ETV Bharat / bharat

30 ಲಕ್ಷ ಮೌಲ್ಯದ​ ಮೊಬೈಲ್ ಕಳ್ಳತನ ಪ್ರಕರಣ; ರಾಜಸ್ಥಾನ ಮೂಲದ ಗ್ಯಾಂಗ್​ ಬಂಧನ

ಬಂಧಿತ ಆರೋಪಿಗಳು ರಾಜಸ್ಥಾನ- ಹರಿಯಾಣ ಮೂಲದವರಾಗಿದ್ದು, ಸಿನಿಮೀಯ ರೀತಿಯಲ್ಲಿ ಕಳ್ಳತನ ಎಸಗಿ, ಬೇರೆ ರಾಜ್ಯಗಳಿಗೆ ಪರಾರಿಯಾಗುವುದನ್ನು ಇವರು ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ.

Police Arrested Rajasthan Gang Theft From Karnataka In Karad Mobile Robbery Case
ಕರಾದ್​ ಮೊಬೈಲ್ ಕಳ್ಳತನ ಪ್ರಕರಣ (ETV BHARAT)
author img

By ETV Bharat Karnataka Team

Published : September 3, 2026 at 10:51 AM IST

2 Min Read
Choose ETV Bharat

ಕರಾದ್​ (ಮಹಾರಾಷ್ಟ್ರ): ಮಹಾರಾಷ್ಟ್ರದ ಕರಾದ್ ನಗರದ ಶೋರೂಮ್ ಒಂದರಿಂದ 30 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಹೊಸಕೋಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಹರಿಯಾಣದ ನುಹ್-ಮೇವಾತ್ ಜಿಲ್ಲೆಯ ಅಬ್ದುಲ್ಹಯ್ ಬಶೀರ್ ಅಹ್ಮದ್ ಮತ್ತು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಅಲಾವುದ್ದೀನ್ ಝಹೀರುದ್ದೀನ್ ಎಂದು ಗುರುತಿಸಲಾಗಿದೆ.

ಉಳಿದ ಇಬ್ಬರು ಶಂಕಿತರನ್ನು ಪತ್ತೆಹಚ್ಚಲು ಸತಾರಾ ಪೊಲೀಸ್ ತಂಡ ರಾಜಸ್ಥಾನ ಮತ್ತು ಹರಿಯಾಣದಲ್ಲಿ ಬೀಡುಬಿಟ್ಟಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಿಂಗಳೆ ತಿಳಿಸಿದ್ದಾರೆ.

ಸಿನಿಮೀಯ ರೀತಿ ಕಳ್ಳತನ: ಈ ಆರೋಪಿಗಳ ಈ ಕಳವು ಪ್ರಕರಣದ ಕಾರ್ಯವಿಧಾನ ತಮಿಳು ಚಿತ್ರದ ಶೈಲಿಯನ್ನು ಹೊಂದಿದ್ದು, ಬೆರಗುಗೊಳಿಸುವಂತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಘಟಿತ ದರೋಡೆ ಪ್ರಕರಣದ ಕಥಾ ಹಂದರವನ್ನು ಹೊಂರುವ ಹಿಂದಿಗೆ ಡಬ್​ ಆಗಿದ್ದ ತಮಿಳಿನ ​ಚಲನಚಿತ್ರದಂತೆ ಆರೋಪಿಗಳು ಅಪರಾಧವೆಸಗಿ ಬೇರೆ ಬೇರ ರಾಜ್ಯಕ್ಕೆ ಪರಾರಿಯಾಗಿದ್ದರು. ಕರಾದ್ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ತಂಡವು ಇದೇ ರೀತಿಯ ಕಾರ್ಯವಿಧಾನವನ್ನು ಅನುಸರಿಸಿದ್ದು, ಆಗಸ್ಟ್ 21 ರಂದು ನಸುಕಿನಜಾವ ಕರಾದ್ ನಗರದ 'ಎಸ್.ಎಸ್. ಕಮ್ಯುನಿಕೇಷನ್' ಎಂಬ ಮೊಬೈಲ್ ಶೋರೂಮ್‌ನಲ್ಲಿ 30 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿ, ಪರಾರಿಯಾಗಿದ್ದರು.

ಈ ಪ್ರಕರಣದ ತನಿಖೆಗೆ ಮುಂದಾದ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಗೋಡ್ಸೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳರು ಕೃತ್ಯದ ನಂತರ ಪರಾರಿಯಾಗಲು ಸ್ವಿಫ್ಟ್​ ಕಾರನ್ನು ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಸಿಸಿಟಿವಿಯಿಂದ ಸ್ವಿಫ್ಟ್ ಕಾರಿನ ಕುರಿತಾದ ಮಾಹಿತಿ ಸಿಕ್ಕಿತು. ಶಂಕಿತರ ಸಿಡಿಆರ್ ಮತ್ತು ಎಸ್‌ಡಿಆರ್​ಗಳ ತಾಂತ್ರಿಕ ವಿಶ್ಲೇಷಣೆ ಪರಿಶೀಲಿಸಿದಾಗ ಆರೋಪಿಗಳು ಹರಿಯಾಣ ಮತ್ತು ರಾಜಸ್ಥಾನದವರಾಗಿದ್ದು, ಹಲವು ಪ್ರಕರಣಗಳಲ್ಲಿ ವಾಂಟೆಡ್​ ಆರೋಪಿಗಳಾಗಿದ್ದರು.

ಈ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಆರೋಪಿಗಳು ಸುಮಾರು 12 ದಿನ ಯಾವುದೇ ಸುಳಿವು ನೀಡದೆ ಹೆದ್ದಾರಿ ಟೋಲ್​ ಪ್ಲಾಜಾಗಳನ್ನು ದಾಟಿದ್ದರು. ಅಲ್ಲದೇ, ಈ ಗುಂಪು ಕಳ್ಳತನ ನಡೆಸಲು ಹರಿಯಾಣ ಮತ್ತು ರಾಜಸ್ಥಾನದಿಂದ ಸಹಚರರನ್ನು ಕರೆಸಿಕೊಂಡಿದ್ದರು ಎಂಬುದು ತಿಳಿದು ಬಂದಿದೆ.

ಆರೋಪಿಗಳು ಕಳ್ಳತನ ಮಾಡಿ, ಕದ್ದ ಸರಕನ್ನು ತಮ್ಮ ಟ್ರಕ್‌ನಲ್ಲಿ ತುಂಬಿಕೊಂಡ ನಂತರ ಹರಿಯಾಣಕ್ಕೆ ಪರಾರಿಯಾಗಿದ್ದರು. ಅಲ್ಲಿಂದ ಮತ್ತೊಂದು ಸರಕಿನ ಸಾಗಣೆಯನ್ನು ತುಂಬಿಕೊಂಡು, ಆಂಧ್ರಪ್ರದೇಶದ ಮಾರ್ಗವಾಗಿ ಆಗಸ್ಟ್ 27ಕ್ಕೆ ಕರ್ನಾಟಕಕ್ಕೆ ಮರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸೆಪ್ಟಂಬರ್ 7 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಉಳಿದ ಇಬ್ಬರು ಶಂಕಿತರ ಪತ್ತೆಗಾಗಿ ಸ್ಥಳೀಯ ಅಪರಾಧ ವಿಭಾಗದ ತಂಡ ಮುಂದಾಗಿದೆ.

ಇವುಗಳನ್ನೂ ಓದಿ:

ದೇಶಾದ್ಯಂತ ಭಾರಿ ಮಳೆ; ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಸಾಧ್ಯತೆ: IMD ಎಚ್ಚರಿಕೆ

ಇವಿಎಂಗಳಲ್ಲಿ ಟೋಟಲೈಸರ್​ ಸಾಧನ ಅಳವಡಿಸಿದರೆ ಏನಾಗುತ್ತೆ?: ಮಾಹಿತಿ ನೀಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಸೂಚನೆ