ಜಾರ್ಖಂಡ್ನಲ್ಲಿ ನಕ್ಸಲರು v/s ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ: ಹಲವು ಮಾವೋವಾದಿಗಳ ಹತ?
ಜಾರ್ಖಂಡ್ನಲ್ಲಿ ಇಂದು ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಹಲವು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

Published : March 1, 2026 at 7:15 PM IST
ರಾಂಚಿ (ಜಾರ್ಖಂಡ್): ಇಲ್ಲಿನ ಸರಂದಾ ಅರಣ್ಯದಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಹಲವು ನಕ್ಸಲೀಯರು ಸಾವನ್ನಪ್ಪಿರುವ ವರದಿಗಳಿವೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಸ್ಫೋಟದ ನಂತರ ಎನ್‌ಕೌಂಟರ್: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಸರಂಡಾದ ದಟ್ಟ ಅರಣ್ಯದಲ್ಲಿ ಭಾನುವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ನಿಷೇಧಿತ ಸಿಪಿಐ (ಮಾವೋವಾದಿ) ನಡುವೆ ಭೀಕರ ಎನ್‌ಕೌಂಟರ್ ನಡೆಯಿತು.
ಪೊಲೀಸ್ ಪ್ರಧಾನ ಕಚೇರಿಯಿಂದ ಸಿಕ್ಕ ಮಾಹಿತಿಯ ಪ್ರಕಾರ, ಚೋಟಾನಾಗ್ರಾ ಮತ್ತು ಜರೈಕೆಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಆರಂಭವಾದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ನಕ್ಸಲೀಯರು ಮೊದಲು ಐಇಡಿ ಸ್ಫೋಟಿಸಿದ್ದಾರೆ. ಇದರಲ್ಲಿ ಕೋಬ್ರಾದ ಸಹಾಯಕ ಕಮಾಂಡೆಂಟ್ ಅಜಯ್ ಮಲಿಕ್ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಬಿಎಸ್‌ಎಫ್ ಹೆಲಿಕಾಪ್ಟರ್‌ನಲ್ಲಿ ರಾಂಚಿಗೆ ಕರೆದೊಯ್ಯಲಾಯಿತು.
ಈ ಮಧ್ಯೆ, ನಕ್ಸಲೀಯರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಇದರಲ್ಲಿ ಕೋಬ್ರಾ ಹೆಡ್ ಕಾನ್‌ಸ್ಟೆಬಲ್ ವಿಕ್ರಮ್ ಯಾದವ್ ಗಾಯಗೊಂಡರು. ಗಾಯಾಳು ಹೆಡ್ಕಾನ್ಸ್ಟೇಬಲ್ರನ್ನು ಕೂಡ ತಕ್ಷಣ ಏರ್ ಲಿಫ್ಟ್ ಮಾಡಿ ರಾಂಚಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳನ್ನು ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ರವಾನಿಸಲಾಗುತ್ತಿದೆ ಎಂದು ಜಾರ್ಖಂಡ್ ಐಜಿ ಡಾ. ಮೈಕೆಲ್ ರಾಜ್ ತಿಳಿಸಿದ್ದಾರೆ.
ನಕ್ಸಲೀಯರೂ ಮೃತಪಟ್ಟಿರುವ ಸಾಧ್ಯತೆ: ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವಿನ ಎನ್‌ಕೌಂಟರ್‌ನಲ್ಲಿ ಹಲವು ನಕ್ಸಲರು ಸಾವಿಗೀಡಾಗಿರುವ ಸಂಭವವಿದೆ ಎಂದು ಐಜಿ ಆಪರೇಷನ್ ಡಾ.ಮೈಕೆಲ್ ರಾಜ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ನಕ್ಸಲೀಯರ ಶವ ಪತ್ತೆಯಾಗಿಲ್ಲ ಎಂದಿದ್ದಾರೆ.
ಇವುಗಳನ್ನೂ ಓದಿ:

