ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆಗಳನ್ನು ಅಂಗೀಕರಿಸಿದ ರಾಮ ಮಂದಿರ ಟ್ರಸ್ಟ್
ರಾಮಮಂದಿರ ದೇವಾಲಯ ಟ್ರಸ್ಟ್‌ನ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ್ ಅವರಿಗೆ ಹೆಚ್ಚುವರಿ ಕರ್ತವ್ಯಗಳನ್ನು ವಹಿಸಲಾಗಿದೆ.


Published : July 6, 2026 at 10:02 PM IST
ಅಯೋಧ್ಯಾ, ಉತ್ತರಪ್ರದೇಶ: ದೇಣಿಗೆ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೋಮವಾರ ತನ್ನ ಪ್ರಧಾನ ಕಾರ್ಯದರ್ಶಿ ಮತ್ತು ಸದಸ್ಯ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಅಂಗೀಕರಿಸಿದೆ. ದೇವಾಲಯ ಟ್ರಸ್ಟ್‌ನ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ್ ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಟ್ರಸ್ಟ್‌ನ ಮೂರು ಗಂಟೆಗಳ ಸಭೆಯ ನಂತರ ಖಜಾಂಚಿ ಗೋವಿಂದ್ ಗಿರಿ ಸುದ್ದಿಗಾರರಿಗೆ ತಿಳಿಸಿದರು.
ದೇವಾಲಯ ದೇಣಿಗೆ ದುರುಪಯೋಗದ ಪರಿಣಾಮಗಳನ್ನು ಚರ್ಚಿಸುವ ಸಭೆ ಮಧ್ಯಾಹ್ನ 3.15 ಕ್ಕೆ ರಾಮ ಜನ್ಮಭೂಮಿ ಸಂಕೀರ್ಣದೊಳಗಿನ ಅತಿಥಿ ಗೃಹದಲ್ಲಿ ಪ್ರಾರಂಭವಾಯಿತು. ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಸೇರಿದಂತೆ ಒಂಬತ್ತು ಖಾಯಂ ಸದಸ್ಯರಲ್ಲಿ ಏಳು ಮಂದಿ ಹಾಜರಿದ್ದರು. ರೈ ಮತ್ತು ಮಿಶ್ರಾ ಸಭೆಗೆ ಹಾಜರಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಭೆ ಸಂಜೆ 6.30 ರ ಸುಮಾರಿಗೆ ಮುಕ್ತಾಯವಾಯಿತು ಎಂದು ತಿಳಿದು ಬಂದಿದೆ. ದೇವಾಲಯದ ಟ್ರಸ್ಟ್‌ನ ವ್ಯವಸ್ಥೆಯಲ್ಲಿನ ಲೋಪಗಳನ್ನು ಖಜಾಂಚಿ ಗೋವಿಂದ್ ದೇವ್ ಗಿರಿ ಒಪ್ಪಿಕೊಂಡರು ಮತ್ತು ರಾಮ ದೇವಾಲಯದಲ್ಲಿ ನಡೆದಿರುವ ಕಾಣಿಕೆಗಳ ಕಳ್ಳತನವು ಲಕ್ಷಾಂತರ ಭಕ್ತರಿಗೆ ತೀವ್ರ ನೋವುಂಟು ಮಾಡಿದೆ ಎಂದರು. ಕಾಣಿಕೆಗಳ ಕಳ್ಳತನವನ್ನು ಉಲ್ಲೇಖಿಸಿದ ಅವರು, ಲಕ್ಷಾಂತರ ರಾಮ ಭಕ್ತರು ಇದರಿಂದ ಬೇಸರಗೊಂಡಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲ ಇದೇ ವೇಳೆ ಟ್ರಸ್ಟ್‌ನ ನಿರ್ವಹಣೆಯಲ್ಲಿನ ನ್ಯೂನತೆಗಳನ್ನು ಒಪ್ಪಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ಮಹಂತ್ ನೃತ್ಯ ಗೋಪಾಲ್ ದಾಸ್ ವಹಿಸಿದ್ದರು. ಗೋವಿಂದ್ ಅವರು ಕಾರ್ಯಸೂಚಿಯನ್ನು ಮಂಡಿಸಿದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮತ್ತು ಸದಸ್ಯ ಡಾ. ಅನಿಲ್ ಮಿಶ್ರಾ ಸಭೆಗೆ ಗೈರುಹಾಜರಾಗಿದ್ದರು.
ಟ್ರಸ್ಟ್ ಸದಸ್ಯರಾದ ವಿಶ್ವ ತೀರ್ಥ ಪ್ರಸನ್ನಾಚಾರ್ಯ, ಸ್ವಾಮಿ ಪರಮಾನಂದ ಗಿರಿ, ಜಗದ್ಗುರು ಬಸುದೇವಾನಂದ ಸರಸ್ವತಿ, ಕೃಷ್ಣ ಮೋಹನ್, ಮಹಾಂತ್ ದಿನೇಂದ್ರ ದಾಸ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ತ್ರಿಪಾಠಿ (ಎಕ್ಸ್-ಆಫಿಸಿಯೊ ಸದಸ್ಯ), ವಿಎಚ್‌ಪಿ ನಾಯಕ ದಿನೇಶ್ ಚಂದ್ರ ಮತ್ತು ವಿಶೇಷ ಆಹ್ವಾನಿತರಾಗಿ ಮಹಾಂತ್ ಕಮಲ್ ನಯನ್ ದಾಸ್ ಉಪಸ್ಥಿತರಿದ್ದರು.
ಟ್ರಸ್ಟ್ ಸಂಯೋಜಕ ಕೆ. ಪರಸನ್, ಪ್ರಧಾನ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್, ಕೇಂದ್ರ ಕಾರ್ಯದರ್ಶಿ ಪ್ರಶಾಂತ್ ಲೋಖಂಡೆ ಮತ್ತು ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ:
ವಿಶ್ವದ ಅತಿ ಬಲಿಷ್ಠ ಪಾಸ್ಪೋರ್ಟ್ ಹೊಂದಿರುವ ರಾಷ್ಟ್ರ ಯಾವುದು? ಭಾರತದ ಕ್ರಮಾಂಕ ಎಷ್ಟಿದೆ?
ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಮೌನವೇಕೆ?: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

