ETV Bharat / bharat

ಕರೂರ್​​ ಕಾಲ್ತುಳಿತ ಕೇಸ್​: ಸಾಕ್ಷಿಗಳ ಮೇಲೆ ಪ್ರಭಾವ ಆರೋಪದ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್​

ಸಿಬಿಐನಿಂದ ಕರೂರ್​ ಕಾಲ್ತುಳಿತ ಕೇಸ್​ ತನಿಖೆ. ಸಂತ್ರಸ್ತರ ಭೇಟಿಯಾದ ಸಿಎಂ ವಿರುದ್ಧ ಡಿಎಂಕೆ ಕಿಡಿ. ಇದು ಕೇಸ್​ ಮೇಲೆ ಪ್ರಭಾವ ಆರೋಪ.

KARUR STAMPEDE CASE
ಕರೂರ್​ ಕಾಲ್ತುಳಿತದ ಭೀಕರತೆಯ ಸಂಗ್ರಹ ಚಿತ್ರ. (PTI)
author img

By ETV Bharat Karnataka Team

Published : July 6, 2026 at 1:42 PM IST

2 Min Read
Choose ETV Bharat

ನವದೆಹಲಿ: ಕರೂರ್​​ ಕಾಲ್ತುಳಿತ ಪ್ರಕರಣದ ಸಾಕ್ಷಿಗಳ ಮೇಲೆ ರಾಜ್ಯ ಸರ್ಕಾರದ ಸಚಿವರು ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ನಾಳೆ (ಜುಲೈ 7) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ಸೋಮವಾರ ಒಪ್ಪಿಕೊಂಡಿದೆ.

ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ಈ ಅರ್ಜಿಯನ್ನು ಹಿರಿಯ ವಕೀಲ ಹುಜೆಫಾ ಅಹ್ಮದಿ ಮೂಲಕ ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಶೀಲ್ ನಾಗು ಅವರಿದ್ದ ಪೀಠದ ಮುಂದೆ ಪಟ್ಟಿ ಮಾಡಲಾಗಿದೆ. ಇದನ್ನು ಪರಿಶೀಲಿಸಿದ ಪೀಠವು ವಿಚಾರಣೆಗೆ ಅಸ್ತು ಎಂದಿದೆ.

ಅರ್ಜಿದಾರರ ಆರೋಪವೇನು? ಪ್ರಕರಣದ ತನಿಖೆಯನ್ನು ಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಿದೆ. ತನಿಖೆಯ ನಡುವೆ ಸರ್ಕಾರದ ಕೆಲ ಸಚಿವರು ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ದಾರಿ ತಪ್ಪಿಸುತ್ತಿದ್ದಾರೆ. ಅವರ ಹೇಳಿಕೆಗಳನ್ನು ಬದಲಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಸಚಿವ ಆಧವ್ ಅರ್ಜುನ ಮತ್ತು ಇತರೆ ಆರೋಪಿಗಳು ತನಿಖೆ ನಡೆಯುತ್ತಿರುವಾಗ ಸಿಬಿಐ ತನಿಖೆಯ ಕುರಿತು ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜೊತೆಗೆ, ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಒಡನಾಟ ಇಟ್ಟುಕೊಂಡಿದ್ದಾರೆ. ಇದು ತನಿಖೆ ಮತ್ತು ಸಾಕ್ಷಿಗಳ ಮೇಲೆ ಬೀರಿದ ಪ್ರಭಾವ ಎಂದು ಅವರು ದೂರಿದ್ದಾರೆ.

ಅಂದು ಏನಾಗಿತ್ತು? ಸಿಎಂ ವಿಜಯ್​ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮದಲ್ಲಿ ಕಾಲ್ತುಳಿತ ಉಂಟಾಗಿ, 41 ಜನರು ಸಾವನ್ನಪ್ಪಿ, 142 ಜನರು ಗಾಯಗೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸುಪ್ರೀಂ ಕೋರ್ಟ್​ ಪೀಠವು 2025ರ ಸೆಪ್ಟಂಬರ್ 27 ರಂದು ಸಿಬಿಐ ತನಿಖೆಗೆ ನೀಡಿ ಆದೇಶಿಸಿದೆ. ಈ ನಡುವೆ ಸಿಎಂ ವಿಜಯ್​ ಅವರು ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಇದನ್ನು ವಿಪಕ್ಷ ಡಿಎಂಕೆ ಟೀಕಿಸಿತ್ತು.

ತಮಿಳುನಾಡು ಸಿಎಂ ಜೋಸೆಫ್ ವಿಜಯ್, ಸಚಿವ ಆಧವ್ ಅರ್ಜುನ ಮತ್ತು ಇತರೆ ಆರೋಪಿಗಳು ಸಿಬಿಐ ತನಿಖೆಯ ಕುರಿತು ಸಾರ್ವಜನಿಕ ಹೇಳಿಕೆಗಳನ್ನು ನೀಡುವುದನ್ನು ಅಥವಾ ತನಿಖೆ ನಡೆಯುತ್ತಿರುವಾಗ ಸಂತ್ರಸ್ತರ ಕುಟುಂಬಗಳೊಂದಿಗೆ ಮಾತನಾಡುವುದನ್ನು ತಡೆಯುವಂತೆ ಕೋರಿ ಡಿಎಂಕೆ ಸುಪ್ರೀಂಕೋರ್ಟ್​ ಮೊರೆ ಹೋಗಿದೆ.

ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು, ಪ್ರಕರಣವನ್ನು ತಿರುಚುವುದು ಮತ್ತು ತನಿಖೆಗೆ ಅಡ್ಡಿಪಡಿಸಿದ ಆರೋಪದ ಕೇಸ್​ ದಾಖಲಿಸಲು ಸಿಬಿಐಗೆ ಸೂಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್​​ಗೆ ಡಿಎಂಕೆ ಕೋರಿದೆ.

ಇವುಗಳನ್ನೂ ಓದಿ: