ETV Bharat / bharat

ಹೈದರಾಬಾದ್​: 21 ವರ್ಷದ ನರ್ಸ್​ ಭೀಕರ ಹತ್ಯೆ

ಹೈದರಾಬಾದ್​ನಲ್ಲಿ 21 ವರ್ಷದ ನರ್ಸ್​ ಮೇಲೆ ಅಪರಿಚಿತರು ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ATTACK ON NURSE
ಸಾಂದರ್ಭಿಕ ಚಿತ್ರ (ANI)
author img

By ETV Bharat Karnataka Team

Published : August 30, 2026 at 7:23 PM IST

1 Min Read
Choose ETV Bharat

ಹೈದರಾಬಾದ್(ತೆಲಂಗಾಣ): ಇಲ್ಲಿನ ಪಹಡಿಶರೀಫ್ ಪ್ರದೇಶದಲ್ಲಿ 21 ವರ್ಷದ ನರ್ಸ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತಳನ್ನು ವುಕೆ ಶಿರಿಷಾ ಎಂದು ಗುರುತಿಸಲಾಗಿದೆ. ಈಕೆ ತುಕ್ಕುಗುಡದ ಪ್ರೈಮ್ ಕೇರ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.

ತಮ್ಮ ಸ್ನೇಹಿತರೊಂದಿಗೆ ಆಸ್ಪತ್ರೆಯ ವಸತಿ ಕೊಠಡಿಗಳಲ್ಲಿ ವಾಸಿಸುತ್ತಿದ್ದರು. ಶಿರಿಷಾ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಮುಲಕಲಪಲ್ಲಿ ಮಂಡಲದ ಚೌಟಿಗುಡೆಮ್ ಗ್ರಾಮದವರಾಗಿದ್ದು, ಸುಮಾರು 7 ತಿಂಗಳ ಹಿಂದೆ ಸ್ನೇಹಿತೆ ಜೊತೆ ಹೈದರಾಬಾದ್‌ಗೆ ಬಂದು ಪ್ರೈಮ್ ಕೇರ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಿಷಾ ಬೆಳಿಗ್ಗೆಯಿಂದ ತನ್ನ ಕೋಣೆಯಿಂದ ಹೊರಗೆ ಬಂದಿರಲಿಲ್ಲ. ಹಲವಾರು ಬಾರಿ ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಿರಲಿಲ್ಲ. ನಂತರ ಆಕೆಯ ಸ್ನೇಹಿತರು ಕಿಟಕಿಯ ಮೂಲಕ ಕೋಣೆಗೆ ಪ್ರವೇಶಿಸಿದಾಗ ಆಕೆಯ ಮುಖದಲ್ಲಿ ರಕ್ತಸ್ರಾವದ ಗಾಯಗಳೊಂದಿಗೆ ಮೃತಳಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು ಶಿರಿಷಾಳ ಮೇಲೆ ಹಲ್ಲೆ ನಡೆಸಿ, ಹೊಡೆದು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸ್ ತಂಡ ಸಿಕ್ಕ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಶಂಷಾಬಾದ್ ಪೊಲೀಸರು ತಿಳಿಸಿದ್ದಾರೆ.

ಬಿಜೆಪಿಯಿಂದ ಪ್ರತಿಭಟನೆ: ನರ್ಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಭಾನುವಾರ ಪ್ರತಿಭಟನೆ ನಡೆಸಿದರು. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ನ
ಬಿಜೆಪಿ ನಾಯಕರು (ANI)

ಉಸ್ಮಾನಿಯಾ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿತು. ಸಂತ್ರಸ್ತೆಯ ಕುಟುಂಬ ಸದಸ್ಯರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ನ್ಯಾಯ ಸಿಗುವವರೆಗೆ ಮರಣೋತ್ತರ ಪರೀಕ್ಷೆಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.

ಪಹಡಿಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯ ತುಕ್ಕುಗುಡದಲ್ಲಿ ಸಂತ್ರಸ್ತೆಯ ಕೋಣೆಯೊಳಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ.

ಅಕ್ರಮ ನುಸುಳುಕೋರರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಆರೋಪಿಗಳನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇವುಗಳನ್ನೂ ಓದಿ: