ETV Bharat / bharat

IRS​ ಅಧಿಕಾರಿಯ ಮಗಳ ಬರ್ಬರ ಹತ್ಯೆ; ಮನೆಗೆಲಸದಿಂದ ತೆಗೆದು ಹಾಕಿದ ಯುವಕನಿಂದ ಕೃತ್ಯ ಶಂಕೆ

ದೆಹಲಿಯಲ್ಲಿ ನಡೆದಿರುವ ಈ ಕೊಲೆ ಪ್ರಕರಣ ಸಂಚಲನ ಮೂಡಿಸಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

a-senior-irs-officials-daughter-has-been-found-dead-in-a-house-in-amar-colony-area-of-southeast-delhi
ಘಟಾ ಸ್ಥಳದಲ್ಲಿ ಪೊಲೀಸರು (ETV Bharat)
author img

By ETV Bharat Karnataka Team

Published : April 22, 2026 at 7:29 PM IST

1 Min Read
Choose ETV Bharat

ದೆಹಲಿ: ಐಆರ್​ಎಸ್​ ಅಧಿಕಾರಿಯ ಮಗಳನ್ನು ಅವರ ಮನೆಯಲ್ಲೇ ಭೀಕರವಾಗಿ ಹತ್ಯೆಗೈದ ಘಟನೆ ಆಗ್ನೇಯ ದೆಹಲಿಯ ಅಮರ್​ ಕಾಲೊನಿಯಲ್ಲಿ ಇಂದು ಬೆಳಕಿಗೆ ಬಂದಿದೆ.

22 ವರ್ಷದ ಯುವತಿಯ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಗ್ನೇಯ ದೆಹಲಿ ಡಿಸಿಪಿ ಡಾ.ಹೇಮಂತ್ ತಿವಾರಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದೆ.

ಪ್ರಾಥಮಿಕ ವರದಿಯಲ್ಲಿ, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಮೊಬೈಲ್ ಚಾರ್ಜರ್ ಕೇಬಲ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತಿಳಿದು ಬಂದಿದೆ.

ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯುವತಿಯ ಹೊರತಾಗಿ ಯಾರೂ ಇರಲಿಲ್ಲ. ಪೋಷಕರು ಜಿಮ್​ಗೆ ಹೋಗಿದ್ದು, ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಜಿ ಮನೆ ಕೆಲಸದ ಯುವಕನಿಂದ ಕೃತ್ಯ ಶಂಕೆ: ಅಧಿಕಾರಿಯ ಮನೆಯಲ್ಲಿ ಈ ಹಿಂದೆ 19 ವರ್ಷದ ಯುವಕ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಕೆಲಸದಿಂದ ಕಿತ್ತು ಹಾಕಲಾಗಿತ್ತು. ಆತನೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಮನೆಯೊಳಗೆ ಸುಲಭವಾಗಿ ಪ್ರವೇಶ ಪಡೆದಿದ್ದು, ಪರಿಚಿತರಿಂದಲೇ ಕೊಲೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮನೆಗೆಲಸ ಮಾಡುತ್ತಿದ್ದ ಯುವಕ ನಿನ್ನೆ ದೆಹಲಿಗೆ ಆಗಮಿಸಿದ್ದು, ಅನುಮಾನ ಬಲಪಡಿಸಿದೆ. ಸದ್ಯ ಪ್ರಕರಣದ ಕುರಿತು ತನಿಖೆ ಸಾಗಿದ್ದು, ಬಳಿಕ ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಹಿಡಿದು ಹೊಡೆದು ಕೊಂದ ತಂದೆ