ಶಬರಿಮಲೆ ದೇಗುಲದ ಬಾಗಿಲು ಓಪನ್: ಚಿನ್ನದ ಲೇಪನಗಳು ಮರುಸ್ಥಾಪನೆ
Sabarimala Temple Opens: ಒಟ್ಟು 12 ಚಿನ್ನದ ಲೇಪಿತ ಫಲಕಗಳನ್ನು ಮರುಸ್ಥಾಪಿಸಲಾಯಿತು. 12 ಫಲಕಗಳ ಒಟ್ಟು ತೂಕ 22.876 ಕೆಜಿ ಎಂದು ದಾಖಲಾಗಿದೆ.


Published : October 18, 2025 at 10:45 AM IST
ಪತ್ತನಂತಿಟ್ಟು (ಕೇರಳ): ವಾರ್ಷಿಕ ತುಲಂ ಆಚರಣೆಗಳಿಗಾಗಿ ಶಬರಿಮಲೆ ದೇವಾಲಯದ ಬಾಗಿಲು ತೆರೆಯಲಾಯಿತು. ಶುಕ್ರವಾರ ಸಂಜೆ ತಂತ್ರಿ ಕಂಡಾರರು ಮಹೇಶ್ ಮೋಹನರು ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಅರುಣ್ ಕುಮಾರ್ ನಂಬೂತಿರಿ ದೀಪ ಬೆಳಗಿಸಿದರು.
ದೇಗುಲದ ಬಾಗಿಲು ತೆರೆದ ಬಳಿಕ ಪವಿತ್ರ 18 ಮೆಟ್ಟಿಲುಗಳ (ಪತಿನೆಟ್ಟಂ ಪಾಡಿ) ಕೆಳಗೆ ಧಾರ್ಮಿಕ ಅಗ್ನಿಯನ್ನು ಬೆಳಗಿಸಲಾಯಿತು. ಇದೇ ಸಂದರ್ಭದಲ್ಲಿ ದ್ವಾರ ಪಾಲಕ ಶಿಲ್ಪಗಳ ಮೇಲೆ ನವೀಕರಿಸಿದ ಚಿನ್ನದ ಲೇಪಿತ ಫಲಕಗಳನ್ನು ಪುನಃ ಸ್ಥಾಪಿಸಲಾಯಿತು.
ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಅಡ್ವ.ಪಿ. ಎಸ್. ಪ್ರಶಾಂತ್, ಮಂಡಳಿಯ ಸದಸ್ಯರು, ಶಬರಿಮಲೆ ವಿಶೇಷ ಆಯುಕ್ತ ಆರ್. ಜಯಕೃಷ್ಣನ್, ಪೊಲೀಸರು ಮತ್ತು ದೇವಸ್ವಂ ಜಾಗೃತ ಅಧಿಕಾರಿಗಳು ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಚಿನ್ನದ ಲೇಪನ ಪುನಃಸ್ಥಾಪನೆ ಕಾರ್ಯ ನಡೆಸಲಾಯಿತು.
ದುರಸ್ತಿ ಮತ್ತು ನಿರ್ವಹಣೆಗಾಗಿ ಚೆನ್ನೈನ ಸ್ಮಾರ್ಟ್ ಕ್ರಿಯೇಷನ್ಸ್‌ಗೆ ಕಳುಹಿಸಲಾದ ಒಟ್ಟು 12 ಚಿನ್ನದ ಲೇಪಿತ ಫಲಕಗಳನ್ನು ಮರುಸ್ಥಾಪಿಸಲಾಯಿತು. 12 ಫಲಕಗಳ ಒಟ್ಟು ತೂಕ 22.876 ಕೆಜಿ ಎಂದು ದಾಖಲಾಗಿದೆ. ಚಿನ್ನದ ಲೇಪನವಾದ ತಕ್ಷಣಕ್ಕೆ ತಂತ್ರಿ ಕಂದರರು ಮಹೇಶ್ ಮೋಹನರು ನೇತೃತ್ವದಲ್ಲಿ ಶುದ್ಧಿ ಪೂಜೆಗಳು ನೆರವೇರಿದವು. ಶನಿವಾರ ಬೆಳಗ್ಗೆ 5 ಗಂಟೆಗೆ ಮಾಸಿಕ ಪೂಜೆಗಳ ಆರಂಭಕ್ಕೆ ದೇವಾಲಯದ ಬಾಗಿಲುಗಳುನ್ನು ತೆರೆಯಲಾಗಿದೆ.
ಶಬರಿಮಲೆ ಮತ್ತು ಮಲಿಕಪ್ಪುರಂ ದೇವಾಲಯಗಳ ಮುಂದಿನ ಒಂದು ವರ್ಷದ ಅವಧಿಗೆ ಪ್ರಧಾನ ಅರ್ಚಕರನ್ನು ಆಯ್ಕೆಯ ನಿರ್ಣಾಯಕ ಸಭೆ ಇಂದು ನಡೆಯಲಿದೆ. 2011 ರ ಸುಪ್ರೀಂ ಕೋರ್ಟ್ ಆದೇಶದ ನಂತರ ನಿವೃತ್ತ ನ್ಯಾಯಮೂರ್ತಿ ಕೆ. ಟಿ. ಥಾಮಸ್ ಅವರ ವರದಿಯ ಆಧಾರದ ಮೇಲೆ ಆಯ್ಕೆಯಾದ ಇಬ್ಬರು ಮಕ್ಕಳಾದ ಕಶ್ಯಪ್ ವರ್ಮಾ ಮತ್ತು ಮೈಥಿಲಿ ಕೆ. ವರ್ಮಾ ಆಯ್ಕೆಯ ಡ್ರಾವನ್ನು ಮಾಡಲಿದ್ದಾರೆ.
ಶಬರಿಮಲೆ ಮೇಲ್ಶಾಂತಿಯ ಅಂತಿಮ ಪಟ್ಟಿಯಲ್ಲಿ 14 ಅಭ್ಯರ್ಥಿಗಳಿದ್ದರೆ, ಮಲಿಕಪ್ಪುರಂ ಹುದ್ದೆಗೆ 13 ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ. ಡ್ರಾಗಾಗಿ ಹೊರಡಿಸಲಾದ ಹೈಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಸಮಾರಂಭದ ಸಮಯದಲ್ಲಿ ಸೋಪಾನಂ (ಗರ್ಭಗುಡಿ ಮೆಟ್ಟಿಲುಗಳು) ನಲ್ಲಿ ಕೇವಲ ನಾಲ್ಕು ಅಧಿಕಾರಿಗಳಿಗೆ ಮಾತ್ರ ಅವಕಾಶವಿರುತ್ತದೆ. ಅವರು ಶಬರಿಮಲೆ ವಿಶೇಷ ಆಯುಕ್ತರು, ದೇವಸ್ವಂ ಮಂಡಳಿ ಅಧ್ಯಕ್ಷರು, ದೇವಸ್ವಂ ಆಯುಕ್ತರು ಮತ್ತು ಹೈಕೋರ್ಟ್ ವೀಕ್ಷಕರಾಗಿರುತ್ತಾರೆ.
ಇದನ್ನೂ ಓದಿ: ಕಳವಾಗಿದ್ದ ಶಬರಿಮಲೆಯ ಚಿನ್ನ ಲೇಪಿತ ಫಲಕ ದಾನ ನೀಡಿದ್ದು ಉದ್ಯಮಿ ವಿಜಯ್ ಮಲ್ಯ: ಆದರೆ, ದಾಖಲೆಗಳೇ ಕಣ್ಮರೆ
ಇದನ್ನೂ ಓದಿ: ಶಬರಿಮಲೆ ಚಿನ್ನದ ಲೇಪಿತ ಫಲಕ ಬೆಂಗಳೂರಿಗೂ ಬಂದಿತ್ತು: ಬಂಗಾರದ ಫಲಕ ತಾಮ್ರವಾಗಿದ್ದು ಹೇಗೆ?; ಏನಿದು ಉನ್ನಿಕೃಷ್ಣನ್ ಕೈಚಳಕ

