ETV Bharat / bharat

ಹೊರಗಿನವರು ಬೇಕಾಗಿಯೇ ಇಲ್ಲ, ನಮ್ಮ ಪ್ರೀತಿಪಾತ್ರರೇ ಸಾಕು ಕುಟುಂಬದ ಪರಂಪರೆಗೆ ಹಾನಿ ಮಾಡಲು; ರೋಹಿಣಿ ಆಚಾರ್ಯ ಕಿಡಿ

ನಮ್ಮ ಪರಂಪರೆಗೆ ಗುರುತು ಮತ್ತು ಅಸ್ತಿತ್ವವನ್ನು ನೀಡಿದವರ ಚಿಹ್ನೆಗಳನ್ನು ಅಳಿಸಿಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ರೋಹಿಣಿ ಆಚಾರ್ಯ ಆರೋಪಿಸಿದ್ದಾರೆ.

no-need-for-outsiders-to-destroy-legacy-my-family-members-enough-claims-lalus-daughter-rohini
ರೋಹಿಣಿ ಆಚಾರ್ಯ (PTI)
author img

By ETV Bharat Karnataka Team

Published : January 10, 2026 at 4:28 PM IST

2 Min Read
Choose ETV Bharat

ಪಾಟ್ನಾ (ಬಿಹಾರ): ತಮ್ಮ ಕುಟುಂಬದ ಪರಂಪರೆಯನ್ನು ಹಾಳು ಮಾಡಲು ಹೊರಗಿನವರು ಬೇಡ ನಮ್ಮ ಪ್ರೀತಿಪಾತ್ರರಿಂದಲೇ ಹಾನಿಯಾಗಲಿದೆ ಎಂದು ಆರ್​ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್​ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತಿಳಿಸಿದ್ದಾರೆ.

ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಆಚಾರ್ಯ, ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಪರಂಪರೆಗೆ ಗುರುತು ಮತ್ತು ಅಸ್ತಿತ್ವವನ್ನು ನೀಡಿದವರ ಚಿಹ್ನೆಗಳನ್ನು ಅಳಿಸಿಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಬಹಳ ಶ್ರಮದಿಂದ ಮಾಡಿದ ಮತ್ತು ಸ್ಥಾಪಿಸವಾದ ಪರಂಪರೆಯನ್ನು ಹೊರಗಿನವರು ನಾಶಮಾಡುವ ಅಗತ್ಯವಿಲ್ಲ. ಅದಕ್ಕೆ ನಮ್ಮ ಪ್ರೀತಿಪಾತ್ರರು ಸಾಕು. ತಮ್ಮ ಪೋಸ್ಟ್​ನಲ್ಲಿ ಯಾರ ಹೆಸರನ್ನು ಉಲ್ಲೇಖ ಮಾಡದಿದ್ದರೂ, ಪರಂಪರೆಗೆ ಗುರುತು ಮತ್ತು ಅಸ್ತಿತ್ವವನ್ನು ನೀಡಿದವರ ಚಿಹ್ನೆಗಳನ್ನು ಅಳಿಸಿಹಾಕಲು ನಮ್ಮವರು ಪ್ರಯತ್ನಿಸುತ್ತಿರುವುದು ಆಘಾತಕಾರಿ ಎಂದು ಅವರು ಎಕ್ಸ್​ ಪೋಸ್ಟ್​ ಮಾಡಿದ್ದಾರೆ.

ದುರಹಂಕಾರವು ಮೇಲುಗೈ ಸಾಧಿಸಿದಾಗ, ವಿನಾಶಕಾರಿ ಶಕ್ತಿಗಳು ಕಣ್ಣುಗಳು, ಮೂಗು ಮತ್ತು ಕಿವಿಗಳಾಗುತ್ತವೆ. ಅಂತಹ ಶಕ್ತಿಗಳು ವ್ಯಕ್ತಿಯ ಆಲೋಚನೆ ಮತ್ತು ತೀರ್ಪನ್ನು ನಿಯಂತ್ರಿಸುತ್ತವೆ. ನಮ್ಮ ಬುದ್ದಿಗೆ ಮಂಕು ಕಸಿದಾಗ ಅದು ಸಂಭವಿಸುತ್ತದೆ ಎಂದಿದ್ದಾರೆ. ರೋಹಿಣಿ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಹೊರಹಾಕಿದ್ದಕ್ಕೆ ಅವರು ಅತೃಪ್ತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಬಿಹಾರ ಚುನಾವಣೆಯ ಸಮಯದಲ್ಲಿ ಆರ್​ಜೆಡಿ ಹೀನಾಯವಾಗಿ ಸೋತ ಬಳಿಕ ತಾವು ರಾಜಕೀಯವನ್ನು ಮತ್ತು ಕುಟುಂಬದ ಹಲವು ಬಂಧನಗಳಿಂದ ಹೊರ ಬರುತ್ತಿರುವುದಾಗಿ ಘೋಷಿಸಿದ್ದರು.

ನಾನು ರಾಜಕೀಯ ಹಾಗೂ ನನ್ನ ಕುಟುಂಬದಿಂದ ದೂರಾಗುತ್ತಿದ್ದೇನೆ. ನಾನು ಇದೀಗ ಆರೋಪಗಳನ್ನು ಎದುರಿಸುತ್ತಿದ್ದೇನೆ ಎಂದು ಕಳೆದ ವರ್ಷ ನವೆಂಬರ್​ನಲ್ಲಿ ಮಾಡಿದ್ದ ಪೋಸ್ಟ್​ನಲ್ಲಿ ತಿಳಿಸಿದ್ದರು. ಆರ್​ಜೆಡಿಯ ರಾಜ್ಯಸಭಾ ಸಂಸದರಾಗಿರುವ ಸಂಜಯ್​ ಯಾದವ್​​, ಲಾಲೂ ಪ್ರಸಾದ್​ ಯಾದವ್​ ಅವರ ಕಿರಿಯ ಪುತ್ರ ತೇಜಸ್ವಿ ಯಾದವರ ನಂಬಿಕಾರ್ಹ ವ್ಯಕ್ತಿಯಾಗಿದ್ದಾರೆ. ರಮೀಜ್​ ಕೂಡ ತೇಜಸ್ವಿಯ ಹಳೆಯ ಸ್ನೇಹಿತರಾಗಿದ್ದಾರೆ.

ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ತಂದೆಗೆ ರೋಹಿಣಿ ಕಿಡ್ನಿ ದಾನ ಮಾಡಿದ್ದರು. ನನ್ನ ತಂದೆಗೆ ಕೊಟ್ಟ ಕಲುಷಿತ ಕಿಡ್ನಿಗೆ ಬದಲಾಗಿ ಕೋಟ್ಯಂತರ ರೂಪಾಯಿ ಮತ್ತು ಪಕ್ಷದ ಟಿಕೆಟ್ ಪಡೆದಿದ್ದೇನೆ ಎಂಬ ಆರೋಪವನ್ನು ರೋಹಿಣಿ ಆಚಾರ್ಯ ಎದುರಿಸಿದ್ದರು. ಈ ಆರೋಪಗಳಿಗೆ ತಿರುಗೇಟು ನೀಡಿದ್ದ ರೋಹಿಣಿ, ಕಿಡ್ನಿಯನ್ನು ಕಲುಷಿತ ಎನ್ನುವವರು ಮೊದಲು ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡುವ ಮಹಾನ್ ಕಾರ್ಯ ಆರಂಭಿಸಲಿ ಎಂದು ಸವಾಲು ಕೂಡಾ ಹಾಕಿದ್ದರು.

ಇವುಗಳನ್ನೂ ಓದಿ: ಯಾದವೀ ಕಲಹ: ರೋಹಿಣಿಯ “ಹರಿಯಾಣವಿ ಮಹಾಪುರುಷ” ಟೀಕೆ; ಇನ್ನಷ್ಟು ತೀವ್ರತೆ ಪಡೆದ “ಕಲುಷಿತ ಕಿಡ್ನಿ” ಹೇಳಿಕೆ ವಿವಾದ

'ಹಣ, ಟಿಕೆಟ್‌ಗಾಗಿ ನಾನು ತಂದೆಗೆ ಕೆಟ್ಟ ಕಿಡ್ನಿ ದಾನ ಮಾಡಿರುವುದಾಗಿ ಆರೋಪಿಸಿದ್ರು, ಹಲ್ಲೆ ಮಾಡಲು ಚಪ್ಪಲಿ ಎತ್ತಿದ್ರು'