ಸೋಮನಾಥ ಸ್ವಾಭಿಮಾನ ಪರ್ವ: ಶೌರ್ಯ ಯಾತ್ರೆಯಲ್ಲಿ ಪ್ರಧಾನಿ ಮೋದಿ ಭಾಗಿ
ಗುಜರಾತ್‌ನ ಪ್ರಸಿದ್ಧ ಶ್ರೀ ಸೋಮನಾಥ ದೇಗುಲದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ'ದ ಭಾಗವಾಗಿ ಇಂದು ಆಯೋಜಿಸಲಾದ ಶೌರ್ಯ ಯಾತ್ರೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು. ಈ ಯಾತ್ರೆಯುದ್ದಕ್ಕೂ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನಗಳು ಮೇಳೈಸಿದವು.

Published : January 11, 2026 at 11:05 AM IST
ಸೋಮನಾಥ(ಗುಜರಾತ್): ಇಲ್ಲಿನ ಗಿರ್ ಸೋಮನಾಥ ಜಿಲ್ಲೆಯ ಪ್ರಸಿದ್ಧ ಶ್ರೀ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸುವ ಉದ್ದೇಶದಿಂದ ಇಂದು ಆಯೋಜಿಸಲಾಗಿರುವ ವಿಧ್ಯುಕ್ತ ಮೆರವಣಿಗೆ 'ಶೌರ್ಯ ಯಾತ್ರೆ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಸೋಮನಾಥ ಸ್ವಾಭಿಮಾನ ಪರ್ವದ ಭಾಗವಾಗಿ ಆಯೋಜಿಸಲಾದ ಈ ಯಾತ್ರೆಯಲ್ಲಿ ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ 108 ಕುದುರೆಗಳ ಮೆರವಣಿಗೆ ನಡೆಯಿತು.
#WATCH | Gujarat | Prime Minsiter Narendra Modi's 'shaurya yatra' underway in Somnath, as part of the Somnath Swabhiman Parv, which is being celebrated from 8-11 January.
— ANI (@ANI) January 11, 2026
Source: ANI/ DD pic.twitter.com/JDWRP6MmXC
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಯಾತ್ರೆಯ ಮಾರ್ಗದ ಎರಡೂ ಬದಿಗಳಲ್ಲಿ ಭಾರೀ ಸಂಖ್ಯೆಯ ಜನ ಮತ್ತು ಭಕ್ತರು ಸೇರಿದ್ದರು.
ವಿಶೇಷವಾಗಿ, ವಿನ್ಯಾಸಗೊಳಿಸಲಾದ ವಾಹನದ ಮೇಲೆ ಪ್ರಧಾನಿ ಮೋದಿ ನಿಂತಿದ್ದರು. ಅವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇದ್ದರು. ಯಾತ್ರೆ ಒಂದು ಕಿ.ಮೀ. ದೂರ ಸಾಗಿತು. ಇಬ್ಬರೂ ಜನರತ್ತ ಕೈಬೀಸುತ್ತಾ ಸಾಗಿದರು.
ನಂತರ, ಮೋದಿ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೋಮನಾಥ ಸ್ವಾಭಿಮಾನ್ ಪರ್ವವನ್ನು ಗುರುತಿಸುವ ಸಾರ್ವಜನಿಕ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಲಿದ್ದಾರೆ.
ಭವಿಷ್ಯದ ಪೀಳಿಗೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರೇರೇಪಿಸುತ್ತಿರುವ ಸೋಮನಾಥ ದೇವಾಲಯವನ್ನು ರಕ್ಷಿಸಲು ತ್ಯಾಗ ಮಾಡಿರುವ ಭಾರತದ ಅಸಂಖ್ಯಾತ ನಾಗರಿಕರನ್ನು ಸ್ಮರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
#WATCH | Gujarat | Prime Minsiter Narendra Modi's 'shaurya yatra' underway in Somnath, as part of the Somnath Swabhiman Parv, which is being celebrated from 8-11 January.
— ANI (@ANI) January 11, 2026
Source: ANI/ DD pic.twitter.com/BM2uhJ7Gmn
1026ರಲ್ಲಿ ದಾಳಿಕೋರ ಘಜ್ನಿ ಮಹಮ್ಮದ್ ಸೋಮನಾಥ ದೇವಾಲಯದ ಮೇಲೆ ಆಕ್ರಮಣ ಮಾಡಿ 1,000 ವರ್ಷಗಳನ್ನು ಪೂರೈಸಿದ ನಂತರ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ.
ಶತಮಾನಗಳಿಂದ ದೇಗುಲದ ನಾಶಕ್ಕೆ ಪದೇ ಪದೇ ಪ್ರಯತ್ನಗಳು ನಡೆದಿದ್ದರೂ ಸೋಮನಾಥ ದೇವಾಲಯ ಇಂದು ಸ್ಥಿತಿಸ್ಥಾಪಕತ್ವ, ನಂಬಿಕೆ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಬಲ ಸಂಕೇತವಾಗಿ ನಿಂತಿದೆ. ಸಾಮೂಹಿಕ ಸಂಕಲ್ಪ ಮತ್ತು ಅದರ ಪ್ರಾಚೀನ ವೈಭವವನ್ನು ಮರುಸ್ಥಾಪಿಸುವ ಪ್ರಯತ್ನಗಳಿಂದಾಗಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸಾವಿರ ವರ್ಷಗಳ ಹಿಂದಿನ ದಾಳಿಗಳ ಬಳಿಕವೂ ನಂಬಿಕೆ, ಸ್ವಾಭಿಮಾನದ ನೆಲೆ ಸೋಮನಾಥ: ಪ್ರಧಾನಿ ಮೋದಿ

