ETV Bharat / bharat

ಉತ್ತರಾಖಂಡದ ಉದ್ಯಾನದಲ್ಲಿ ಕಂಡುಬಂದ ಬಿಳಿ ಕೋತಿ: ಪ್ರವಾಸಿಗರಲ್ಲಿ ಹೆಚ್ಚಿದ ಕುತೂಹಲ

ಈ ಮಂಗ ಸಂಪೂರ್ಣವಾಗಿ ಶ್ವೇತ ವರ್ಣದ ಕೂದಲನ್ನು ಹೊಂದಿದ್ದು, ಕೆಂಪು ಕಣ್ಣಿನಿಂದಾಗಿ ದಟ್ಟ ಅರಣ್ಯದಲ್ಲೂ ಅದು ಪ್ರವಾಸಿಗರಿಗೆ ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಿದೆ.

rare-albino-monkey-spotted-near-uttarakhands-corbett-tiger-reserve-tourists-flock-to-see-it
ಬಿಳಿ ಕೋತಿ (ETV Bharat)
author img

By ETV Bharat Karnataka Team

Published : March 2, 2026 at 2:41 PM IST

2 Min Read
Choose ETV Bharat

ನೈನಿತಾಲ್​ (ಉತ್ತರಾಖಂಡ): ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಪಕ್ಕದಲ್ಲಿರುವ ಫಾಟೊ ಪ್ರವಾಸಿ ವಲಯದಲ್ಲಿ ಅಪರೂಪದ ಆಲ್ಬಿನೋ ಮಂಗವೊಂದು ಪತ್ತೆಯಾಗಿದ್ದು, ಇದು ಪ್ರವಾಸಿಗರು ಮತ್ತು ವನ್ಯಜೀವಿ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಗೈಡ್​ ಮೋಹಿತ್​ ಶರ್ಮಾ ಅವರಿಗೆ ಸಫಾರಿ ವೇಳೆ ಈ ಮಂಗ ಕಾಣಿಸಿಕೊಂಡಿದೆ.

ಈ ಮಂಗವೂ ಸಂಪೂರ್ಣವಾಗಿ ಶ್ವೇತ ವರ್ಣದ ಕೂದಲನ್ನು ಹೊಂದಿದ್ದು, ಕೆಂಪು ಕಣ್ಣಿನಿಂದಾಗಿ ದಟ್ಟ ಅರಣ್ಯದಲ್ಲೂ ಅದು ಪಳ ಪಳ ಹೊಳೆಯುತ್ತದೆ. ಸಫಾರಿ ವೇಳೆಯಲ್ಲಿ ಫಾಟೊ ವಲಯದಲ್ಲಿ ಇದು ಕಾಣಿಸಿಕೊಂಡಿದೆ. ಮರದಿಂದ ಮರಕ್ಕೆ ಇದು ಹಾರುತ್ತಿತ್ತು. ಇದರ ವಿಶೇಷ ಲಕ್ಷಣಗಳು ತಕ್ಷಣಕ್ಕೆ ಗಮನ ಸೆಳೆದಿವೆ. ಈ ಹಿನ್ನೆಲೆ ಅದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು ಎಂದು ಶರ್ಮಾ ತಿಳಿಸಿದ್ದಾರೆ.

rare-albino-monkey-spotted-near-uttarakhands-corbett-tiger-reserve-tourists-flock-to-see-it
ಬಿಳಿ ಕೋತಿ (ETV Bharat)

ವನ್ಯಜೀವಿ ತಜ್ಞರು ಹೇಳುವಂತೆ, ಈ ಪ್ರಾಣಿಯು ವಿಶೇಷವಾದ ತಳಿಯೇನೂ ಅಲ್ಲ. ಆದರೆ ಸಾಮಾನ್ಯ ಮಂಗಕ್ಕೆ ಸೇರಿದ ಜಾತಿಯದ್ದಾಗಿದ್ದು, ಇದನ್ನು ಆಲ್ಬಿನಿಸಂ ಕೋತಿ ಎಂದೇ ಕರೆಯಲಾಗುವುದು. ಇದು ಅಲ್ಬೆನಿಸಂ ಎಂಬುದು ಚರ್ಮ, ಕೂದಲು ಮತ್ತು ಕಣ್ಣುಗಳಲ್ಲಿ ಬಣ್ಣಕ್ಕೆ ಕಾರಣವಾಗುವ ಮೆಲನಿನ್ ಅನುಪಸ್ಥಿತಿಯಿಂದ ಉಂಟಾಗುವ ಅಪರೂಪದ ಆನುವಂಶಿಕ ಸ್ಥಿತಿಯಾಗಿದೆ. ಮೆಲನಿನ್ ಕೊರತೆಯಿಂದಾಗಿ ಅದರ ಚರ್ಮ ಬಿಳಿ ತುಪ್ಪಳ ಹೊಂದಿದೆ ಮತ್ತು ಗೋಚರ ರಕ್ತನಾಳಗಳಿಂದಾಗಿ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಲು ಕಾರಣವಾಗಿದೆ ಎಂದು ಅವರು ವಿವರಿಸಿದರು.

ಈ ಆಲ್ಬೆನಿಸಂ ಸಣ್ಣ ಪ್ರಮಾಣದ ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಎಷ್ಟು ಅಪರೂಪ ಎಂದರೆ, ಸಾವಿರಕ್ಕೆ ಒಂದು ಈ ಆಲ್ಬೆನಿಸಂಗೆ ತುತ್ತಾಗುತ್ತದೆ. ಈ ಕೋತಿಗಳು ಬಿಳಿ ವರ್ಣದಿಂದ ಕಂಗೊಳಿಸುವುದರಿಂದಾಗಿ ಇದು ಬದುಕುವುದು ಸಹ ಸವಾಲಿನಿಂದ ಕೂಡಿದೆ. ಇದು ದೂರದಿಂದ ಗೋಚರಿಸುವುದರಿಂದ ಕಾಡುಗಳಲ್ಲಿ ಬದುಕುವುದು ಕಷ್ಟ. ಇದರಿಂದ ಮೆಲನಿನ್​ ಕೊರತೆಯಿಂದಾಗಿ ಸೂರ್ಯನ ಪ್ರಖರ ಬೆಳಕಿಗೆ ಒಡ್ಡಿಕೊಳ್ಳಲು ಸಾಧ್ಯವಿಲ್ಲ, ಹಾಗೇ ಇವು ದೃಷ್ಟಿ ಹೀನತೆ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

rare-albino-monkey-spotted-near-uttarakhands-corbett-tiger-reserve-tourists-flock-to-see-it
ಬಿಳಿ ಕೋತಿ (ETV Bharat)

ಸದ್ಯ ಈ ಬಿಳಿ ಕೋತಿ, ಈ ಪ್ರದೇಶದ ಜನರಲ್ಲಿ ಕುತೂಹಲವನ್ನಂತೂ ಹುಟ್ಟಿ ಹಾಕಿದೆ. ಅನೇಕರು ಈ ಅಪರೂಪದ ಕೋತಿಯನ್ನು ಕಾಣಲು ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಜೊತೆಗೆ ಪ್ರಾಣಿಗಳ ಸುರಕ್ಷತೆ ಮತ್ತು ಅವುಗಳ ನಡುವಳಿಕೆ ಮೇಲೆ ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಅತ್ಯಂತ ಜೀವವೈವಿಧ್ಯದ ಆವಾಸಸ್ಥಾನಗಳಲ್ಲಿ ಒಂದಾಗಿರುವ ಕಾರ್ಬೆಟ್ ಪರಿಸರ ಶ್ರೀಮಂತಿಕೆ ಜೊತೆಗೆ ಅಪರೂಪದ ಆನುವಂಶಿಕ ವ್ಯತ್ಯಾಸಗಳ ಉಪಸ್ಥಿತಿಯು ಒತ್ತಿ ಹೇಳುತ್ತದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಇವುಗಳನ್ನೂ ಓದಿ:

ಅಪಾಯದಲ್ಲಿ ಮಕಾಕ್ ಕೋತಿ ಪ್ರಭೇದ: 40 ವರ್ಷಗಳ ಅಧ್ಯಯನದ ವರದಿ ಬಹಿರಂಗ

ಈ ಕಾಡಿನಲ್ಲಿ ಪತ್ತೆಯಾಯ್ತು ಬಿಳಿ ಮಂಗ; ಏನಿದರ ವಿಶೇಷತೆ ಗೊತ್ತಾ?