ETV Bharat / bharat

ರಥಯಾತ್ರೆ 2026: ಜಗನ್ನಾಥ ರಥಯಾತ್ರೆಯ ಬ್ರೇಕಿಂಗ್​ ವ್ಯವಸ್ಥೆ, ಪವಿತ್ರ ಹಗ್ಗಗಳ ಸಿದ್ದತೆ ಸಾಗುವುದು ಹೇಗೆ ಗೊತ್ತೇ?

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ರಥ ಎಳೆಯಲು ಸಿದ್ದವಾಗುವ ಹಗ್ಗದ ವಿಶೇಷತೆ ಕುರಿತು ಶಕ್ತಿ ಪ್ರಸಾದ್ ಮಿಶ್ರಾ ಅವರ ವರದಿ ಇಲ್ಲಿದೆ.

http://10.10.50.80:6060/reg-lowres/09-July-2026/od-pur-chariotspecialropebreak-7205521_09072026191012_0907f_1783604412_289.mp4
ರಥ ಯಾತ್ರೆಗೆ ಸಿದ್ದತೆ (ETV BHARAT)
author img

By ETV Bharat Karnataka Team

Published : July 10, 2026 at 4:45 PM IST

3 Min Read
Choose ETV Bharat

ಪುರಿ (ಒಡಿಶಾ): ಪುರಿಯ ಜಗನ್ನಾಥ ರಥಯಾತ್ರೆಯ ಸಿದ್ದತೆಗಳು ಅಂತಿಮ ಹಂತ ತಲುಪಿದೆ. ಭವ್ಯ ರಥ ಯಾತ್ರೆಯ ಎಲ್ಲಾ ಸಿದ್ದತೆಗಳು ಮುಗಿದಿದ್ದು, ಮೂರು ತೇರುಗಳ ಅಂತಿಮ ಜೋಡಣಾ ಕಾರ್ಯಗಳು ಸಾಗಿದೆ. ಅದರಲ್ಲೂ ರಥ ಎಳೆಯುವ ಪವಿತ್ರ ಹಗ್ಗಗಳನ್ನು ಈ ಬಾರಿ ನವೀಕರಿಸಿದ್ದು, ದೇಶದ ಅತಿದೊಡ್ಡ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿರುವ ಈ ಯಾತ್ರೆ ಸುಗಮ ಮತ್ತು ಸುರಕ್ಷಿತತೆಯನ್ನು ಖಚಿತಪಡಿಸಿಕೊಳ್ಳಲು ಸಿದ್ಧವಾಗಿವೆ.

ರಥಯಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ರಥವನ್ನು ಎಳೆಯುವಾಗ ಅಪಾರ ಬಲವನ್ನು ತಡೆದುಕೊಳ್ಳಲು ತಯಾರಿಸಲಾಗುವ ಈ ರಥದ ಹಗ್ಗಗಳು ಸಾಮಾನ್ಯವಾದವುಗಳಲ್ಲ. ರಥಗಳನ್ನು ಎಳೆಯುವಾಗ ಅವು ಹರಿದು ಹೋಗದಂತೆ ಖಚಿತಪಡಿಸಿಕೊಳ್ಳಲು ಅವುಗಳ ಸಾಮರ್ಥ್ಯವನ್ನು ಎಚ್ಚರಿಕೆಯಿಂದ ಪರೀಕ್ಷಿಸಲಾಗುತ್ತದೆ. ಈ ಹಗ್ಗಗಳನ್ನು 'ಒಡಿಶಾ ಕಾಯರ್ ಕಾರ್ಪೊರೇಷನ್' ತಯಾರಿಸಿ, ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಗೆ ಪೂರೈಸುತ್ತದೆ.

rath-yatra-2026-how-the-sacred-ropes-and-braking-system-ensure-a-safe-jagannath-rath-yatra-in-puri
ರಥ ಯಾತ್ರೆಗೆ ಸಿದ್ದತೆ (ETV BHARAT)

ಪ್ರತಿಯೊಂದು ಹಗ್ಗವೂ 220 ಅಡಿ ಉದ್ದವಿರುತ್ತದೆ. ಪ್ರತಿ ವರ್ಷದಂತೆಯೇ, ನಂದಿಘೋಷ, ತಾಳಧ್ವಜ ಮತ್ತು ದರ್ಪದಲನ ಎಂಬ ಮೂರು ರಥಗಳಿಗಾಗಿ ತಲಾ ಎರಡು ಸಂಪೂರ್ಣ ಸಿದ್ಧಪಡಿಸಲಾಗಿದೆ. ಪ್ರತಿ ರಥಕ್ಕೂ ಎಳೆಯಲು ನಾಲ್ಕು ಮುಖ್ಯ ಹಗ್ಗಗಳು ಮತ್ತು ಹೆಚ್ಚುವರಿಯಾಗಿ ಎರಡು ಹಗ್ಗಗಳ ವ್ಯವಸ್ಥೆ ಮಾಡಲಾಗಿದೆ. ಮೂರೂ ರಥಗಳಿಗೆ ಒಟ್ಟು 18 ಹಗ್ಗಗಳ ಅಗತ್ಯ ಇದ್ದರೂ, ಈ ವರ್ಷ ಸಾಕಷ್ಟು ಮೀಸಲು ವ್ಯವಸ್ಥೆ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳಲು 28 ಹಗ್ಗಗಳನ್ನು ಒದಗಿಸಲಾಗಿದೆ. ಸದ್ಯಕ್ಕೆ ಈ ಹಗ್ಗಗಳನ್ನು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಕಚೇರಿಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ ಇಡಲಾಗಿದೆ.

ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಈ ಹಗ್ಗಗಳನ್ನು ರಥಕ್ಕೆ ಜೋಡಿಸಲಾಗುವುದು. ನೇತ್ರ ಉತ್ಸವದ ಬಳಿಕ ಈ ಆಚರಣೆ ಪೂರ್ಣಗೊಳ್ಳುತ್ತದೆ. ಉನ್ನತ ಗುಣಮಟ್ಟದ ತೆಂಗಿನ ನಾರಿನಿಂದಾಗಿ ಈ ಹಗ್ಗಗಳ ತಯಾರಿಸಲಾಗುವುದು. ಈ ಹಗ್ಗಗಳು, ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರೆ ಅವರ ರಥಗಳಿಗೆ ಕಟ್ಟಿದ ನಂತರ ಪವಿತ್ರಗೊಳ್ಳುತ್ತವೆ.

rath-yatra-2026-how-the-sacred-ropes-and-braking-system-ensure-a-safe-jagannath-rath-yatra-in-puri
ರಥ ಯಾತ್ರೆಗೆ ಸಿದ್ದತೆ (ETV BHARAT)

ಪ್ರತಿ ವರ್ಷ ಈ ರಥಗಳನ್ನು ಎಳೆಯುವ ಈ ಹಗ್ಗವನ್ನು ಮುಟ್ಟುವುದು ಕೂಡ ಒಂದು ಆಶೀರ್ವಾದ ಎಂದು ಲಕ್ಷಾಂತರ ಭಕ್ತರು ನಂಬಿದ್ದಾರೆ. ರಥ ಎಳೆಯುವ ಈ ಆಚರಣೆಯಲ್ಲಿ ಭಾಗಿಯಾಗುವುದೇ ಒಂದು ಆಧ್ಯಾತ್ಮಿಕ ಅನುಭವ ಎಂದು ಪರಿಗಣಿಸಲಾಗುತ್ತದೆ. ವಾರ್ಷಿಕ ರಥಯಾತ್ರೆಯ ಅತ್ಯಂತ ನಿರೀಕ್ಷಿತ ಕ್ಷಣಗಳಲ್ಲಿ ಒಂದಾಗಿದೆ.

ರಥಗಳ ವ್ಯವಸ್ಥೆ: ಈ ಮೂರು ರಥಗಳ ನಿರ್ಮಾಣ ಸಿದ್ಧತೆಯ ಕೊನೆಯ ಹಂತದಲ್ಲಿದೆ. ಕುಶಲಕರ್ಮಿಗಳು ಇದೀಗ ಸಂಪ್ರದಾಯಿಕ ಮರದ ಬ್ರೇಕಿಂಗ್​ ವ್ಯವಸ್ಥೆಯನ್ನು ನಡೆಸಿದ್ದು, ಇದು ಮೆರವಣಿಗೆ ವೇಳೆ ಬೃಹತ್​ ರಥವನ್ನು ನಿಲ್ಲಿಸಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ.

rath-yatra-2026-how-the-sacred-ropes-and-braking-system-ensure-a-safe-jagannath-rath-yatra-in-puri
ರಥ ಯಾತ್ರೆಗೆ ಸಿದ್ದತೆ (ETV BHARAT)

ಈ ಬ್ರೇಕಿಂಗ್​ ಪ್ರತಿ ರಥದ ಮುಂಭಾಗದಲ್ಲಿ ಹಗ್ಗಗಳಿಂದ ನೇತು ಹಾಕಲಾದ 20 ಅಡಿ ಉದ್ದದ ಮರದ ತೊಲೆ ಒಳಗೊಂಡಿರುತ್ತದೆ. ರಥವನ್ನು ನಿಲ್ಲಿಸಬೇಕಾದಾಗ ಅಥವಾ ತಿರುವಿನಲ್ಲಿ ತಿರುಗಿಸಬೇಕಾದಾಗ, ಈ ತೊಲೆಯನ್ನು ಚಕ್ರಗಳ ಮುಂದೆ ಕೆಳಕ್ಕೆ ಇಳಿಸಲಾಗುತ್ತದೆ. ಚಕ್ರಗಳು ಆ ತೊಲೆಯ ಮೇಲೆ ಹತ್ತಿದಾಗ, ರಥದ ಚಲನೆಯು ನಿಯಂತ್ರಣಕ್ಕೆ ಬರುತ್ತದೆ.

ಈ ವರ್ಷ ಈ ಬ್ರೇಕಿಂಗ್​ ವ್ಯವಸ್ಥೆಯನ್ನು ನವೀಕರಿಸಿದ್ದು, ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಎಂಸಿಎಲ್​) ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಲಾದ ನೈಲಾನ್-ರಬ್ಬರ್ ಬೆಲ್ಟ್‌ ಬಳಕೆ ಮಾಡಲಾಗುತ್ತಿದೆ. ಈ ಬೆಲ್ಟ್​ ನೈಲಾನ್​, ಕಾಟನ್​ ಮತ್ತು ರಬ್ಬರ್​ ಪದರಗಳನ್ನು ಒಳಗೊಂಡಿರುತ್ತದೆ. ಇವು ಹೆಚ್ಚು ಬಾಳಿಕೆ ಮತ್ತು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷ ಹೆವಿ ಡ್ಯೂಟಿ ಸ್ಪೈಕ್‌ಗಳನ್ನು ಬೆಲ್ಟ್‌ಗಳಿಗೆ ಜೋಡಿಸಲಾಗುತ್ತದೆ. ಇದು ರಸ್ತೆ ಮೇಲ್ಮೈಯೊಂದಿಗೆ ಹೆಚ್ಚಿನ ಘರ್ಷಣೆಯನ್ನು ಉಂಟುಮಾಡುತ್ತದೆ. ಮರದ ಬ್ರೇಕ್ ಅಸೆಂಬ್ಲಿಗೆ ಹಾನಿಯಾಗದಂತೆ ಬ್ರೇಕ್‌ಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

rath-yatra-2026-how-the-sacred-ropes-and-braking-system-ensure-a-safe-jagannath-rath-yatra-in-puri
ರಥ ಯಾತ್ರೆಗೆ ಸಿದ್ದತೆ (ETV BHARAT)

ಸುಧಾರಿತ ಬ್ರೇಕಿಂಗ್ ವ್ಯವಸ್ಥೆಯು, ಮೆರವಣಿಗೆ ಉದ್ದಕ್ಕೂ ಬೃಹತ್ ರಥಗಳ ವೇಗವನ್ನು ಹೆಚ್ಚು ಸುರಕ್ಷಿತವಾಗಿ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

ಬ್ರೇಕ್‌ಗಳ ತಾಂತ್ರಿಕ ವಿವರಣೆಗಳು:

36 ಇಂಚಿನ ನೈಲನ್​ ರಬ್ಬರ್​​ ಬೆಲ್ಟ್​ ಪೀಸ್​

ಪ್ರತಿ ಬೆಲ್ಟ್​ 1 ಅಡಿ ಉದ್ದ, 9 ಇಂಚು ಅಗಲ ಮತ್ತು 16 ಎಂಎಂ ದಪ್ಪ ಇರುತ್ತದೆ.

15 ಕೆಜಿ ಭಾರಿ ಮೊಳೆ, 5 ಕೆಜಿ ಸಣ್ಣ ಮೊಳೆ, 9 ಕೆಜಿ ವಾಶರ್​.

ಈ ವಸ್ತುಗಳು ಮರದ ಬ್ರೇಕ್ ಬ್ಲಾಕ್‌ಗಳಿಗೆ, ಅವುಗಳ ಬಾಳಿಕೆ ಮತ್ತು ಬ್ರೇಕಿಂಗ್ ದಕ್ಷತೆ ಹೆಚ್ಚಿಸಲು ಅಳವಡಿಸಲಾಗುತ್ತದೆ.

rath-yatra-2026-how-the-sacred-ropes-and-braking-system-ensure-a-safe-jagannath-rath-yatra-in-puri
ರಥ ಯಾತ್ರೆಗೆ ಸಿದ್ದತೆ (ETV BHARAT)

ತಾಳಧ್ವಜ ರಥದ ಸೇವಕರಾದ ಬಾಲಕೃಷ್ಣ ಮಹಾರಾಣಾ ಅವರ ಪ್ರಕಾರ, ಪ್ರತಿ ವರ್ಷ ಲಕ್ಷಾಂತರ ಭಕ್ತರು ಉತ್ಸಾಹದಿಂದ ರಥಗಳನ್ನು ಎಳೆಯುತ್ತಾರೆ. ಆದಾಗ್ಯೂ, ಸಾಗುವ ಮಾರ್ಗದಲ್ಲಿನ ಹಲವು ಸ್ಥಳಗಳಲ್ಲಿ ಹಾಗೂ ತಿರುವುಗಳಲ್ಲಿ ಥಗಳನ್ನು ನಿಲ್ಲಿಸಬೇಕಾಗುತ್ತದೆ.

ಸುಮಾರು 20 ಅಡಿ ಉದ್ದ ಮತ್ತು 2.5 ಅಡಿ ಅಗಲ ಇರುವ ಗಟ್ಟಿಮುಟ್ಟಾದ ಮರದ ಬ್ರೇಕ್ ಅನ್ನು ರಥದ ಮುಂಭಾಗದಲ್ಲಿ ನೇತುಹಾಕಲಾಗಿರುತ್ತದೆ. ಇದನ್ನು ಭೋಯಿ ಸೇವಕರು ನಿರ್ವಹಿಸುತ್ತಾರೆ. ಅಗತ್ಯ ಇದ್ದಾಗ ಹಗ್ಗಗಳ ಸಹಾಯದಿಂದ ಈ ಬ್ರೇಕ್ ಕೆಳಕ್ಕೆ ಇಳಿಸಲಾಗುತ್ತದೆ. ಆಗ ರಥದ ಚಕ್ರಗಳು ಮರದ ದಿಮ್ಮಿಗೆ ತಾಗಿಕೊಂಡು ನಿಲ್ಲುತ್ತವೆ ಎಂದು ವಿವರಿಸಿದರು.

rath-yatra-2026-how-the-sacred-ropes-and-braking-system-ensure-a-safe-jagannath-rath-yatra-in-puri
ರಥ ಯಾತ್ರೆಗೆ ಸಿದ್ದತೆ (ETV BHARAT)

ಈ ವರ್ಷ ರಥಯಾತ್ರೆಗಾಗಿ ಗಟ್ಟಿಯಾದ ಸಾಲ್ ಮರದಿಂದ ತಯಾರಿಸಿದ ಮೂರು ಹೊಸ ಬ್ರೇಕ್ ಜೋಡಣೆಗಳನ್ನು ಸಿದ್ಧಪಡಿಸಲಾಗಿದೆ. ಒಡಿಶಾ ಕಾಯಿರ್ ಕಾರ್ಪೊರೇಷನ್ ಪ್ರತಿ ವರ್ಷ ಪವಿತ್ರ ರಥದ ಹಗ್ಗಗಳನ್ನು ಪೂರೈಸುತ್ತದೆ. ಇದಕ್ಕೂ ಮೊದಲು, ಹಗ್ಗಗಳನ್ನು ಕೇರಳದಿಂದ ಪಡೆಯಲಾಗುತ್ತಿತ್ತು. ಆದರೆ, ಅವು ಅಗತ್ಯ ಇರುವ ಗುಣಮಟ್ಟದ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿ, ಬಳಕೆಯ ಸಮಯದಲ್ಲಿ ಮುರಿದು ಬೀಳುತ್ತಿದ್ದವು ಎಂದು ತಿಳಿಸಿದ್ದಾರೆ.

rath-yatra-2026-how-the-sacred-ropes-and-braking-system-ensure-a-safe-jagannath-rath-yatra-in-puri
ರಥ ಯಾತ್ರೆಗೆ ಸಿದ್ದತೆ (ETV BHARAT)

ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಒಡಿಶಾ ಈಗ ಸ್ಥಳೀಯವಾಗಿ ಉತ್ತಮವಾದ ತೆಂಗಿನ ನಾರನ್ನು ಬಳಸಿ ಹಗ್ಗಗಳನ್ನು ತಯಾರಿಸುತ್ತದೆ. ಇದು ವಾರ್ಷಿಕ ರಥಯಾತ್ರೆಗೆ ಬಲವಾದ ಮತ್ತು ಹೆಚ್ಚು ಬಾಳಿಕೆ ಬರುತ್ತದೆ.

ಇವುಗಳನ್ನೂ ಓದಿ: ಸೇನೆಯ ನಕಲಿ ಸಮವಸ್ತ್ರ ಧರಿಸಿ ಪುರಿ ಜಗನ್ನಾಥ ಮಂದಿರಕ್ಕೆ ನುಗ್ಗಿದ ವ್ಯಕ್ತಿ ಪೊಲೀಸ್​ ವಶಕ್ಕೆ

ಸ್ನಾನ ಯಾತ್ರೆ: ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ದೇಗುಲದಲ್ಲಿ ವಾರ್ಷಿಕ ಸ್ನಾನದ ಯಾತ್ರೆಗೆ ಹರಿದು ಬಂದ ಭಕ್ತ ಸಾಗರ