ದೆಹಲಿಯ ಚಂದನ್ ಹೋಲಾ ಪ್ರದೇಶದ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ ; ತಪ್ಪಿದ ಅನಾಹುತ
ಚಂದನ್ ಹೋಲಾ ಪ್ರದೇಶದ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಇಲ್ಲಿಯವರೆಗೆ ಯಾವುದೇ ಸಾವು ನೋವು ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published : July 5, 2026 at 5:23 PM IST
ನವದೆಹಲಿ : ಇಲ್ಲಿನ ಚಂದನ್ ಹೋಲಾ ಪ್ರದೇಶದ ಕಾರ್ಖಾನೆಯಲ್ಲಿ ಭಾನುವಾರ ನಸುಕಿನಜಾವ ಭಾರಿ ಬೆಂಕಿ ಅವಘಡ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೇಗವಾಗಿ ಹರಡುತ್ತಿದ್ದ ಬೆಂಕಿಯು ಭೀತಿಯನ್ನುಂಟುಮಾಡಿತು. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಅಲ್ಲದೇ, ಸ್ಥಳದಲ್ಲಿ 15 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಿದ್ದಾರೆ.
ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಮತ್ತು ಬೆಂಕಿಯ ಅವಘಡದ ಕುರಿತು ತನಿಖೆ ಮುಂದುವರೆದಿದೆ ಎಂದು ದೆಹಲಿ ಅಗ್ನಿಶಾಮಕ ದಳ ದೃಢಪಡಿಸಿದೆ.
#WATCH | दिल्ली के चंदन होला में पंजाब नेशनल बैंक के पास स्थित एक फ़ैक्ट्री में आज सुबह 2 बजे आग लग गई। अधिक जानकारी की प्रतीक्षा है।
— ANI_HindiNews (@AHindinews) July 5, 2026
(सोर्स: दिल्ली फ़ायर सर्विसेज़) pic.twitter.com/hXOyOQbVMh
ದಕ್ಷಿಣ ದೆಹಲಿಯ ಚಂದನ್ ಹೋಲಾ ಪ್ರದೇಶದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬಳಿ ಇರುವ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭಾನುವಾರ ನಸುಕಿನಜಾವ 2:11ಕ್ಕೆ ಇಲಾಖೆಗೆ ತುರ್ತು ಕರೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ನಾವು ತಕ್ಷಣ ಎರಡು ನೀರಿನ ಟೆಂಡರ್‌ಗಳು ಮತ್ತು ಎರಡು ನೀರಿನ ಬೌಸರ್‌ಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಅಗ್ನಿಶಾಮಕ ದಳದವರು ಆರಂಭದಲ್ಲಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೆ, ಅದು ಬೇಗನೆ ಕಾರ್ಖಾನೆಯ ಆವರಣದಾದ್ಯಂತ ಹರಡಿತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಬೆಂಕಿಯ ತೀವ್ರತೆಯಿಂದಾಗಿ ಆರಂಭದಲ್ಲಿ ಇದನ್ನು ಬೆಳಗ್ಗೆ 2:40ಕ್ಕೆ 'ಮೇಕ್-4' ಎಂದು ವರ್ಗೀಕರಿಸಲಾಯಿತು. ನಂತರ ಸ್ಥಳದಲ್ಲಿ ಹೆಚ್ಚುವರಿ ಅಗ್ನಿಶಾಮಕ ದಳಗಳನ್ನು ನಿಯೋಜಿಸಿದೆವು. ಬೆಂಕಿಯ ತೀವ್ರತೆ ಹೆಚ್ಚಾದಂತೆ, ಬೆಳಗ್ಗೆ 3:08ಕ್ಕೆ ಸ್ಥಿತಿಯನ್ನು 'ಮೇಕ್-6' ಎಂದು ವರ್ಗೀಕರಿಸಲಾಯಿತು. ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳನ್ನು ತೀವ್ರಗೊಳಿಸಲು, ಆರು ನೀರಿನ ಟೆಂಡರ್‌ಗಳು, ಏಳು ನೀರಿನ ಬೌಸರ್‌ಗಳು, ಒಂದು ಬಿಎಫ್‌ಟಿ ಮತ್ತು ಒಂದು ಎಂಪಿ ಘಟಕ ಸೇರಿದಂತೆ 15 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಯಿತು. ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಹಲವಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು' ಎಂದು ಅಧಿಕಾರಿ ಹೇಳಿದ್ದಾರೆ.
ವಿಭಾಗೀಯ ಅಧಿಕಾರಿ ಆರ್. ಅತ್ವಾಲ್, ಎಡಿಒ ಸಂತೋಷ್, ಎಡಿಒ ಸರಬ್ಜಿತ್, ಠಾಣಾಧಿಕಾರಿ ಮನೀಶ್ ಮತ್ತು ಠಾಣಾಧಿಕಾರಿ ಅಮಿತ್ ಸೇರಿದಂತೆ ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಅವರು ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳನ್ನು ಸಹ ಮೇಲ್ವಿಚಾರಣೆ ಮಾಡಿದರು.
ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನಗಳು ಹಲವಾರು ಗಂಟೆಗಳ ಕಾಲ ನಡೆದವು ಮತ್ತು ಇಲ್ಲಿಯವರೆಗೆ ಯಾವುದೇ ಗಾಯಗಳು ಅಥವಾ ಜೀವಹಾನಿ ವರದಿಯಾಗಿಲ್ಲ. ಬೆಂಕಿಯ ಅವಘಡದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ನೋಯ್ಡಾ ಅರಣ್ಯ ಸೊಸೈಟಿಯ 21ನೇ ಮಹಡಿಯಲ್ಲಿ ಎಸಿ ಸ್ಫೋಟದಿಂದ ಅಗ್ನಿ ಅವಘಡ

