ETV Bharat / bharat

ರಕ್ಷಾ ಬಂಧನ ಬಂಪರ್ ಲಾಟರಿ: 500 ರೂಪಾಯಿ ಟಿಕೆಟ್ ಖರೀದಿಸಿ 7 ಕೋಟಿ ಗೆದ್ದ ಪೊಲೀಸ್‌ ಕಾನ್‌ಸ್ಟೇಬಲ್

ಫಿರೋಜ್‌ಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿ ಲಾಟರಿಯಲ್ಲಿ 7 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Gurpreet Singh of Ferozepur
ಫಿರೋಜ್‌ಪುರದ ಗುರುಪ್ರೀತ್ ಸಿಂಗ್ (ETV Bharat)
author img

By ETV Bharat Karnataka Team

Published : August 30, 2026 at 5:05 PM IST

1 Min Read
Choose ETV Bharat

ಫಿರೋಜ್​ಪುರ(ಪಂಜಾಬ್): ರಾಖಿ ಹಬ್ಬದ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ನಡೆಸುವ ಲಾಟರಿ ಸ್ಪರ್ಧೆಯಲ್ಲಿ ಫಿರೋಜ್‌ಪುರ ಜಿಲ್ಲೆಯ ಮಾಲ್ವಾಲ್ ಗ್ರಾಮದ ನಿವಾಸಿ ಗುರುಪ್ರೀತ್ ಸಿಂಗ್ ಎಂಬವರು ಈ ಬಾರಿ 7 ಕೋಟಿ ರೂ. ಗೆದ್ದಿದ್ದಾರೆ.

ಗುರುಪ್ರೀತ್ ಸಿಂಗ್ ಅವರು ಪಂಜಾಬ್ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಫಿರೋಜ್‌ಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿ ಲಾಟರಿಯಲ್ಲಿ 7 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

500 ರೂ.ಗೆ ಟಿಕೆಟ್​ ಖರೀದಿ: "ನಾನು ನನ್ನ ತಂದೆಯೊಂದಿಗೆ ನಗರಕ್ಕೆ ಬಂದಿದ್ದೆ. ನಾವು ಮನೆಗೆ ಹಿಂದಿರುಗುವ ಹೊತ್ತಿಗೆ, ಈ ಬಾರಿ ಲಾಟರಿ ಟಿಕೆಟ್ ಏಕೆ ಖರೀದಿಸಬಾರದು ಎಂಬ ಯೋಚನೆ ಬಂತು. ನನ್ನ ಅದೃಷ್ಟ ಪರೀಕ್ಷಿಸಲು ಆಸೆಯಾಗಿತ್ತು. ನಂತರ ನನ್ನ ತಂದೆಯೊಂದಿಗೆ ಲಾಟರಿ ಟಿಕೆಟ್ ಖರೀದಿಸುವ ಆಲೋಚನೆ ಹಂಚಿಕೊಂಡೆ. ಆದ್ದರಿಂದ ನಾವು ಲಾಟರಿ ಟಿಕೆಟ್ ಖರೀದಿಸಿದೆವು. ನಾವು ಯಾವುದೇ ಸಂಖ್ಯೆಯನ್ನು ಆಯ್ಕೆ ಮಾಡಲಿಲ್ಲ. ಅಂಗಡಿಯವರಿಗೆ 500 ರೂ.ಗಳನ್ನು ನೀಡಿ ರಾಖಿ ಬಂಪರ್ ಟಿಕೆಟ್ ಖರೀದಿಸಿದೆವು" ಎಂದು ಗುರುಪ್ರೀತ್ ಸಿಂಗ್ ತಿಳಿಸಿದರು.

"ಈ ಲಾಟರಿಯ ಫಲಿತಾಂಶ ಹೇಗೆ ಬರುತ್ತವೆ ಎಂದು ನನಗೆ ತಿಳಿದಿರಲಿಲ್ಲ. ನಿನ್ನೆ ತಡರಾತ್ರಿ ಫಲಿತಾಂಶ ಬಂತು ಮತ್ತು ಮರುದಿನ ಅನೇಕ ಜನರು ನನ್ನ ಟಿಕೆಟ್​ ನಂಬರ್​ ಪರಿಶೀಲಿಸಲು ಹೇಳಲಾರಂಭಿಸಿದರು. ನಾನು ಲಾಟರಿ ಖರೀದಿಸಿದ ಅಂಗಡಿಗೆ ಕರೆ ಮಾಡಿ ನನ್ನ ಲಾಟರಿ ಸಂಖ್ಯೆ ಇದು ಎಂದು ಹೇಳಿದೆ. ಅವರು ಹೌದು, ನಿಮ್ಮ ಲಾಟರಿ ಸಂಖ್ಯೆಗೆ ಮೊದಲ ಬಹುಮಾನ 7 ಕೋಟಿ ರೂ. ಡ್ರಾ ಮಾಡಲಾಗಿದೆ ಎಂದು ಹೇಳಿದರು. ಆ ಸಮಯದಲ್ಲಿ, ನನಗೆ ಮನವರಿಕೆಯಾಗಲಿಲ್ಲ. ನಂತರ ನಾವು ಅಂಗಡಿಗೆ ಬಂದು ಡೀಲರ್ ಅನ್ನು ಭೇಟಿಯಾದೆವು" ಎಂದು ಹೇಳಿದರು.

ಫಿರೋಜ್‌ಪುರ ಜಿಲ್ಲೆಗೆ ಮೊದಲ ಬಾರಿಗೆ 7 ಕೋಟಿ ರೂ. ಲಾಟರಿ ಬಹುಮಾನ ಬಂದಿದೆ. ನಮ್ಮ ಅಂಗಡಿಯಿಂದ ಲಾಟರಿ ಖರೀದಿಸಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಇದಕ್ಕೂ ಮೊದಲು 7 ರೂ. ಟಿಕೆಟ್‌ಗೆ 21 ಲಕ್ಷ ರೂ. ಬಹುಮಾನ ನೀಡಲಾಗಿತ್ತು ಎಂದು ಲಾಟರಿ ಮಾರಾಟಗಾರರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಕೇರಳ ಓಣಂ ಬಂಪರ್ ಲಾಟರಿ: ಈ ಸಲ ಗೆದ್ದವರಿಗೆ 30 ಕೋಟಿ ರೂ. ಬಹುಮಾನ, ಯಾರಿಗೆ ಆ ಅದೃಷ್ಟ?