ಭಾರತದಲ್ಲಿ ವೆನಿಜುವೆಲಾ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್; ಪ್ರಧಾನಿ ಮೋದಿ ಜತೆ ಮಾತುಕತೆ
ಇಂಧನ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಔಷಧ, ಆರೋಗ್ಯ ರಕ್ಷಣೆ, ಸಾರಿಗೆ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.


Published : June 4, 2026 at 1:36 PM IST
ನವದೆಹಲಿ: ವೆನೆಜುವೆಲಾ ದೇಶದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಇಂದು ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು. ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಕೂಡಾ ಹಾಜರಿದ್ದರು.
ಈ ಕುರಿತು ಮೊದಲೇ ಪ್ರಕಟಣೆ ಹೊರಡಿಸಿದ್ದ ವಿದೇಶಾಂಗ ಸಚಿವಾಲಯ, ಭಾರತ ಮತ್ತು ವೆನಿಜುವೆಲಾ ಸಂಬಂಧಗಳ ಪರಿಶೀಲನೆ ಮತ್ತು ಇಂಧನ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಔಷಧ, ಆರೋಗ್ಯ ರಕ್ಷಣೆ, ಸಾರಿಗೆ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಭೆ ನಡೆಯಲಿದೆ ಎಂದು ತಿಳಿಸಿತ್ತು.
ಇದಕ್ಕೂ ಮುನ್ನ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ರೊಡ್ರಿಗಸ್‌ರನ್ನು ಭೇಟಿಯಾಗಿದ್ದು, ದಕ್ಷಿಣ ಅಮೆರಿಕ ದೇಶಗಳೊಂದಿಗೆ ಭಾರತದ ಸಂಬಂಧ ಬಲಪಡಿಸುವ ಬದ್ದತೆಯನ್ನು ಪುನರುಚ್ಚರಿಸಿದ್ದರು.
Pleased to call on Acting President Delcy Rodríguez of Venezuela in New Delhi today.
— Dr. S. Jaishankar (@DrSJaishankar) June 4, 2026
Deeply value her longstanding commitment to the India - Venezuela relationship.
Her meeting with PM @narendramodi will further strengthen our cooperation.
🇮🇳 🇻🇪 pic.twitter.com/kMkR9hYcVy
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅವರು, ವೆನಿಜುವೆಲಾದ ಹಂಗಾಮಿ ಅಧ್ಯಕ್ಷರಾದ ಡೆಲ್ಸಿ ರೊಡ್ರಿಗಸ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದು ಸಂತಸ ತಂದಿದೆ. ಭಾರತ ಮತ್ತು ವೆನಿಜುವೆಲಾ ಸಂಬಂಧಗಳ ದೀರ್ಘಕಾಲದ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಜತೆಗೆ ರೊಡ್ರಿಗಸ್ ಅವರ ಭೇಟಿಯು ಉಭಯ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದ್ದರು.
ವೆನಿಜುವೆಲಾ ನಿಯೋಗಕ್ಕೆ ಶುಭಕೋರಿ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯ, ಈ ಭೇಟಿ ಎರಡು ದೇಶಗಳಿಗೆ ಸಹಕಾರ ಬಲಗೊಳಿಸಲು ಅವಕಾಶ ನೀಡಲಿದೆ. ದ್ವಿಪಕ್ಷೀಯ ಪಾಲುದಾರಿಕೆಯ ವೇಗ ಹೆಚ್ಚಿಸುತ್ತದೆ ಎಂದಿದ್ದರು.
ವೆನಿಜುವೆಲಾ ನಿಯೋಗ ಜೂನ್ 3ರಿಂದ ಜೂನ್ 7ರ ವರೆಗೆ ಭಾರತದಲ್ಲಿರಲಿದೆ. ಈ ಮೊದಲು ನಿಗದಿಯಾದಂತೆ, ದೆಹಲಿಯಲ್ಲಿ ಜೂನ್ 1ರಂದು ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಶೃಂಗಸಭೆಯಲ್ಲಿ ಅವರು ಭಾಗಿಯಾಗಬೇಕಿತ್ತು. ಆದರೆ ನಂತರ ಅದನ್ನು ಮುಂದೂಡಲಾಯಿತು.
ವೆನಿಜುವೆಲಾ ಹಂಗಾಮಿ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳು, ಆರ್ಥಿಕತೆ ಮತ್ತು ಹಣಕಾಸು, ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಹನ ಮತ್ತು ಮಾಹಿತಿ ಮತ್ತು ಸಾರಿಗೆ ಸಚಿವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗ ಆಗಮಿಸಿದೆ.
ಇವುಗಳನ್ನೂ ಓದಿ:

