ETV Bharat / bharat

ಮನುಷ್ಯರು, ಪ್ರಾಣಿಗಳು ಮಾತ್ರವಲ್ಲ, ವಿದೇಶದಿಂದ ತಂದ ಸಸ್ಯಗಳಿಗೂ ಇದೆ 'ಕ್ವಾರಂಟೈನ್​'

ವಿದೇಶಗಳಿಂದ ತರುವ ಸಸ್ಯಗಳಿಗೆ 45 ದಿನಗಳ ಕ್ವಾರಂಟೈನ್​ ನಿಯಮವಿದೆ. ಯಾಕೆ ಎಂಬುದು ನಿಮಗೆ ಗೊತ್ತಾ?.

45 DAYS QUARANTINE FOR PLANTS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : September 1, 2026 at 2:23 PM IST

2 Min Read
Choose ETV Bharat

ರಾಜಮಹೇಂದ್ರವರಂ (ಆಂಧ್ರಪ್ರದೇಶ): ಕೋವಿಡ್​-19 ಸಾಂಕ್ರಾಮಿಕ ವೇಳೆ 'ಕ್ವಾರಂಟೈನ್​' ಎಂಬ ಪದ ದೇಶಾದ್ಯಂತ ಸದ್ದು ಮಾಡಿತು. ರೋಗದಿಂದ ರಕ್ಷಿಸಿಕೊಳ್ಳಲು ಮತ್ತು ಹರಡುವಿಕೆಯನ್ನು ತಡೆಯಲು ಸರ್ಕಾರ ಸೋಂಕಿತರನ್ನು ಒಂದೆಡೆ (ಕ್ವಾರಂಟೈನ್​) ಇರುವಂತೆ ಮಾಡಿತು. ಮನುಷ್ಯರು, ಪ್ರಾಣಿಗಳಿಗೆ ಅನ್ವಯವಾಗುವ ಈ ನಿಯಮ ಸಸ್ಯಗಳಿಗೂ ಇದೆ ಎಂಬುದು ನಿಮಗೆ ಗೊತ್ತೇ?.

ಸಾಮಾನ್ಯವಾಗಿ ಸಾಕುಪ್ರಾಣಿಗಳು ಮತ್ತು ಇತರ ಪ್ರಾಣಿಗಳನ್ನು ವಿದೇಶಕ್ಕೆ ಕಳುಹಿಸುವಾಗ ಈ ಕ್ವಾರಂಟೈನ್​ ನಿಯಮ ಅನುಸರಿಸಲಾಗುತ್ತದೆ. ಈ ನಿಯಮ ವಿದೇಶಗಳಿಂದ ಭಾರತಕ್ಕೆ ತರುವ ಸಸ್ಯಗಳಿಗೂ ಅನ್ವಯ. 45 ದಿನಗಳ ಕಾಲ ಅವನ್ನು ಕ್ವಾರಂಟೈನ್​ಗೆ ಒಳಪಡಿಸಲಾಗುತ್ತದೆ. ಅದು ಹೇಗೆ ಎಂಬುದನ್ನು ನಾವಿಲ್ಲಿ ನೋಡೋಣ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂ ಪ್ರದೇಶವನ್ನು 'ಭಾರತದ ನರ್ಸರಿ ಗ್ರಾಮ' ಎಂದು ಕರೆಯಲಾಗುತ್ತದೆ. ಇಲ್ಲಿ ನೂರಾರು ನರ್ಸರಿಗಳಿದ್ದರೂ, ಅವುಗಳಲ್ಲಿ 10 ಮಾತ್ರ ಅಂತರರಾಷ್ಟ್ರೀಯ ಪರವಾನಗಿಗಳನ್ನು ಹೊಂದಿವೆ. ಚೀನಾ, ಸ್ಪೇನ್, ಮಲೇಷ್ಯಾ, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿ ವಿವಿಧ ದೇಶಗಳಿಂದ ಸುಮಾರು 50 ತಳಿಯ ಸಸ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಸ್ಥಳೀಯ ಹವಾಮಾನಕ್ಕೆ ಒಗ್ಗಿಕೊಳ್ಳುವ ಪ್ರಕ್ರಿಯೆ: ವಿದೇಶಗಳಿಂದ ಅಪರೂಪದ ತಳಿಗಳು ಮತ್ತು ಶತಮಾನಗಳಷ್ಟು ಹಳೆಯದಾದ ಮರಗಳನ್ನು ಇಲ್ಲಿಗೆ ಆಮದು ಮಾಡಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುವಂತೆ ಮಾಡಲಾಗುತ್ತದೆ. ಚೀನಾದಿಂದ ಸೈಕಾಸ್​, ಸ್ಪೇನ್​ನಿಂದ ಆಲಿವ್​​, ಅಲಂಕಾರಿಕ ಗಿಡಗಳು ಮತ್ತು ಪಾಮ್ಸ್​​, ಸ್ವಿಟ್ಜರ್‌ಲ್ಯಾಂಡ್‌ನಿಂದ ವಿವಿಧ ಹೂವಿನ ಸಸ್ಯಗಳನ್ನು ತರಲಾಗುತ್ತದೆ. ನಂತರ ಇವುಗಳನ್ನು ಸ್ಥಳೀಯ ಸಸ್ಯಗಳ ಜೊತೆಗೆ ಬೆರೆಸಿ ಇಲ್ಲಿಯೇ ಸಂತಾನೋತ್ಪತ್ತಿ ಮಾಡಿ ಉತ್ಪಾದಿಸಲಾಗುತ್ತದೆ. ಗಿಡಗಳು ಬೆಳೆದ ನಂತರ, ಅವುಗಳನ್ನು ಆಕರ್ಷಕ ಆಕಾರಗಳಲ್ಲಿ ಬದಲಾಯಿಸಲಾಗುತ್ತದೆ.

ವಿದೇಶಗಳಿಂದ ಸಸ್ಯಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಸುಲಭವಾಗಿಲ್ಲ. ಯಾವ ದೇಶಗಳಿಂದ ಸಸ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂಬುದರ ಪಟ್ಟಿಯನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಮುಂಚಿತವಾಗಿ ಸಲ್ಲಿಸಬೇಕು. ಇಲಾಖೆಯಿಂದ ಅನುಮೋದಿಸಲ್ಪಟ್ಟ ಸಸ್ಯಗಳನ್ನು ಮಾತ್ರ ಆಮದು ಮಾಡಿಕೊಳ್ಳಬೇಕು. ಕಂಟೇನರ್ ಬುಕ್ ಮಾಡಲು ಕನಿಷ್ಠ 25 ಲಕ್ಷ ರೂಪಾಯಿ ಭದ್ರತಾ ಠೇವಣಿ ಇಡಬೇಕು.

ನರ್ಸರಿಗೆ ತಂದ ಬಳಿಕ ಕ್ವಾರಂಟೈನ್: ಒಳಾಂಗಣ, ಹೊರಾಂಗಣ ಮತ್ತು ಹೂವಿನ ಸಸ್ಯಗಳು ಹಾಗೂ ವರ್ಷಗಳಷ್ಟು ಹಳೆಯ ಮರಗಳನ್ನು ಹವಾನಿಯಂತ್ರಿತ ಕಂಟೈನರ್​ಗಳ ಮೂಲಕ ಸಮುದ್ರ ಮಾರ್ಗವಾಗಿ ಚೆನ್ನೈ ಮತ್ತು ಮುಂಬೈ ಬಂದರುಗಳಿಗೆ ತರಲಾಗುತ್ತದೆ. ಅಲ್ಲಿಂದ, ರಸ್ತೆ ಮಾರ್ಗವಾಗಿ ನರ್ಸರಿಗಳಿಗೆ ಸಾಗಿಸಲಾಗುತ್ತದೆ. ನರ್ಸರಿಗೆ ಬಂದ ತಕ್ಷಣವೇ ಸಸ್ಯಗಳನ್ನು ಮಾರಾಟ ಮಾಡುವಂತಿಲ್ಲ. ಬದಲಿಗೆ ಅವುಗಳನ್ನು 'ಕ್ವಾರಂಟೈನ್' ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ.

ನಿಯಮಾವಳಿಗಳ ಪ್ರಕಾರ ರೂಪಿಸಲಾದ 'ಪ್ಲಾಂಟ್​ ಕ್ವಾರಂಟೈನ್ ಸೆಂಟರ್​​'ನಲ್ಲಿ ಅವುಗಳನ್ನು ಕನಿಷ್ಠ 45 ದಿನಗಳವರೆಗೆ ಇಡಬೇಕು. ಒಳಾಂಗಣ ಮತ್ತು ಹೊರಾಂಗಣ ಸಸ್ಯಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿರುತ್ತದೆ.

ಮಾರಾಟಕ್ಕೆ ಬೇಕು ಅಧಿಕಾರಿಗಳ ಅನುಮತಿ: ಕ್ವಾರಂಟೈನ್​ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಕಸ್ಟಮ್ಸ್ ಅಧಿಕಾರಿಗಳು ಆಮದು ಮಾಡಿಕೊಂಡ ಸಸ್ಯಗಳಲ್ಲಿ ಯಾವುದೇ ಕೀಟಗಳು ಮತ್ತು ರೋಗಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ತಪಾಸಣೆ ನಡೆಸುತ್ತಾರೆ. ನಂತರ ಎಲ್ಲ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುತ್ತಾರೆ. ಸಸ್ಯಗಳ ಫೋಟೋ ಮತ್ತು ಅವುಗಳು ಎಲ್ಲಿವೆ ಎಂಬ ಸ್ಥಳವನ್ನು ಮ್ಯಾಪ್​ ಮಾಡಲಾಗುತ್ತದೆ. ನಿಗದಿತ 45 ದಿನಗಳ ಕ್ವಾರಂಟೈನ್ ಅವಧಿ ಮುಗಿದ ನಂತರವೇ ಅವುಗಳ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ.

ಇವುಗಳನ್ನೂ ಓದಿ: