ETV Bharat / bharat

ನಾಯಿಗಳಿಗೆ ಕಚ್ಚದಂತೆ ಯಾರಾದರೂ ಕೌನ್ಸೆಲಿಂಗ್​ ಮಾಡಬೇಕಿದೆ: ಬೆಳಗ್ಗೆ ನಾಯಿಗಳ ಮನಸ್ಥಿತಿ ಹೇಗಿರುತ್ತದೆ ಎಂದು ಯಾರಿಗೂ ತಿಳಿದಿಲ್ಲ: ಸುಪ್ರೀಂಕೋರ್ಟ್​

ನಾಯಿ ಕಡಿತದ ಘಟನೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ರಸ್ತೆಗಳಲ್ಲಿ ನಾಯಿಗಳು ಓಡಾಡದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದ್ದಾರೆ.

supreme-court-stray-dogs-hearing-justice-vikram-nath-kapil-sibal
ಪ್ರಾತಿನಿಧಿಕ ಚಿತ್ರ (PTI)
author img

By ETV Bharat Karnataka Team

Published : January 7, 2026 at 4:26 PM IST

|

Updated : January 7, 2026 at 4:57 PM IST

3 Min Read
Choose ETV Bharat

ನವದೆಹಲಿ: ನಾಯಿಗಳಿಗೆ ಕಚ್ಚದಂತೆ ಯಾರಾದರೂ ಕೌನ್ಸೆಲಿಂಗ್​ ಮಾಡಬೇಕಿದೆ, ಮುಂಜಾನೆಯ ಸಂದರ್ಭಗಳಲ್ಲಿ ನಾಯಿಗಳ ಮನಸ್ಥಿತಿ ಹೇಗಿರುತ್ತದೆ. ಅದು ಕಚ್ಚುತ್ತದೆಯಾ ಇಲ್ಲವೇ ಎಂಬುದನ್ನು ಯಾರು ಕೂಡ ಓದಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ.

ಬೀದಿ ನಾಯಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ವಿಕ್ರಂ ನಾಥ್​, ಸುದೀಪ್​ ಮೆಹ್ತಾ ಮತ್ತು ಎನ್​ ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ದ್ವಿಚಕ್ರ ವಾಹನ ಅಥವಾ ಬೈಸಿಕಲ್​ ಮೇಲೆ ವ್ಯಕ್ತಿ ಹೋಗುವಾಗ ಈ ಶ್ವಾನಗಳು ಕಚ್ಚುತ್ತವೆ ಅಥವಾ ಹಿಂಬಾಲಿಸುತ್ತವೆ. ಇದರಿಂದ ಆ ವ್ಯಕ್ತಿಗಳು ಕೆಳಗೆ ಬೀಳುವ ಅಥವಾ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ನ್ಯಾ, ವಿಕ್ರಂ ನಾಥ್​ ಗಮನಸಿದರು.

ಶ್ವಾನಗಳು ಬೀದಿಯಲ್ಲಿ ಓಡಾಡುವಾಗ ರಸ್ತೆಯಲ್ಲಿ ವಾಹನಗಳು, ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಹಾಗೂ ಸೈಕಲ್​ ಸವಾರಿ ಅಪಾಯಕಾರಿಯಾಗಿರುತ್ತದೆ. ನಾಯಿಗಳು ಕಚ್ಚುವುದು ಮಾತ್ರ ಸಮಸ್ಯೆಯಲ್ಲ. ನಾಯಿಗಳು ಸೈಕಲ್​ ಅಥವಾ ಮೋಟಾರ್​ ಬೈಕ್​ಗಳನ್ನು ಬೆನ್ನಟ್ಟುತ್ತವೆ. ಈ ರೀತಿ ನಿಮಗೂ ಆಗಿದ್ಯಾ ಎಂದು ಹಿರಿಯ ವಕೀಲರಾದ ಕಪಿಲ್​ ಸಿಬಲ್​ ಅವರನ್ನ ನ್ಯಾಯಮೂರ್ತಿಗಳು ಕೇಳಿದರು.

ಇದಕ್ಕೆ ಉತ್ತರಿಸಿದ ಕಪಿಲ್​ ಸಿಬಲ್​, ಎಲ್ಲ ನಾಯಿಗಳು ಈ ರೀತಿ ಮಾಡುವುದಿಲ್ಲ. ಇದಕ್ಕೆ ಗುರುತು ಕೂಡ ಮುಖ್ಯವಾಗುತ್ತದೆ ಎಂದರು. ಮುಂಜಾನೆ ಹೊತ್ತದಲ್ಲಿ ನಾಯಿಗಳ ಮನಸ್ಥಿತಿ ಹೇಗಿರುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ. ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೀಠ ಇದೇ ವೇಳೆ ಅಭಿಪ್ರಾಯಪಟ್ಟಿತು.

ನಾಯಿಗಳು ಕಾಪೌಂಡ್​ ಅಥವಾ ವಿಶ್ವವಿದ್ಯಾಲದೊಳಗೆ ಇರಬೇಕು. ನಾನು ಜೆಎನ್​ಯು ವಿಶ್ವವಿದ್ಯಾಲಯದಲ್ಲಿದ್ದಾಗ ಹಲವು ನಾಯಿಗಳಿದ್ದವು. ಆದರೆ, ನನಗೆ ಯಾವುದೇ ನಾಯಿಗಳು ಕಚ್ಚಿರಲಿಲ್ಲ ಎಂದು ಕಪಿಲ್​ ಸಿಬಲ್​ ನೆನಪಿಸಿಕೊಂಡರು. ಇದಕ್ಕೆ, ನಿಜಾವಾಗಿಯೂ ಎಂದು ಪ್ರಶ್ನಿಸಿದ ನ್ಯಾ. ಮೆಹ್ತಾ, ನಿಮ್ಮ ಮಾಹಿತಿ ಹಳೆಯದಾಗಿದೆ. ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಅನೇಕ ದಾಳಿ ಪ್ರಕರಣಗಳು ವರದಿಯಾಗಿವೆ. ನಾಯಿ ಕಡಿತ ಪ್ರಕರಣಗಳು ಕಡಿಮೆ ಮಾಡುವ ಕೆಲಸ ಆಗಬೇಕು. ಯಾರು ಕೂಡ ಬೀದಿಗಳಿಂದ ನಾಯಿಗಳನ್ನು ಓಡಿಸಿ, ಶೂಟ್​ ಮಾಡಿ ಎನ್ನುವುದಿಲ್ಲ ಎಂದರು.

ವೈಜ್ಞಾನಿಕ ಮಾದರಿಗೆ ಒತ್ತು: ವೈಜ್ಞಾನಿಕ ಮಾದರಿಯನ್ನು ಅಳವಡಿಸಿಕೊಂಡು ಈ ವಿಚಾರದ ಕುರಿತು ಗಮನ ಹರಿಸಬೇಕು. ಎಲ್ಲ ನಾಯಿಗಳಿಗೆ ಆಶ್ರಯ ಕಲಿಸುವುದು ಮಾತ್ರ ಪರಿಹಾರವಲ್ಲ. ನಾಯಿ ಕಡಿತವನ್ನು ನಿಭಾಯಿಸಲು ಮತ್ತು ಅಶಿಸ್ತಿನ ನಾಯಿಗಳ ಪುನರ್ವಸತಿಗೆ ಕಳುಹಿಸುವಂತೆ ಸಿಬಲ್​ ಹೇಳಿದರು.

ನಾಯಿಯನ್ನು ಪುನರ್ವಸತಿ ಕೇಂದ್ರಗಳಿಂದ ಬಿಟ್ಟ ನಂತರ ಕಚ್ಚಬಾರದು ಎಂಬ ಬಗ್ಗೆ ನಾಯಿಯನ್ನ ಕೌನ್ಸೆಲಿಂಗ್​ ಒಳಪಡಿಸುವುದು ಮಾತ್ರ ಬಾಕಿ ಇದೆ ಎಂದು ಮೆಹ್ತಾ ಹೇಳಿದರು.

ಬೀದಿ ನಾಯಿಗಳನ್ನು ಪುನರ್​ವಸತಿ ಕೇಂದ್ರಗಳಿಗೆ ಕಳುಹಿಸುವ ಕುರಿತು ವಿರೋಧ ವ್ಯಕ್ತಪಡಿಸಿ ಮಾತನಾಡಿದ ಸಿಬಲ್​, ತಿಹಾರ್​ ಜೈಲಿನಲ್ಲಿ ಖೈದಿಗಳಿಗೆ ಯಾವ ರೀತಿಯ ಆಹಾರ ನೀಡುತ್ತಾರೆ ಎಂಬುದು ಗೊತ್ತೇ, ಅಲ್ಲಿನ ವ್ಯವಸ್ಥೆ ಬಗ್ಗೆ ತಿಳಿದುಕೊಂಡರೆ ನಾಯಿ ಆಶ್ರಯ ತಾಣಗಳಲ್ಲಿ ಅವರಿಗೆ ಸಿಗುವ ಆಹಾರದ ಬಗ್ಗೆ ನಿಮಗೆ ತಿಳಿಯುತ್ತದೆ. ಎಲ್ಲಾ ನಾಯಿಗಳನ್ನು ಆಶ್ರಯ ಕೇಂದ್ರಗಳಲ್ಲಿ ಇಡುವುದು ಪರಿಹಾರವಲ್ಲ, ಅದು ದೈಹಿಕವಾಗಿ ಸಾಧ್ಯವಿಲ್ಲ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ. ಮನುಷ್ಯರಿಗೆ ಅಪಾಯಕಾರಿ, ಮತ್ತು ವೈಜ್ಞಾನಿಕ ವಿಧಾನದ ಮೂಲಕ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸಿಬಲ್ ವಾದಿಸಿದರು.

ನಾಯಿ ಮುಕ್ತವಾಗುವುದು ಹೇಗೆ: ಬೀದಿ ನಾಯಿಗಳ ಆಶ್ರಯ ತಾಣಗಳಿಗೆ ಎನ್​ಜಿಒಗಳು ಆಹಾರ ನೀಡುತ್ತವೆ. ನಮ್ಮ ಕಾಳಜಿ ಸಂಸ್ಥೆಗಳ ಪರವಾಗಿದೆ. ಅವು ಬೀದಿ ನಾಯಿಗಳಲ್ಲ. ಯಾಕೆ ನಾಯಿಗಳು ಕೋರ್ಟ್​ ಅಥವಾ ಯುನಿವರ್ಸಿಟಿ ಆವರಣದಲ್ಲಿರಬೇಕಾ? ನಿಯಮಗಳು ಪುನರ್ವಸತಿ ತಾಣಗಳಿಂದ ನಾಯಿಗಳನ್ನು ಅದೇ ಪ್ರದೇಶಕ್ಕೆ ಮರಳಿ ಬಿಡುಗಡೆ ಮಾಡಬೇಕು ಎಂದು ಹೇಳುತ್ತವೆ. ಹಾಗಾದರೆ ಸಂಸ್ಥೆಗಳು ನಾಯಿ ಮುಕ್ತವಾಗುವುದು ಹೇಗೆ? ಅವುಗಳನ್ನು ಬೀದಿಗಳಲ್ಲಿ ಬಿಡಬೇಕೇ? ಎಂದು ಪ್ರಶ್ನಿಸಿತು.

ಇಂದಿನ ವಿಚಾರಣೆಯನ್ನು ಮುಗಿಸಿದ ನ್ಯಾಯಾಲಯ ನಾಳೆಗೆ ಈ ವಿಚಾರಣೆಯನ್ನು ಮುಂದೂಡಿತು. ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿ ಕಡಿತವು ವಿಶೇಷವಾಗಿ ಮಕ್ಕಳಲ್ಲಿ ರೇಬೀಸ್‌ಗೆ ಕಾರಣವಾಗುತ್ತಿದೆ ಎಂಬ ಮಾಧ್ಯಮ ವರದಿಯ ಕುರಿತು ಜುಲೈ 28 ರಂದು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಇವುಗಳನ್ನೂ ಓದಿ:

ಬೀದಿ ನಾಯಿಗಳ ಸ್ಥಳಾಂತರಕ್ಕೆ ಸುಪ್ರೀಂಕೋರ್ಟ್​ ನಿರ್ದೇಶನ: ಶ್ವಾನಪ್ರಿಯೆ ರಮ್ಯಾ ಪ್ರತಿಕ್ರಿಯೆ ಏನು?

ಬೀದಿ ನಾಯಿಗಳಿಗೆ ಆಹಾರ ನೀಡುವ ವಿಚಾರ: ನವೆಂಬರ್ 7 ರಂದು ನಿರ್ದೇಶನಗಳನ್ನು ನೀಡಲಿರುವ ಸುಪ್ರೀಂ ಕೋರ್ಟ್

Last Updated : January 7, 2026 at 4:57 PM IST