ತನ್ನೊಂದಿಗೆ ವಿವಾಹ ಮುರಿದುಕೊಂಡಿದ್ದಕ್ಕೆ ಯುವತಿ, ಆಕೆಯ ಸಹೋದರಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿ!
ತನ್ನೊಂದಿಗೆ ನಿಶ್ಚಯವಾಗಿದ್ದ ವಿವಾಹವನ್ನು ಮರಿದುಕೊಂಡಿದ್ದಕ್ಕೆ ಯುವಕನೊಬ್ಬ ಯುವತಿ ಮತ್ತು ಆಕೆಯ ಸಹೋದರಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ.

Published : August 30, 2026 at 4:25 PM IST
ಹಾಪುರ್(ಉತ್ತರ ಪ್ರದೇಶ): ತನ್ನ ಜೊತೆ ಮದುವೆ ರದ್ದು ಮಾಡಿಕೊಂಡಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಯುವತಿ ಮತ್ತು ಆಕೆಯ ಸಹೋದರಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಇಲ್ಲಿನ ಸಿಂಭಾವೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ಹರ್ಷ ಭಾಟಿ ಎಂಬಾತ ಸಂತ್ರಸ್ತೆ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ, ಬಳಿಕ ಈ ನಿಶ್ಚಯ ಮುರಿದುಬಿದ್ದಿತ್ತು.
थाना सिम्भावली के ग्राम माधापुर में एक युवक द्वारा 02 युवतियों पर तेजाब डाला गया है, वे घायल हो गई, पुलिस द्वारा घायल युवतियों का मेडिकल कराया गया है। प्राप्त तहरीर के आधार पर थाना सिम्भावली पर धाराओं में अभियोग पंजीकृत कर आरोपी को हिरासत में लिया गया है।
— HAPUR POLICE (@hapurpolice) August 30, 2026
बाइट~सीओ गढ़मुक्तेश्वर pic.twitter.com/NNfCimyMQe
ಇದರಿಂದ, ಕೋಪಗೊಂಡಿದ್ದ ಆತ ಶನಿವಾರ ರಾತ್ರಿ ಯುವತಿಯ ಮನೆಗೆ ಹೋಗಿದ್ದಾನೆ. ಯುವತಿ ಬಾಗಿಲು ತೆಗೆದಾಗ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ನೆರವಿಗೆ ಸಹೋದರಿ ಧಾವಿಸಿದಾಗ ಆಕೆಯ ಮೇಲೂ ಆ್ಯಸಿಡ್ ಹಾಕಿದ್ದಾನೆ. ಇಬ್ಬರೂ ಸುಟ್ಟ ಗಾಯಗಳಿಂದ ಕಿರುಚಾಡುತ್ತಿದ್ದಾಗ ಕುಟುಂಬಸ್ಥರು ಓಡಿ ಬಂದಿದ್ದಾರೆ. ಈ ವೇಳೆ ಆರೋಪಿ ಹರ್ಷ ಭಾಟಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಕುಟುಂಬಸ್ಥರು ಮತ್ತು ನೆರೆಹೊರೆಯವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ: ತಕ್ಷಣವೇ ಇಬ್ಬರು ಸಹೋದರಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಸಿಡ್ ಯುವತಿಯರ ದೇಹವನ್ನು ಸುಟ್ಟಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಭಾವಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಆರೋಪಿ ಹರ್ಷ ಭಾಟಿಯನ್ನು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತ ಯುವತಿಯ ತಂದೆಯ ಪ್ರಕಾರ, ಮಗಳ ಮದುವೆ ಆರೋಪಿ ಹರ್ಷ ಭಾಟಿಯೊಂದಿಗೆ ನಿಗದಿಯಾಗಿತ್ತು. ಆದರೆ, ಆತ ಮಾದಕ ವ್ಯಸನಿ ಎಂಬುದು ನಂತರದಲ್ಲಿ ತಿಳಿದುಬಂತು. ಹೀಗಾಗಿ, ಆತನೊಂದಿಗೆ ನಿಶ್ಚಯವಾಗಿದ್ದ ವಿವಾಹವನ್ನು ರದ್ದು ಮಾಡಲಾಗಿತ್ತು. ಇದೇ ಕಾರಣಕ್ಕಾಗಿ ಆತ ನನ್ನ ಪುತ್ರಿಯರ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
"ಇಬ್ಬರೂ ಯುವತಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಕುಟುಂಬಸ್ಥರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿನೀತ್ ಭಟ್ನಾಗರ್ ತಿಳಿಸಿದ್ದಾರೆ.
ಇವುಗಳನ್ನೂ ಓದಿ:

