ಮಂಜುವಿರಟ್ಟು ಸ್ಪರ್ಧೆ: ಗೂಳಿಗಳು ತಿವಿದು ಮೂವರು ಸ್ಥಳದಲ್ಲೇ ಸಾವು, 75ಕ್ಕೂ ಹೆಚ್ಚು ಜನರಿಗೆ ಗಾಯ
ತಮಿಳುನಾಡಿನಲ್ಲಿ ನಡೆದ ಮಂಜುವಿರಟ್ಟು ಸ್ಪರ್ಧೆಯಲ್ಲಿ ಗೂಳಿಗಳು ತಿವಿದಿದ್ದರಿಂದ ಮೂವರ ಸಾವು ಮೃತಪಟ್ಟಿದ್ದಾರೆ.

Published : March 3, 2026 at 1:26 PM IST
ಶಿವಗಂಗಾ(ತಮಿಳುನಾಡು): ಮಾಸಿ ಮಾಗಂ ಹಬ್ಬದ ಪ್ರಯುಕ್ತ ಸೋಮವಾರ ನಡೆದ ಮಂಜುವಿರಟ್ಟು (ಗೂಳಿ ಬೆನ್ನಟ್ಟುವ ಸ್ಪರ್ಧೆ)ಯಲ್ಲಿ ಗೂಳಿಗಳು ತಿವಿದಿದ್ದರಿಂದ ರಾಜಸ್ಥಾನದ ಮೂಲದ ವ್ಯಕ್ತಿ ಸೇರಿದಂತೆ ಮೂವರು ಸಾವನ್ನಪ್ಪಿ, 75 ಜನರು ಗಾಯಗೊಂಡ ಘಟನೆ ನಡೆದಿದೆ. ರಾಜಸ್ಥಾನದ ಐಸ್ ಕ್ರೀಮ್ ಮಾರಾಟಗಾರ ಜಮ್ಮುಲಾಲ್ ಲಾಲ್ಜಿ, ನಟ್ಟರ್ ಮಂಗಲಂನ ರಾಮನಾಥನ್ ಮತ್ತು ಪುದುಕ್ಕೊಟ್ಟೈನ ರಾಜೇಂದ್ರನ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಪರ್ಧೆಯಲ್ಲಿ 600ಕ್ಕೂ ಹೆಚ್ಚು ಗೂಳಿಗಳನ್ನು ಬಿಡಲಾಗಿತ್ತು, ಈ ವೇಳೆ ಪ್ರೇಕ್ಷಕರಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ಈ ಘಟನೆಯಲ್ಲಿ ಪ್ರೇಕ್ಷಕರು ಮತ್ತು ಗೂಳಿಗಳನ್ನು ಪಳಗಿಸುವವರು ಸೇರಿದಂತೆ ಕನಿಷ್ಠ 75 ಜನರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 8 ಜನರನ್ನು ವಿಶೇಷ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳ ಗುರುತು ತಿಳಿದುಬಂದಿಲ್ಲ.
ಘಟನೆಯ ಬಗ್ಗೆ ಮಾಹಿತಿ ಸಿಕ್ಕಿ ತಕ್ಷಣ ತನಿಖೆಗಾಗಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಬಂತ್ತು. ಸ್ಪರ್ಧೆಯ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸರಿಯಾಗಿ ಮಾಡಲಾಗಿತ್ತೆ ಎಂದು ತಿಳಿಯಲು ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟು 112 ಗೂಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮಾಸಿ ಮಾಗಂ ಉತ್ಸವದ ಅಂಗವಾಗಿ ಮಂಜುವಿರಟ್ಟು ಗೂಳಿ ಬೆನ್ನಟ್ಟುವ ಸ್ಪರ್ಧೆಯು ವರ್ಷದಿಂದ ವರ್ಷಕ್ಕೆ ಜನರನ್ನು ಆಕರ್ಷಿಸುತ್ತಿದೆ. ಆದರೆ ಸೋಮವಾರದ ಘಟನೆಯು ಜನಪ್ರಿಯ ಉತ್ಸವದ ಸುರಕ್ಷತೆ ಸಂಬಂಧಿಸಿದಂತೆ ಕಳವಳವನ್ನು ಉಂಟು ಮಾಡಿದೆ.
ಇವುಗಳನ್ನೂ ಓದಿ:
- ದಿನ್ಹಾಟಾದ ಚಿಪ್ಸ್ ಕಾರ್ಖಾನೆಯಲ್ಲಿ ವಿದ್ಯುತ್ ಸ್ಪರ್ಶಿಸಿ 5 ಕಾರ್ಮಿಕರ ಸಾವು
- ಮಹಾರಾಷ್ಟ್ರ: ಸ್ಫೋಟಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ, 17 ಮಂದಿ ಸಾವು; ಪ್ರಧಾನಿಯಿಂದ ಪರಿಹಾರ ಘೋಷಣೆ
ಏನಿದು ಮಂಜುವಿರಟ್ಟು?: ಮಂಜುವಿರಟ್ಟು ತಮಿಳುನಾಡಿನ ಸಾಂಪ್ರದಾಯಿಕ ಎತ್ತಿನ ಓಟದ ಸ್ಪರ್ಧೆಯಾಗಿದೆ. ಜಲ್ಲಿಕಟ್ಟುನಂತೆಯೇ ಪೊಂಗಲ್( ಮಕರ ಸಂಕ್ರಾಂತಿ) ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಸಿದ್ಧ ಕ್ರೀಡೆಯಾಗಿದೆ. ಇಲ್ಲಿಯೂ ಸಹ ಹೋರಿಗಳನ್ನು ಹಿಡಿಯಲಾಗುತ್ತದೆ. ಯುವಕರು ಓಡಿಹೋಗುವ ಎತ್ತುಗಳ ಮೇಲೆ ಹಾರಿ, ಅವುಗಳ ದುಬ್ಬವನ್ನು ಹಿಡಿದು ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಬಿದ್ದು ಗಾಯಗೊಳ್ಳುವ ಸಂದರ್ಭಗಳಿರುತ್ತವೆ. ಒಮ್ಮೊಮ್ಮೆ ಸಾವುಗಳು ಸಂಭವಿಸಬಹುದು.
- ಮುಖ್ಯವಾಗಿ ತಮಿಳುನಾಡಿನ ಪೊಂಗಲ್ ಹಬ್ಬದ ಅವಧಿಯಲ್ಲಿ ಈ ಆಚರಣೆ ನಡೆಯುತ್ತದೆ.
- ಇದು ಗೂಳಿಗಳು ಮತ್ತು ಸಾಹಸಿಗರ ನಡುವೆ ನಡೆಯುವ ಒಂದು ಶಕ್ತಿ ಪ್ರದರ್ಶನವಾಗಿದೆ.
- ಈ ಸ್ಪರ್ಧೆಯು ಅತ್ಯಂತ ಅಪಾಯಕಾರಿಯಾಗಿದ್ದು, ಪ್ರತೀ ವರ್ಷ ಅನೇಕ ಜನರು ಈ ವೇಳೆ ಗಾಯಗೊಳ್ಳುತ್ತಾರೆ. ಸಾವುಗಳು ಸಹ ವರದಿಯಾಗುತ್ತವೆ.
- ಇದನ್ನು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಆಚರಿಸಿಕೊಂಡು ಬರಲಾಗುತ್ತದೆ.

