ಸೈಬರ್ ಭಯೋತ್ಪಾದಕ ಸಿಂಡಿಕೇಟ್ ಮೇಲೆ ಕಣ್ಗಾವಲು; ಕಾಶ್ಮೀರದ ಹಲವೆಡೆ ದಾಳಿ
ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಸೈಬರ್ ವಂಚನೆಗೆ ಸಂಬಂಧಿಸಿದ ಖಾತೆಗಳನ್ನು ತನಿಖೆ ನಡೆಸುವ ಉದ್ದೇಶದಿಂದ ಕಾಶ್ಮೀರದಲ್ಲಿ ಎರಡು ತಿಂಗಳ ಕಾಲ ವಿಪಿಎನ್ ಬಳಕೆಗೆ ನಿರ್ಬಂಧ ಹೇರಲಾಗಿದೆ.


Published : January 7, 2026 at 12:51 PM IST
ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರದಲ್ಲಿ ಸೈಬರ್ ಭಯೋತ್ಪಾದಕ ಸಿಂಡಿಕೇಟ್ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಗುಪ್ತಚರ ದಳ ಇಂದು ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಬೆಳಗ್ಗೆ ಸುಮಾರು 12ಕ್ಕಿಂತ ಹೆಚ್ಚು ಪ್ರದೇಶದಲ್ಲಿ ದಾಳಿ ನಡೆದಿದ್ದು, ಸೈಬರ್ ವಂಚನೆಗಳು ಮತ್ತು ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಖಾತೆಗಳ ಪರಿಶೀಲನೆ ನಡೆಯುತ್ತಿದೆ.
ಶ್ರೀನಗರ ಒಂದರಲ್ಲೇ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆದಿದೆ. ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಸೈಬರ್ ವಂಚನೆಗೆ ಸಂಬಂಧಿಸಿದ ಖಾತೆಗಳನ್ನು ತನಿಖೆ ನಡೆಸುವುದು ಕಾರ್ಯಾಚರಣೆಯ ಉದ್ದೇಶ. ಅಕ್ರಮವಾಗಿ ಹಣ ರವಾನಿಸುವ ಹಾಗೂ ಈ ಸಿಂಡಿಕೇಟ್‌ನ ಭಾಗವಾಗಿರುವ ಜನರನ್ನು ಗುರುತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಭದ್ರತಾ ಕಾಳಜಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಯಿಂದಾಗಿ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳ (ವಿಪಿಎನ್) ಬಳಕೆ ನಿಷೇಧಿಸಲಾಗಿದೆ. ಪೊಲೀಸರು ಗ್ರೌಂಡ್ ಮತ್ತು ವರ್ಚುವಲ್ ಎರಡೂ ಕಡೆಯೂ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ.
ಕಳೆದೊಂದು ವರ್ಷದಿಂದ ಜಮ್ಮು ಜಿಲ್ಲೆಯಲ್ಲಿ ಪೊಲೀಸರು ನಿರ್ಬಂಧ ಹೇರಿರುವ ಕೆಲವು ಆಯ್ದ ಜಿಲ್ಲೆಗಳಲ್ಲೂ ವಿಪಿಎನ್ ನಿರ್ಬಂಧಿಸಲಾಗಿದೆ. ಕಳೆದ ವಾರದಿಂದ ಕಾಶ್ಮೀರದಲ್ಲಿ ನಿಷೇಧ ಜಾರಿಯಾದಾಗಿನಿಂದ ಇವುಗಳನ್ನು ಪಾಲಿಸದೇ ಇರುವ 140ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪುಲ್ವಾಮಾ ಜಿಲ್ಲೆಯೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಜನರು ಈ ನಿರ್ಬಂಧವನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ. ಕುಲ್ಗಾಮ್ ಮತ್ತು ನಿಷೇಧಿತ ಆದೇಶಗಳನ್ನು ಪಾಲಿಸದ 49 ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶ್ರೀನಗರದಲ್ಲಿ ಡಿಸೆಂಬರ್ 30ರಿಂದ ಎರಡು ತಿಂಗಳು ವಿಪಿಎನ್ ಬಳಕೆ ನಿಷೇಧಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಕ್ಷಯ್ ಲ್ಯಾಬ್ರೂ ಆದೇಶಿಸಿದ್ದರು.
ಇವುಗಳನ್ನೂ ಓದಿ:

