ETV Bharat / bharat

ಕಾಶ್ಮೀರದಲ್ಲಿ ಅಪರೂಪದ ಕಾಡು ಮೇಕೆ ಮಾರ್ಖೋರ್​ ಬೇಟೆ: ಆರೋಪಿಗಳ ವಿರುದ್ಧ ಬಂಧನ ವಾರಂಟ್​ ಜಾರಿ

ವಿಶೇಷವಾಗಿ ಕಾಣಸಿಗುವ ಈ ಮಾರ್ಖೋರ್​ ರಕ್ಷಣೆಗಾಗಿ ವಿಶ್ವಸಂಸ್ಥೆ 2024ರ ಮೇ 24ರಂದು ಅಂತಾರಾಷ್ಟ್ರೀಯ ಮಾರ್ಖೋರ್​ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

Rare Wild Goat's 'Killing' Sparks Concern In Kashmir, Arrest Warrant Issued Against Poachers
ಅಪರೂಪದ ಕಾಡು ಮೇಕೆ ಮಾರ್ಖೋರ್​ ಬೇಟೆ (Special arrangement)
author img

By ETV Bharat Karnataka Team

Published : May 29, 2026 at 4:08 PM IST

2 Min Read
Choose ETV Bharat

ಶ್ರೀನಗರ: ಮೇ 24ರಂದು ಅಂತಾರಾಷ್ಟ್ರೀಯ ಮಾರ್ಖೋರ್​ (ಕೊಂಬಿನ ಕಾಡು ಮೇಕೆ) ಆಚರಿಸುತ್ತಿರುವ ಹೊತ್ತಿನಲ್ಲಿ, ಜಮ್ಮು ಮತ್ತು ಕಾಶ್ಮೀರದ ಗುರೆಜ್‌ನಲ್ಲಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಈ ಮಾರ್ಖೋರ್ ಬೇಟೆಯಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ

ಬೇಟೆಯಾಡುತ್ತಿದ್ದ ನಾಲ್ವರನ್ನು ಒಬ್ಬನು ಗುರುತಿಸಿದ್ದು, ಈತ ರಾಜೌರಿ ಜಿಲ್ಲೆ ಬುಡಕಟ್ಟು ಜನಾಂಗದವ ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಿದ್ದು, ಬಂಧನ ವಾರಂಟ್ ಹೊರಡಿಸಲಾಗಿದೆ. ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕಾಶ್ಮೀರದ ವನ್ಯಜೀವಿ ವಾರ್ಡನ್ ಇಂತೆಸರ್ ಸುಹೈಲ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಈ ಬೇಟೆಗಾರರ ​​ಚಿತ್ರ ಮತ್ತು ವಿಡಿಯೋ ವಾಟ್ಸ್​ಆ್ಯಪ್​ ಮೂಲಕ ಸೋರಿಕೆಯಾದ ಬಳಿಕ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಈ ವಿಡಿಯೋದ ಘಟನೆ ಒಂದು ವಾರದ ಹಿಂದೆ ಗುರೆಜ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ತನಿಖೆಯ ಸಮಯದಲ್ಲಿ ಎಲ್ಲಾ ವಿವರಗಳನ್ನು ಸಂಗ್ರಹಿಸಲಾಗುವುದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಮೂವರು ಬೇಟೆಗಾರರು ಮಾರ್ಖೋರ್​ ಅನ್ನು ಚಾಕುವಿನಲ್ಲಿ ಕತ್ತರಿಸುವುದು ಕಂಡು ಬಂದಿದ್ದು, ಬೇಟೆಯಾಡಿದ್ದ ಬಂದೂಕು ಹತ್ತಿರದಲ್ಲಿರುವುದು ಸಹ ಕಂಡು ಬಂದಿದೆ. ಬೇಟೆಗಾರರಲ್ಲಿ ಒಬ್ಬರು ಗುಂಡು ಹಾರಿಸಿದ್ದಾರೆ ಎಂದು ಹೇಳಲಾದ ವಿಡಿಯೋದಲ್ಲಿ, ಒಬ್ಬ ಬೇಟೆಗಾರ ಸಾವನ್ನಪ್ಪಿದ ಮಾರ್ಖೋರ್ ಅನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು. ಇನ್ನೊಬ್ಬ ಬೇಟೆಗಾರ ಕಾಡಿನ ದಿಬ್ಬದ ಉದ್ದಕ್ಕೂ ಅವನ ಮುಂದೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಈ ಕುರಿತು ಮೂಲಗಳು ಈ ಟಿವಿ ಭಾರತದೊಂದಿಗೆ ಮಾತನಾಡಿದ್ದು, ಬಂಡಿಪೋರಾ ಜಿಲ್ಲೆಯ ಗುರೆಜ್ ಕಾಡಿನ ದೌಧಪತಿ ಕಿಸ್ಸಾರ್ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಮಾರ್ಖೋರ್‌ಗಳನ್ನು ಬೇಟೆಯಾಡಿದ್ದು, ಇದು ವಾರದ ಹಿಂದೆ ನಡೆದಿರುವ ಘಟನೆಯಾಗಿದೆ ಎಂದಿದ್ದಾರೆ.

ವಿಶೇಷವಾಗಿ ಕಾಣಸಿಗುವ ಈ ಮಾರ್ಖೋರ್​ ರಕ್ಷಣೆಗಾಗಿ ವಿಶ್ವಸಂಸ್ಥೆ 2024ರ ಮೇ 24ರಂದು ಅಂತಾರಾಷ್ಟ್ರೀಯ ಮಾರ್ಖೋರ್​ ದಿನವಾಗಿ ಆಚರಿಸಲು ನಿರ್ಧರಿಸಿತು. ಅಂದಿನಿಂದ ಜಾಗತಿಕವಾಗಿ ಈ ದಿನಾಚರಣೆ ನಡೆಸಲಾಗುತ್ತಿದೆ.

ಭಾರತೀಯ ವನ್ಯಜೀವಿ ಟ್ರಸ್ಟ್ (ಡಬ್ಲ್ಯೂಟಿಐ) ನಡೆಸಿದ ಸಮೀಕ್ಷೆಯ ಪ್ರಕಾರ, ಮಾರ್ಖೋರ್​ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಾಗಿ ಕಂಡು ಬರುವ ಕಾಡು ಮೇಕೆಯಾಗಿದೆ. ಇದನ್ನು ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ವೇಳಾಪಟ್ಟಿ I ರಲ್ಲಿ ಪಟ್ಟಿ ಮಾಡಲಾಗಿದೆ. ಐಯುಸಿಎನ್​ ಬೆದರಿಕೆಗೊಳಗಾದ ಪ್ರಭೇದಗಳ ಕೆಂಪು ಪಟ್ಟಿಯ ಅಡಿ ಇದನ್ನು ಅಳಿವಿನಂಚಿನ ಅಪಾಯದ ಪಟ್ಟಿಯಲ್ಲಿರುವ ಪ್ರಾಣಿಗಳ ವರ್ಗದಲ್ಲಿ ಗುರುತಿಸಲಾಗಿದ್ದು, ಈ ಪ್ರಾಣಿಗಳ ಬೇಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ, ಇದನ್ನು ಬೇಟೆಗಾರರು ಹಲವಾರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ಪಾವತಿಸಬೇಕು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾರ್ಖೋರ್ ಜನಸಂಖ್ಯೆಯು ಸುಮಾರು 250 ರಷ್ಟಿದ್ದು, ಕಾಜಿನಾಗ್ ಮತ್ತು ಪಿರ್ ಪಂಜಾಲ್ ಅರಣ್ಯ ಶ್ರೇಣಿಗಳಲ್ಲಿ ಕಂಡು ಬರುತ್ತದೆ ಎಂದು ಭಾರತೀಯ ವನ್ಯಜೀವಿ ಟ್ರಸ್ಟ್​ ತಿಳಿಸಿದೆ.

ವಿಶ್ವಸಂಸ್ಥೆಯ ಪ್ರಕಾರ, ಮಾರ್ಖೋರ್​ ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ ಮಧ್ಯ ಮತ್ತು ದಕ್ಷಿಣ ಏಷ್ಯಾದ ಪರ್ವತ ಪ್ರದೇಶಗಳಲ್ಲಿ ಕಂಡು ಬರುವ ಸಾಂಪ್ರದಾಯಿಕ ಮತ್ತು ಪರಿಸರೀಯ ಕಾಡು ಮೇಕೆ ಜಾತಿಯ ಪ್ರಾಣಿಯಾಗಿದೆ. ಇದಕ್ಕೆ ಈಗಿರುವ ದೊಡ್ಡ ಬೆದರಿಕೆ ಎಂದರೆ ಆವಾಸಸ್ಥಾನ ನಷ್ಟ, ಅಕ್ರಮ ಬೇಟೆ ಮತ್ತು ಹವಾಮಾನ ಬದಲಾವಣೆ ಎಂದು ವಿಶ್ವಸಂಸ್ಥೆಯು ಮೇ 24 ಅನ್ನು ಅಂತಾರಾಷ್ಟ್ರೀಯ ಮಾರ್ಕೋರ್ ದಿನ ಎಂದು ಪಟ್ಟಿ ಮಾಡುವಾಗ ತಿಳಿಸಿತ್ತು.

ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲಾಗಿರುವ ಬೇಟೆ ಪ್ರಕರಣದ ತನಿಖೆಗಾಗಿ ರೇಂಜ್ ಆಫೀಸರ್ ಮತ್ತು ವನ್ಯಜೀವಿ ಅಧಿಕಾರಿಗಳು ಸೇರಿದಂತೆ ತಂಡವನ್ನು ಗುರೆಜ್‌ಗೆ ಕಳುಹಿಸಲಾಗಿದೆ ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.

ಇವುಗಳನ್ನೂ ಓದಿ:

ಕಡಬ: ಕಾಡುಕೋಣ ಬೇಟೆ, ಅರಣ್ಯಾಧಿಕಾರಿಗಳ ಕಂಡು ಆರೋಪಿಗಳು ಪರಾರಿ; ಮಾಂಸ, ವಾಹನ ವಶಕ್ಕೆ

ಚಿಕ್ಕಮಗಳೂರು: ಸಿಐಡಿ ಅರಣ್ಯ ದಳದಿಂದ ಜಿಂಕೆ ಬೇಟೆಯಾಡಿದ ಮೂವರ ಬಂಧನ