ETV Bharat / bharat

AI ಅವಲಂಬಿಸಿ ನ್ಯಾಯಾದೇಶ ನೀಡುವುದು ನ್ಯಾಯದ ಸಮಗ್ರತೆಗೆ ಬೆದರಿಕೆ: ಸುಪ್ರೀಂ ಕೋರ್ಟ್​

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಕೈಗೆತ್ತಿಕೊಂಡಿದೆ.

ARTIFICIAL INTELLIGENCE
ಸುಪ್ರೀಂ ಕೋರ್ಟ್​ (ANI)
author img

By ETV Bharat Karnataka Team

Published : March 2, 2026 at 8:53 PM IST

1 Min Read
Choose ETV Bharat

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಬಳಸಿ ಪ್ರಕರಣಗಳ ತೀರ್ಪು ನೀಡಬಾರದು. ಅಸ್ತಿತ್ವದಲ್ಲಿ ಇಲ್ಲದ ಮತ್ತು ಕಲ್ಪಿತ ತೀರ್ಪುಗಳನ್ನು ನೀಡುವುದು ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಆಂಧ್ರಪ್ರದೇಶ ಹೈಕೋರ್ಟ್​ ನೀಡಿದ ತೀರ್ಪಿಗೆ ವಿರುದ್ಧವಾಗಿ ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠವು, ಎಐ ಬಳಸಿ ಪ್ರಕರಣಗಳಲ್ಲಿ ತೀರ್ಪು ನೀಡುವುದು ದುಷ್ಕೃತ್ಯವಾಗಿದೆ. ಇದು ನ್ಯಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ (ಎಐ) ಬಳಸಿ ನ್ಯಾಯದಾನ ಮಾಡಿದಲ್ಲಿ ಅದು ಕಾನೂನಿನ ಅರ್ಹತೆಯ ಮೇಲೆ ಬಂದ ನಿರ್ಧಾರವಾಗಿರುವುದಿಲ್ಲ. ಈ ನಡವಳಿಕೆಯು ನ್ಯಾಯದಾನ ವ್ಯವಸ್ಥೆಯನ್ನೇ ಅಲುಗಾಡಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಮಿಕಸ್​ ಕ್ಯೂರಿ ನೇಮಕ: ಈ ವಿಷಯವನ್ನು ವಿವರವಾಗಿ ಪರಿಶೀಲಿಸುವುದಾಗಿ ಹೇಳಿದ ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ನ್ಯಾಯಾಲಯಕ್ಕೆ ಸಹಾಯ ಮಾಡಲು ಹಿರಿಯ ವಕೀಲ ಶ್ಯಾಮ್ ದಿವಾನ್ ಅವರನ್ನು ಅಮಿಕಸ್​ ಕ್ಯೂರಿ ಆಗಿ ನೇಮಿಸಿತು.

ಏನಿದು ಪ್ರಕರಣ?: 2025ರ ಆಗಸ್ಟ್‌ನಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್​ ನೀಡಿದ ಆದೇಶವನ್ನು ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​​, ಅರ್ಜಿದಾರರ ದೂರುಗಳನ್ನು ಪರಿಗಣಿಸಿತು. ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್​ ಎಐ ಬಳಸಿ ನ್ಯಾಯಾದೇಶ ನೀಡಿವೆ ಎಂಬುದನ್ನು ಗಮನಿಸಿತು. ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸುವುದಾಗಿ ಹೇಳಿದೆ.

ಇವುಗಳನ್ನ ಓದಿ: