ETV Bharat / bharat

ಉಗ್ರ ಅಫ್ತಾಬ್​ ಅನ್ಸಾರಿ ಜೈಲು ಕೋಣೆಯಲ್ಲಿ 3 ಐಫೋನ್​, ವೈಫೈ ರೂಟರ್​, ಪೆನ್​ಡ್ರೈವ್​ ಪತ್ತೆ: ಇಬ್ಬರು ಅಧಿಕಾರಿಗಳ ಅಮಾನತು

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಗ್ರ ಅಫ್ತಾಬ್​ ಅನ್ಸಾರಿ ಜೈಲು ಕೋಣೆಯಲ್ಲಿ 3 ಐಫೋನ್​, ವೈಫೈ ರೂಟರ್​, ಪೆನ್​ಡ್ರೈವ್​ ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

AMERICAN CENTER ATTACK MASTERMIND
ಕೋಲ್ಕತ್ತಾದಲ್ಲಿನ ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂ ಜೈಲು. (IANS)
author img

By ETV Bharat Karnataka Team

Published : August 29, 2026 at 5:10 PM IST

2 Min Read
Choose ETV Bharat

ಕೋಲ್ಕತ್ತಾ (ಪಶ್ಚಿಮಬಂಗಾಳ): ಇಲ್ಲಿನ ಅಮೆರಿಕನ್​ ಸೆಂಟರ್​​ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಫ್ತಾಬ್​ ಅನ್ಸಾರಿ ಸೆಲ್​​ನಲ್ಲಿ ಮೊಬೈಲ್ ಫೋನ್​ (ಐಫೋನ್​) ಪತ್ತೆಯಾಗಿದೆ. ಜೈಲಲ್ಲಿದ್ದುಕೊಂಡೇ ಈತ ಉಗ್ರ ಜಾಲವನ್ನು ಸಂಪರ್ಕಿಸುತ್ತಿದ್ದ ಆರೋಪ ಕೇಳಿಬಂದಿದೆ.

ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿರುವ ಅಫ್ತಾಬ್ ಅನ್ಸಾರಿಯ ಕೊಠಡಿಯಲ್ಲಿ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ, ಎರಡು ರೂಟರ್‌ಗಳು, ವೈ-ಫೈ ಉಪಕರಣಗಳು, ಎರಡು ಕಾರ್ಡ್ ರೀಡರ್‌ಗಳು, ಒಂದು ಪೆನ್ ಡ್ರೈವ್, ಇಯರ್‌ಫೋನ್‌ಗಳು ಮತ್ತು 500 ರೂಪಾಯಿ ಮುಖಬೆಲೆಯ 31 ಸಾವಿರ ರೂಪಾಯಿ ಹಣ ಆತನ ಸೆಲ್‌ನಲ್ಲಿ ಪತ್ತೆಯಾಗಿವೆ.

ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂನ ಅಧಿಕಾರಿಯೊಬ್ಬರು ಮಾಹಿತಿ ನೀಡಿದಂತೆ, "ನಾವು ಕಾಲಕಾಲಕ್ಕೆ ಇಂತಹ ವಿಶೇಷ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತೇವೆ. ಇತ್ತೀಚೆಗೆ ನಡೆಸಿದ ಶೋಧದಲ್ಲಿ ಕೈದಿಯ ಸೆಲ್​​ನಲ್ಲಿ ಈ ವಸ್ತುಗಳು ಸಿಕ್ಕಿವೆ. ಇವುಗಳನ್ನು ಬಳಸಿಕೊಂಡು ಆತ ಯಾರೊಂದಿಗೆ ಮತ್ತು ಯಾವ ವಿಷಯಗಳ ಬಗ್ಗೆ ಸಂವಹನ ನಡೆಸುತ್ತಿದ್ದ ಎಂಬುದನ್ನು ಪತ್ತೆ ಮಾಡಬೇಕಿದೆ. ಈ ಘಟನೆಯ ಬಳಿಕ ಜೈಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ" ಎಂದು ತಿಳಿಸಿದರು.

ಘಟನೆಯ ಕುರಿತು ಜೈಲು ಅಧಿಕಾರಿಗಳು ಹೇಸ್ಟಿಂಗ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಉಗ್ರ ಅಫ್ತಾಬ್ ಅನ್ಸಾರಿ ಜೈಲಿನೊಳಗಿಂದ ಮೊಬೈಲ್ ಕರೆಗಳನ್ನು ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ಪಡೆದಿವೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.

ಕರೆಗಳನ್ನು ಮಾಡುವುದರ ಜೊತೆಗೆ, ಜೈಲಿನಲ್ಲಿದ್ದಾಗ ಆತ ಇಂಟರ್ನೆಟ್ ಸಹ ಬಳಸುತ್ತಿದ್ದ. ಈ ಕುರಿತು ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಮಾಹಿತಿಯ ಮೇರೆಗೆ ಇತ್ತೀಚೆಗೆ ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂನ ಸೆಲ್ ಸಂಖ್ಯೆ 14 ರಲ್ಲಿ ಶೋಧ ನಡೆಸಲಾಯಿತು. ಈ ವೇಳೆ, ಅಫ್ತಾಬ್‌ನ ಬಟ್ಟೆ ಮತ್ತು ಹಾಸಿಗೆಗಳಲ್ಲಿ ಅಡಗಿಸಿಡಲಾಗಿದ್ದ 3 ಮೊಬೈಲ್ ಫೋನ್‌ಗಳು ಸಿಕ್ಕಿವೆ. ಎರಡು ರೂಟರ್‌ಗಳು, ವೈ-ಫೈ ಸಾಧನ, ಕಾರ್ಡ್ ರೀಡರ್, ಪೆನ್‌ಡ್ರೈವ್ ಮತ್ತು ಇಯರ್‌ಫೋನ್‌ಗಳು ಪತ್ತೆಯಾಗಿವೆ. 31 ಸಾವಿರ ರೂಪಾಯಿ ಹಣವೂ ದೊರಕಿದೆ. ಇಷ್ಟು ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ನಗದು ಆತನಿಗೆ ಹೇಗೆ ತಲುಪಿತು ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂನಲ್ಲಿರುವ ಕೈದಿಗಳ ಬಳಿ ಮೊಬೈಲ್ ಫೋನ್‌ಗಳ ಸಿಗುತ್ತಿರುವುದು ಇದೇ ಮೊದಲಲ್ಲ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮೇ 15 ರಂದು, ಜೈಲು ಆಡಳಿತದ ಬಗ್ಗೆ ಕಠಿಣ ಎಚ್ಚರಿಕೆ ರವಾನಿಸಿದ್ದರು. ನಂತರ ಜೈಲು ತಪಾಸಣೆ ಕಾರ್ಯ ಚುರುಕುಗೊಳಿಸಲಾಯಿತು. ಹಿಂದಿನ ಸರ್ಕಾರದ ಅವಧಿಯಲ್ಲಿ ಕೈದಿಗಳಿಗೆ ಮೊಬೈಲ್ ಫೋನ್‌ಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.

ಜೈಲಿನಲ್ಲಿ ಶೋಧ ಕಾರ್ಯಾಚರಣೆಯ ನಂತರ ಹಲವಾರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂನ ಸೂಪರಿಂಟೆಂಡೆಂಟ್ ಮತ್ತು ಮುಖ್ಯ ನಿಯಂತ್ರಕರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿದೆ.

ಇದೀಗ, ಉಗ್ರ ಅಫ್ತಾಬ್‌ನ ಮೇಲೆ ನಿರಂತರ ವಿಶೇಷ ಕಣ್ಗಾವಲು ಇಡಲಾಗಿದೆ. 2003 ರಲ್ಲಿ ಕೋಲ್ಕತ್ತಾದ ಅಮೆರಿಕನ್ ಸೆಂಟರ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಈತ ಶಿಕ್ಷೆಗೊಳಗಾಗಿದ್​ದಾನೆ. ವಿಶೇಷ ಕೋರ್ಟ್​​ ನೀಡಿದ್ದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿದೆ.

ಇವುಗಳನ್ನೂ ಓದಿ: