ETV Bharat / bharat

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್‌ಗೆ ಸುಪ್ರೀಂ ಅನುಮತಿ

ಏಷ್ಯನ್ ಗೇಮ್ಸ್​ನ ಆಯ್ಕೆ ಟ್ರಯಲ್ಸ್​ನಲ್ಲಿ ವಿನೇಶ್ ಫೋಗಟ್ ಭಾಗವಹಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

SC PERMITS WRESTLER VINESH PHOGAT TO PARTICIPATE IN SELECTION TRIALS FOR ASIAN GAMES 2026
ಸುಪ್ರೀಂ ಕೋರ್ಟ್ ಹಾಗೂ ವಿನೇಶ್ ಫೋಗಟ್‌ (ETV Bharat/ANI)
author img

By PTI

Published : May 29, 2026 at 4:37 PM IST

2 Min Read
Choose ETV Bharat

ನವದೆಹಲಿ: ಮೇ 30 ಮತ್ತು 31 ರಂದು ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಫೋಗಟ್ ಅವರಿಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದ ದೆಹಲಿ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಈ ಆದೇಶ ನೀಡಿದೆ.

ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ ಭಾಗವಹಿಸಬಹುದು. ಅಲ್ಲದೇ, ವಿಚಾರಣೆಯ ವೇಳೆ ಫೋಗಟ್ ಅವರ ಪ್ರಕರಣವು ಸಾಮಾನ್ಯ ಕ್ರೀಡಾಪಟುಗಳಿಗಿಂತ ಭಿನ್ನವಾಗಿದೆ. ಅವರು ಹಲವು ಸಂದರ್ಭಗಳಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಬೇರೆ ಯಾವುದೇ ಕ್ರೀಡಾಪಟುವಾಗಿದ್ದರೆ, ಪ್ರಕರಣ ವಿಭಿನ್ನವಾಗಿರುತ್ತಿತ್ತು. ಅವರು ದೇಶಕ್ಕೆ ಕೀರ್ತಿ ತಂದಿದ್ದಾರೆ. ನಾವು ಅವರನ್ನು ತಡೆಯುವುದಿಲ್ಲ, ನೀವು ಹೋಗಿ ಭಾಗವಹಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಕ್ರೀಡಾ ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ. ಅದನ್ನು ಪಾಲಿಸುವುದು ಕ್ರೀಡಾಪಟುಗಳ ಜವಾಬ್ದಾರಿ. ಕೆಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕ್ರೀಡಾ ವಿಷಯಗಳಲ್ಲಿ ನ್ಯಾಯಾಲಯ ಪದೇ ಪದೇ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ನಾವು ಏನೂ ಮಾಡಲು ಸಾಧ್ಯವಿಲ್ಲದ ಕಾರಣ ಅವರನ್ನು ಮನೆಗೆ ಹಿಂತಿರುಗಿ ಹೋಗುವಂತೆ ಹೇಳುವುದು ಸರಿಯಲ್ಲ. ಈ ಪ್ರಕರಣಗಳಿಗೆ ಉತ್ತರಗಳು ನ್ಯಾಯಾಲಯಗಳಲ್ಲಿ ಇರುವುದಿಲ್ಲ. ಸಾಂಸ್ಥಿಕೀಕರಣವು ಬಲವಾಗಿರಬೇಕು. ಕ್ರೀಡೆಗಳಲ್ಲಿ ಭಾಗವಹಿಸುವವರು, ಆಟಗಾರರು ಮತ್ತು ಪ್ರದರ್ಶಕರ ನಡುವೆ ಒಗ್ಗಟ್ಟು ಒಳಗೊಂಡಿರಬೇಕು. ಮೊಕದ್ದಮೆ ಹೂಡುವ ಬದಲು ಪರಿಹರಿಸುವ ಮಾರ್ಗ ನೋಡಬೇಕಾಗಿದೆ. ಕೆಲವು ವಾದಗಳು ಭಾವನಾತ್ಮಕ ವಿಷಯಗಳ ಮೇಲೆ ಇರುತ್ತವೆ. ಈ ರೀತಿಯ ವಿಷಯಗಳಲ್ಲಿ ನ್ಯಾಯಾಲಯ ಕೂಡ ಬಲವಾಗಿರಬೇಕು. ಅದನ್ನು ಸಮತೋಲನಗೊಳಿಸಲು ನಾವಿಂದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು WFI ಪರ ಹಾಜರಿದ್ದ ವಕೀಲರಿಗೆ ನ್ಯಾಯಪೀಠ ತಿಳಿಸಿದೆ.

ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರೂ, ಅವರ ಡೋಪಿಂಗ್ ಪರೀಕ್ಷೆಗಳು ಕಾಣೆಯಾಗಿರುವ ಬಗ್ಗೆಯೂ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಫೋಗಟ್ ಡಿಸೆಂಬರ್ 2024 ರಲ್ಲಿ ವಿಶ್ರಾಂತಿ ಪಡೆದು ಆಗಸ್ಟ್ 2025ರಲ್ಲಿ ಸೇರುವುದಾಗಿ ಹೇಳಿದ್ದರ ಬಗ್ಗೆಯೂ ಗಮನಿಸಿತು.

ಪ್ರಕರಣದ ಹಿನ್ನೆಲೆ: ಕುಸ್ತಿಪಟು ವಿನೇಶ್ ಫೋಗಟ್ ಅವರು ಮಾತೃತ್ವದ ಕಾರಣದಿಂದಾಗಿ ದೀರ್ಘಕಾಲ ಕ್ರೀಡೆಯಿಂದ ದೂರವಿದ್ದರು. ಅವರು ಮರಳಿ ಕುಸ್ತಿ ಅಖಾಡಕ್ಕೆ ಬಂದಾಗ, ಕುಸ್ತಿ ಫೆಡರೇಶನ್ ಜಾರಿಗೆ ತಂದಿದ್ದ ಹೊಸ ಆಯ್ಕೆ ನೀತಿಯ ಪ್ರಕಾರ ಅವರು ಟ್ರಯಲ್ಸ್​ನಲ್ಲಿ ಭಾಗವಹಿಸಲು ಅರ್ಹರಲ್ಲ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಫೋಗಟ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅವರ ಪರ ತೀರ್ಪು ನೀಡಿತ್ತು.

ಸಂಭಾವ್ಯ ಆಟಗಾರರ ಹೆಸರುಗಳನ್ನು ಮೇ 14 ರೊಳಗೆ ತಲುಪಬೇಕು. ಗಡುವು ಆಗಲಿ ಅಥವಾ ಬೇರೆ ಯಾವುದೇ ಹೆಸರುಗಳನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಏಷ್ಯನ್ ಗೇಮ್ಸ್ ಪ್ರಾಧಿಕಾರ ಭಾರತಕ್ಕೆ ತಿಳಿಸಿದೆ ಎಂದು ಒಕ್ಕೂಟದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಭಾರತೀಯ ಕುಸ್ತಿ ಒಕ್ಕೂಟದ ಪ್ರತಿಕ್ರಿಯೆಯನ್ನೂ ಕೇಳಿರುವ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ: ಕುಸ್ತಿ ಟ್ರಯಲ್ಸ್​: ವಿನೇಶ್​ ಪೋಗಟ್​ ವಿರುದ್ಧ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಭಾರತೀಯ ಕುಸ್ತಿ ಒಕ್ಕೂಟ