ETV Bharat / bharat

ಜೈಪುರ: ಕ್ಯೂಬಾ ಸುಂದರಿ ಜೋನಾ ಉರಂಗ ಮುಡಿಗೆ ಮಿಸ್ ಟೀನ್ ಇಂಟರ್ನ್ಯಾಷನಲ್ ಪ್ರಶಸ್ತಿ

ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ 30ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.

JOANA URANGA FROM CUBA
ಕ್ಯೂಬಾದ ಜೋನಾ ಉರಂಗ (Organizers Miss Teen)
author img

By ETV Bharat Karnataka Team

Published : August 31, 2026 at 3:35 PM IST

|

Updated : August 31, 2026 at 3:45 PM IST

1 Min Read
Choose ETV Bharat

ಜೈಪುರ: ರಾಜಸ್ಥಾನದ ರಾಜಧಾನಿ ಮತ್ತು 'ಪಿಂಕ್ ಸಿಟಿ' ಜೈಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕ್ಯೂಬಾದ ಜೋನಾ ಉರಂಗಾ ಅವರು ಮಿಸ್ ಟೀನ್ ಇಂಟರ್ನ್ಯಾಷನಲ್- 2026 ಪ್ರಶಸ್ತಿ ಗೆದ್ದು ಬೀಗಿದ್ದಾರೆ.

ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ 30ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ವಿವಿಧ ಸುತ್ತುಗಳಲ್ಲಿ ತಮ್ಮ ಪ್ರತಿಭೆ, ವ್ಯಕ್ತಿತ್ವ, ಆತ್ಮವಿಶ್ವಾಸವನ್ನು ಪ್ರದರ್ಶಿಸಿದ ಸ್ಪರ್ಧಿಗಳಲ್ಲಿ ಅಂತಿಮವಾಗಿ ಕ್ಯೂಬಾದ ಸ್ಪರ್ಧಿ ಕಿರೀಟ ಮುಡಿಗೇರಿಸಿಕೊಂಡರು.

ಟಾಪ್ 5 ವಿಜೇತರು: ಕ್ಯೂಬಾದ ಜೋನ್ನಾ ಉರಂಗಾ ವಿನ್ನರ್, ನಮೀಬಿಯಾದ ಚಾಂಟಲ್ ಬೋರೆನ್ ಮೊದಲ ರನ್ನರ್ ಅಪ್, ಪರಾಗ್ವೆಯ ಜೂಲಿಯಾನಾ ಒಕಾರಿಜ್ ಎರಡನೇ ರನ್ನರ್ ಅಪ್, ಯುಎಸ್ಎಯ ಆಂಡ್ರಿಯಾ ಅಲ್ಮೆಸ್ಟಿಕಾ ಮೂರನೇ ರನ್ನರ್ ಅಪ್ ಸ್ಥಾನ ಮತ್ತು ಯುಎಸ್ ವರ್ಜಿನ್ ಐಲ್ಯಾಂಡ್ಸ್ ನ ಡೇರೆಲಿಸ್ ನಿಕೊ ನಾಲ್ಕನೇ ರನ್ನರ್ ಅಪ್ ಸ್ಥಾನ ಪಡೆದರು.

ಭಾರತದಲ್ಲಿ ನನಗೆ ಮನೆಯಂಥ ಅನುಭವ - ಜೋನ್ನಾ ಉರಂಗ: ಪ್ರಶಸ್ತಿ ಗೆದ್ದ ಖುಷಿ ವ್ಯಕ್ತಪಡಿಸಿದ ಜೋನ್ನಾ ಉರಂಗ, "ಈ ಗೌರವ ಸಿಕ್ಕಿದ್ದಕ್ಕೆ ತುಂಬಾ ಕೃತಜ್ಞತೆಗಳು. ಇದನ್ನು ಸ್ವೀಕರಿಸಿರುವುದು ಹೆಮ್ಮೆ ಅನಿಸುತ್ತಿದೆ" ಎಂದು ಹೇಳಿದರು. ಭಾರತ ಮತ್ತು ಇಲ್ಲಿನ ಜನರ ಬಗ್ಗೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ ಅವರು, "ಈ ದೇಶದಲ್ಲಿ ಸೇರಿರುವ ಭಾವನೆ ನನಗೆ ಮನೆಯಲ್ಲಿರುವಂತೆ ಅನುಭವವಾಗುತ್ತಿದೆ. ಈ ಗೌರವಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನನ್ನ ಕುಟುಂಬ ಮತ್ತು ಬೆಂಬಲಿಗರಿಗೆ ಧನ್ಯವಾದಗಳು. ನಾನು ಭಾರತವನ್ನು ತುಂಬಾ ಪ್ರೀತಿಸುತ್ತೇನೆ. ಮತ್ತೊಮ್ಮೆ ಇಲ್ಲಿಗೆ ಬರಲು ಎದುರು ನೋಡುತ್ತಿದ್ದೇನೆ. ಇಲ್ಲಿನ ಜನರು ನಾನು ಅವರ ಕುಟುಂಬದ ಭಾಗ ಎಂಬಂತೆ ನನಗೆ ಅನಿಸುವಂತೆ ಮಾಡಿದರು" ಎಂದು ಹೇಳಿದರು.

ವಿಜೇತರನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗಿತ್ತು ಎನ್ನುವುದು ಸಂಘಟಕರ ಮಾತು. ಮಿಸ್ ಟೀನ್ ಇಂಟರ್ನ್ಯಾಷನಲ್‌ನ ಮಾಲೀಕ ನಿಖಿಲ್ ಆನಂದ್ ಅವರು ಗ್ರ್ಯಾಂಡ್ ಫಿನಾಲೆಯ ಬಳಿಕ ಮಾತನಾಡಿ, "ಎಲ್ಲಾ ಸ್ಪರ್ಧಿಗಳು ಅದ್ಭುತ ಪ್ರದರ್ಶನ ನೀಡಿದರು. ಜಡ್ಜ್​ಗಳಿಗೆ ವಿಜೇತರನ್ನು ಆಯ್ಕೆ ಮಾಡುವುದು ಸವಾಲಾಗಿತ್ತು. ಕ್ಯೂಬಾ ಮೊದಲ ಬಾರಿಗೆ ಮಿಸ್ ಟೀನ್ ಇಂಟರ್ನ್ಯಾಷನಲ್ ಕಿರೀಟವನ್ನು ಗೆದ್ದಿದೆ" ಎಂದ ಅವರು, ಸ್ಪರ್ಧೆಯ ಉದ್ದಕ್ಕೂ ಅಸಾಧಾರಣ ಪ್ರದರ್ಶನ ನೀಡಿದ ಜೋನಾ ಉರಂಗ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೇರಳದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ-2026' ಕಿರೀಟ

Last Updated : August 31, 2026 at 3:45 PM IST