ್ದಾರೆ.
ಐಐಟಿ ರೂರ್ಕಿ ಸೋಮವಾರ ಬೆಳಗ್ಗೆ ಜೆಇಇ ಅಡ್ವಾನ್ಸ್ಡ್-2026 ಫಲಿತಾಂಶಗಳನ್ನು ಬಿಡುಗಡೆ ಮಾಡಿತು. ಶುಭಂ ಕುಮಾರ್ 330 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದರು.
ಹೆಚ್ಚಿನ ಕಟ್ಆಫ್ ಅಂಕ: ಈ ಬಾರಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನುಗಳಿಸಿ ಉತ್ತೀರ್ಣರಾದ 2.50 ಲಕ್ಷ ಜನರಲ್ಲಿ 1,87,389 ಜನರು ಅಡ್ವಾನ್ಸ್ಡ್ ಬರೆಯಲು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 1,79,694 ಜನರು ಪರೀಕ್ಷೆ ಎದುರಿಸಿದ್ದರು. ಅವರಲ್ಲಿ 56,880 ವಿದ್ಯಾರ್ಥಿಗಳು ಜೆಇಎಸ್ಎ ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಅವರಲ್ಲಿ 46,773 ಹುಡುಗರು ಮತ್ತು 10,107 ಹುಡುಗಿಯರು. ಕಳೆದ ವರ್ಷ, ಅರ್ಹತೆ ಪಡೆದವರ ಸಂಖ್ಯೆ 54,378 ಆಗಿದ್ದರೆ, ಈ ಬಾರಿ ಅದು 2,502 ರಷ್ಟು ಹೆಚ್ಚಾಗಿದೆ. ಈ ಬಾರಿ, ಕಟ್ಆಫ್ ಅಂಕಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಕಳೆದ ವರ್ಷ, ಸಾಮಾನ್ಯ ವರ್ಗಕ್ಕೆ 360 ಅಂಕಗಳಲ್ಲಿ 74 ಅಂಕಗಳನ್ನು ಕಟ್ಆಫ್ ಆಗಿ ನಿಗದಿಪಡಿಸಲಾಗಿತ್ತು. ಈ ಬಾರಿ ಅದು 92ಕ್ಕೆ ಏರಿದೆ. ಒಬಿಸಿ - 82, ಇಡಬ್ಲ್ಯೂಎಸ್-82 ಎಸ್‌ಸಿ ಮತ್ತು ಎಸ್‌ಟಿ 46 ಅಂಕಗಳನ್ನು ನಿಗದಿಪಡಿಸಲಾಗಿದೆ. ಆ ಅಂಕಗಳನ್ನು ಗಳಿಸಿದವರು ಮಾತ್ರ ಐಐಟಿಗಳಲ್ಲಿ ಸೀಟುಗಳನ್ನು ಪಡೆಯಲು ಜೋಶಾ ಕೌನ್ಸೆಲಿಂಗ್ ಮೂಲಕ ಸೀಟು ಆಯ್ಕೆ ಪ್ರಕ್ರಿಯೆ ಸಾಗಲಿದೆ.
8 ರಿಂದ 10 ಗಂಟೆಗಳ ಸಿದ್ಧತೆ: ಮೊದಲ ರ್ಯಾಂಕ್ಗಳಿಸಿರುವ ಬಿಹಾರದ ಗಯಾ ಮೂಲದ ಶುಭಂ ಕುಮಾರ್ ಮಾತನಾಡಿ, ತಂದೆ ಹಾರ್ಡ್ವೇರ್ ಉದ್ಯಮಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಕೋಟಾದ ರಾಜಸ್ಥಾನದಲ್ಲಿ ತರಬೇತಿ ಪಡೆದಿದ್ದು, ಮೊದಲ ಬಾರಿಗೆ ನಾನು ಮೊದಲ ಶ್ರೇಯಾಂಕದಲ್ಲಿ ಉತ್ತೀರ್ಣನಾಗಿದ್ದೇನೆ. ಸಾಮಾಜಿಕ ಮಾಧ್ಯಮಗಳಿಂದ ದೂರಾವಾಗಿದ್ದ ನಾನು ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ನಕಾರಾತ್ಮಕ ಸುದ್ದಿಗಳ ನಿರ್ಲಕ್ಷ್ಯ ಮಾಡುತ್ತಿದ್ದ ನಾನು ನನ್ನ ಪೋಷಕರಿಗೆ ಕರೆ ಮಾಡಲು ಮಾತ್ರ ಫೋನ್ ಬಳಕೆ ಮಾಡುತ್ತಿದ್ದೆ. ಇದರ ಹೊರತಾಗಿ ಓದಿನ ಕಡೆ ಮಾತ್ರ ನನ್ನ ಗಮನ ಇತ್ತು. ಭಾನುವಾರ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಡುತ್ತಿದ್ದೆ. ಒತ್ತಡಕ್ಕೆ ಒಳಗಾದಾಗ 10 ನಿಮಿಷ ಧ್ಯಾನ ಮಾಡುತ್ತಿದ್ದೆ ಎಂದು ತನ್ನ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾನೆ.
ಅಮ್ಮನ ಪ್ರೋತ್ಸಾಹ, ಸಾಮಾಜಿಕ ಜಾಲತಾಣದಿಂದ ದೂರ ಇದ್ದು ಈ ಸಾಧನೆ: 4ನೇ ರ‍್ಯಾಂಕ್ ಪಡೆದಿರುವ ಮೋಹಿತ್ ಶೇಖರ್ ಶುಕ್ಲಾ ಮಾತನಾಡಿ, ಹೈದರಾಬಾದ್ನಲ್ಲಿ ನೆಲೆಸಿದ್ದು, ನನ್ನ ಸಹೋದರ ಐಐಟಿ ಬಾಂಬೆಯಲ್ಲಿ ಎರಡನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದು, ನಾನು ಕೂಡ ಕಂಪ್ಯೂಟರ್ ಸೈನ್ಸ್ ಸೇರುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾನೆ. ಸಾಮಾಜಿಕ ಜಾಲತಾಣದಿಂದ ದೂರವೇ ಇದ್ದ ಮೋಹಿತ್ಗೆ ಅಮ್ಮನ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ ಎಂದು ಹೇಳಿಕೊಂಡಿದ್ದಾರೆ.
20ರೊಳಗೆ ರ‍್ಯಾಂಕ್ ಪಡೆಯುವ ಕನಸಿತ್ತು- ಕುಚಿ ಸಂದೀಪ್: ವಿಶಾಖಪಟ್ಟಣಂ ಮೂಲಕ ಕುಚಿ ಸಂದೀಪ್ ಜೆಇಇ ಅಡ್ವಾನ್ಸ್‌ಡ್‌ನಲ್ಲಿ 5ನೇ ರ‍್ಯಾಂಕ್ ಬಂದಿದ್ದು, ಈತನ ತಂದೆ ಫಾರ್ಮಾ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ತಾಯಿ ಗೃಹಿಣಿ. ಹೈದರಾಬಾದ್ನಲ್ಲಿ ಕಾಲೇಜ್ಗೆ ಸೇರುವಾಗಲೇ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಓದುವ ಗುರಿಯನ್ನು ಹೊಂದಿದ್ದೆ. ಮೇನ್ಸ್ನಲ್ಲಿ 37ನೇ ಶ್ರೇಯಾಂಕ ಪಡೆದಿದ್ದು, ಅಡ್ವಾನ್ಸ್‌ಡ್‌ನಲ್ಲಿ 20ರೊಳಗೆ ರ‍್ಯಾಂಕ್ ಪಡೆಯುವ ಇಚ್ಛೆ ಹೊಂದಿದ್ದು, ಇದೀಗ 5ನೇ ರ‍್ಯಾಂಕ್ ಪಡೆದುಕೊಂಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಸ್ಟಾರ್ಟ್‌ಅಪ್ ಸ್ಥಾಪಿಸುವ ಗುರಿ: 9ನೇ ರ್ಯಾಂಕ್ಗಳಿಸಿರುವ ಮೆದಿಸೆಟ್ಟಿ ನಾಗ ಸಹರ್ಷ ಮಾತನಾಡಿ, ವಿಶಾಖಪಟ್ಟಣಂ ಜಿಲ್ಲೆಯ ಪೆಡುರ್ತಿ ಬಳಿಯ ಸೂರ್ಯನಗರ್ ನನ್ನ ಮೂಲ. ತಂದೆ ಅಪ್ಪರಾವ್ ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದು, ತಾಯಿ ನಾಗಾ ರಾಜೇಶ್ವರಿ ಗೃಹಿಣಿ. ವಿಶಾಖಪಟ್ಟಣಣಲ್ಲಿ ಓದಿ 595 ಅಂಕ ಪಡೆದ ನಾನು ಇಂಟರ್ ಹೈದರಾಬಾದ್ ಕಾಲೇಜಿನಲ್ಲಿ 988 ಅಂಕ ಗಳಿಸಿದ್ದೆ. ನನ್ನ ಶಿಕ್ಷಕರ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಯೋಜಿತ ರೀತಿಯಲ್ಲಿ ಅಧ್ಯಯನ ಮಾಡುವ ಮೂಲಕ ನಾನು ಈ ರ‍್ಯಾಂಕ್ ಪಡೆದುಕೊಂಡಿದ್ದೇನೆ. ಮೊದಲಿನಿಂದಲೂ ನನ್ನ ಕನಸು ಐಐಟಿ ಬಾಂಬೆಗೆ ಸೇರುವುದಾಗಿತ್ತು. ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುವುದು. ಭವಿಷ್ಯದಲ್ಲಿ ಒಂದು ಸ್ಟಾರ್ಟ್‌ಅಪ್ ಸ್ಥಾಪಿಸುವುದು ನನ್ನ ಗುರಿಯಾಗಿದೆ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:
JEE ADVANCED 2026: ಇಂದಿನಿಂದ ಜೋಸಾ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭ, ಐಐಟಿ ಬಾಂಬೆ ಮೇಲೆ ಹೆಚ್ಚಿನವರ ಕಣ್ಣು
ಆಂಧ್ರ - ತೆಲಂಗಾಣದ ಜೆಇಇ ಅಡ್ವಾನ್ಸಡ್ಗೆ ಅರ್ಹತೆ ಪಡೆದುಕೊಂಡ 10 ಸಾವಿರ ವಿದ್ಯಾರ್ಥಿಗಳು
ಜೆಇಇ ಅಡ್ವಾನ್ಸ್‌ಡ್‌ನಲ್ಲಿ ಟಾಪ್ 100 ರ‍್ಯಾಂಕ್‌ಗಳಲ್ಲಿ ಸರಿಸುಮಾರು 25 ರಿಂದ 30 ರ‍್ಯಾಂಕ್‌ಗಳನ್ನು ತೆಲುಗು ರಾಜ್ಯಗಳ ವಿದ್ಯಾರ್ಥಿಗಳು ಹೊಂದಿದ್ದಾರೆ. ಐಐಟಿ ರೂರ್ಕಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಐಐಟಿ ಮದ್ರಾಸ್ ವಲಯದ 35 ವಿದ್ಯಾರ್ಥಿಗಳು ಟಾಪ್ 100 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ವಲಯವು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಸಹ ಒಳಗೊಂಡಿದೆ. ಜೊತೆಗೆ ತಮಿಳುನಾಡು, ಪುದುಚೇರಿ ಮತ್ತು ಕೇರಳವನ್ನು ಒಳಗೊಂಡಿದೆ.
ಕಳೆದ ವರ್ಷ ಮದ್ರಾಸ್ ವಲಯದ 23 ವಿದ್ಯಾರ್ಥಿಗಳು ಟಾಪ್ 100 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದರೆ, ಈ ವರ್ಷ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಬಾರಿ ಮದ್ರಾಸ್ ವಲಯದ 174 ವಿದ್ಯಾರ್ಥಿಗಳು ಟಾಪ್ 500 ರ‍್ಯಾಂಕ್‌ಗಳನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಕನಿಷ್ಠ 125 ರಿಂದ 150 ವಿದ್ಯಾರ್ಥಿಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಂದವರು ಎಂದು ತಜ್ಞರು ಅಂದಾಜಿಸಿದ್ದಾರೆ.
ಒಟ್ಟಾರೆಯಾಗಿ, ಐಐಟಿ ಮದ್ರಾಸ್ ವಲಯದಿಂದ 14,294 ಅಭ್ಯರ್ಥಿಗಳು ಐಐಟಿಗಳಲ್ಲಿ ಸೀಟುಗಳಿಗೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಈ ಅರ್ಹ ಅಭ್ಯರ್ಥಿಗಳಲ್ಲಿ ಕನಿಷ್ಠ 10,000 ತೆಲುಗು ರಾಜ್ಯಗಳವರು ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರತಿ ವರ್ಷ, ತೆಲುಗು ರಾಜ್ಯಗಳ ವಿದ್ಯಾರ್ಥಿಗಳು ಐಐಟಿಗಳಲ್ಲಿ ಲಭ್ಯವಿರುವ ಸೀಟುಗಳಲ್ಲಿ ಸರಿಸುಮಾರು ಶೇ 18–20 ರಷ್ಟನ್ನು ಪಡೆಯುತ್ತಾರೆ. ಈ ವರ್ಷ, ಐಐಟಿಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳ ಸಂಖ್ಯೆ 18,500 ತಲುಪುವ ನಿರೀಕ್ಷೆಯಿದೆ. ಇವುಗಳಲ್ಲಿ, ನಮ್ಮ ಪ್ರದೇಶದ ಒಟ್ಟು 3,000 ರಿಂದ 4,000 ವಿದ್ಯಾರ್ಥಿಗಳು ಐಐಟಿಗಳಲ್ಲಿ ಪ್ರವೇಶ ಪಡೆಯುವ ನಿರೀಕ್ಷೆಯಿದೆ.

