ETV Bharat / bharat

ಕಬ್ಬಿನ ಜ್ಯೂಸ್​ ವ್ಯಾಪಾರಿಯಿಂದ ವಿಶ್ವಪರ್ಯಟನೆ: 10 ರಾಷ್ಟ್ರಗಳಿಗೆ ಭೇಟಿ, ಮುಂದೆ​ ಚೀನಾ ಟಾರ್ಗೆಟ್​

ದೇಶ ಸುತ್ತು ಕೋಶ ಓದು ಎಂಬ ಮಾತಿದೆ. ಇಲ್ಲೊಬ್ಬ ವ್ಯಕ್ತಿ ತನ್ನ 67ರ ಹರೆಯದರಲ್ಲಿ 10 ದೇಶಗಳನ್ನು ಸುತ್ತಾಡಿ ಬಂದಿದ್ದಾರೆ. ಇನ್ನೂ ಹಲವು ದೇಶಗಳಿಗೆ ಭೇಟಿ ನೀಡುವ ಇರಾದೆ ಹೊಂದಿದ್ದಾರೆ.

JUICE SELLER TRAVELS WORLD
ಕಬ್ಬಿನ ಜ್ಯೂಸ್​ ತಯಾರಿಸುತ್ತಿರುವ ಹಾಶಿಮ್​ (ANI)
author img

By ANI

Published : January 11, 2026 at 8:11 PM IST

2 Min Read
Choose ETV Bharat

ಕಣ್ಣೂರು (ಕೇರಳ): 'ದೇಶ, ವಿದೇಶಗಳನ್ನು ಸುತ್ತಬೇಕು. ಅದರಿಂದ ಬರೋ ಕಿಕ್ಕೇ ಬೇರೆ. ನೀನೂ ಸುತ್ತಾಡೋಕೆ ಶುರು ಮಾಡಿ ನೋಡು'. ಇಷ್ಟು ಹೇಳಿದ್ದೇ ತಡ. ಕಬ್ಬಿನ ಜ್ಯೂಸ್​ ವ್ಯಾಪಾರಿಯೊಬ್ಬ ಭಾರತದ ಹಲವು ಭಾಗ ಸೇರಿ ವಿಶ್ವದ 10 ರಾಷ್ಟ್ರಗಳನ್ನು ಸುತ್ತಾಡಿ ಬಂದಿದ್ದಾರೆ. ನೆಕ್ಸ್ಟ್​​ ಚೀನಾ ಟಾರ್ಗೆಟ್​​ ಅಂತೆ.

ಹೌದು. ಕಣ್ಣೂರಿನ ಜವಾಹರ್ ಮುನ್ಸಿಪಲ್ ಕ್ರೀಡಾಂಗಣದ ಮುಂದೆ ಕಬ್ಬಿನ ಜ್ಯೂಸ್​ ಮಾರಾಟ ಮಾಡುವ ಪಪ್ಪಿನಿಸೇರಿಯ ವಿ.ಪಿ. ಹಾಶಿಮ್ ಅವರು ತಮ್ಮ ಖುಷಿಗಾಗಿ ವಿಶ್ವಪರ್ಯಟನೆ ಆರಂಭಿಸಿದ್ದಾರೆ. ಕಳೆದ 13 ವರ್ಷಗಳಲ್ಲಿ ಅವರು 10 ರಾಷ್ಟ್ರಗಳು ಮತ್ತು ಭಾರತದ ಹಲವು ಭಾಗಗಳನ್ನು ಸುತ್ತಾಡಿ ಬಂದಿದ್ದಾರೆ.

ವಿದೇಶದಲ್ಲಿ ಪತ್ನಿ ಜೊತೆ ಹಾಶಿಮ್​
ವಿದೇಶದಲ್ಲಿ ಪತ್ನಿ ಜೊತೆ ಹಾಶಿಮ್​ (ANI)

ಮಾರೋದು ಜ್ಯೂಸ್​, ತಿರುಗೋದು ವಿಶ್ವ: ಜೀವನೋಪಾಯಕ್ಕಾಗಿ ಹಾಶಿಮ್​ ಅವರು ಕಣ್ಣೂರಿನ ಕ್ರೀಡಾಂಗಣದ ಮುಂದೆ ಕಬ್ಬಿನ ಜ್ಯೂಸ್​ ಮಾರಾಟ ಆರಂಭಿಸಿದರು. ಕಳೆದ 30 ವರ್ಷಗಳಿಂದ ಅವರು ಇದೇ ಕೆಲಸವನ್ನು ಮಾಡುತ್ತಿದ್ದಾರೆ. ದೊಡ್ಡ ಲಾಭವಲ್ಲದಿದ್ದರೂ, ಜೀವನ ನಡೆಸಲು ಈ ಕೆಲಸ ನೆರವಾಗಿದೆ.

ಯಾವೆಲ್ಲಾ ರಾಷ್ಟ್ರಗಳಿಗೆ ಭೇಟಿ? 67 ವರ್ಷದ ಹಾಶಿಮ್​ ಅವರು, ಕಳೆದ 13 ವರ್ಷಗಳಲ್ಲಿ 10 ರಾಷ್ಟ್ರಗಳ ಪರ್ಯಟನೆ ಮಾಡಿದ್ದಾರೆ. ಇಸ್ರೇಲ್, ಪ್ಯಾಲೆಸ್ಟೈನ್, ಜೋರ್ಡಾನ್, ಈಜಿಪ್ಟ್, ಇರಾಕ್, ಮಲೇಷ್ಯಾ, ಥೈಲ್ಯಾಂಡ್, ಅಜರ್​​ಬೈಜಾನ್​, ಟರ್ಕಿ ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದಾರೆ. ಪ್ರಯಾಣದ ಮೇಲಿನ ಉತ್ಸಾಹವನ್ನು ಜೀವಮಾನದ ಅನ್ವೇಷಣೆಯನ್ನಾಗಿ ಪರಿವರ್ತಿಸಿದ್ದಾರೆ.

ಕಬ್ಬಿನ ಜ್ಯೂಸ್ ​ವ್ಯಾಪಾರಿಯ ವಿಶ್ವಪರ್ಯಟನೆ
ಕಬ್ಬಿನ ಜ್ಯೂಸ್ ​ವ್ಯಾಪಾರಿಯ ವಿಶ್ವಪರ್ಯಟನೆ (ANI)

ಒಂದೆರಡು ದೇಶಗಳಿಗೆ ಪ್ರಯಾಣಿಸುವ ಸಣ್ಣ ಆಸೆಯೊಂದಿಗೆ ಆರಂಭವಾದ ಈ ಪ್ರಯಾಣ ಈಗ ದೊಡ್ಡ ಕನಸಾಗಿದೆ. ಇನ್ನಷ್ಟು ದೇಶಗಳಿಗೆ ಭೇಟಿ ನೀಡುವ ಇರಾದೆಯನ್ನು ಹಾಶಿಮ್​ ಹೊಂದಿದ್ದಾರೆ. ಮುಂದಿನ ಸಲ ನೆರೆರಾಷ್ಟ್ರ ಚೀನಾಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.

"ನಾನು ಈವರೆಗೂ ಇಸ್ರೇಲ್, ಪ್ಯಾಲೆಸ್ಟೈನ್, ಜೋರ್ಡಾನ್ ಸೇರಿ 10 ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಕೊನೆಯ ಬಾರಿಗೆ ಟರ್ಕಿಗೆ ಪ್ರಯಾಣಿಸಿದ್ದೆ. ಆ ರಾಷ್ಟ್ರ ಸುಂದರವಾಗಿದೆ. 3 ತಿಂಗಳ ನಂತರ, ಚೀನಾಕ್ಕೆ ಪತ್ನಿ ಮತ್ತು ಅಣ್ಣನ ಜೊತೆ ಪ್ರಯಾಣಿಸಲು ಯೋಜಿಸುತ್ತಿದ್ದೇನೆ" ಎಂದು ಹಾಶಿಮ್ ತಿಳಿಸಿದ್ದಾರೆ.

ಕಬ್ಬಿನ ಜ್ಯೂಸ್ ​ವ್ಯಾಪಾರಿಯ ವಿಶ್ವಪರ್ಯಟನೆ
ಕಬ್ಬಿನ ಜ್ಯೂಸ್ ​ವ್ಯಾಪಾರಿಯ ವಿಶ್ವಪರ್ಯಟನೆ (ANI)

ಊರು ಸುತ್ತಲು ಕಬ್ಬೇ ಆಧಾರ: ಕಬ್ಬಿನ ಜ್ಯೂಸ್​ ಮಾರಾಟದಿಂದ ಬರುವ ಹಣವನ್ನು ಉಳಿತಾಯ ಮಾಡಿ, ಅದನ್ನು ವಿದೇಶಗಳಿಗೆ ಸುತ್ತಾಡಲು ಬಳಸುತ್ತೇನೆ. ಯಾವುದೇ ದೇಶಕ್ಕೆ ಭೇಟಿ ನೀಡಿದಾಗಲೂ ನನ್ನ ಜೊತೆ ಪತ್ನಿ ಹಸೀನಾ ಇರುತ್ತಾರೆ. ಮೊದಲ ವಿದೇಶ ಪ್ರಯಾಣದ ಅನುಭವವು ಹೆಚ್ಚಿನ ಸಾಹಸಗಳಿಗೆ ಇಂಬು ನೀಡಿತು. ಭಾರತದ ಹಲವು ಪ್ರದೇಶಗಳಿಗೂ ಭೇಟಿ ನೀಡಿದ್ದೇನೆ ಎಂದು ಅವರು ಮಾಹಿತಿ ಹಂಚಿಕೊಂಡರು.

ವಿದೇಶದಲ್ಲಿ ಹಾಶಿಮ್​
ವಿದೇಶದಲ್ಲಿ ಹಾಶಿಮ್​ (ANI)

ಜೂನ್​ ಮತ್ತು ಜುಲೈ ತಿಂಗಳಲ್ಲಿ ಕಬ್ಬಿನ ವ್ಯಾಪಾರ ಇರುವುದಿಲ್ಲ. ಈ ವೇಳೆ ಮನೆಯಲ್ಲಿದ್ದಾಗ, ತನ್ನ ಅಣ್ಣನ ಜೊತೆ ಸಂವಹನ ನಡೆಸುತ್ತಿದ್ದಾಗ ವಿದೇಶ ಪರ್ಯಟನೆ ಬಗ್ಗೆ ಆತ ತಿಳಿಸಿದ. ಆತ ಪ್ರಯಾಣದ ಮಹತ್ವ ಮತ್ತು ಅದು ನೀಡುವ ಅನುಭವಗಳ ಬಗ್ಗೆ ಹೇಳಿದ. ಆತನ ಮಾತು ಕೇಳಿದ ಬಳಿಕ ನನ್ನಲ್ಲಿ ವಿಶ್ವ ಸುತ್ತುವ ಆಸೆ ಚಿಗುರೊಡೆಯಿತು. ಸಾಧ್ಯವಾದಾಗಲೆಲ್ಲಾ ಹೊಸ ಸ್ಥಳಗಳಿಗೆ ಭೇಟಿ ನೀಡಲು ಮುಂದುವರಿಸುತ್ತೇನೆ" ಎಂದು ಹಾಶಿಮ್​ ಹೇಳಿದರು.

ಇವುಗಳನ್ನೂ ಓದಿ: