ETV Bharat / bharat

ಇದು ಸಾಧ್ಯವೇ!!? ಕಾಂಗ್ರೆಸ್​​ ಜತೆ ಬಿಜೆಪಿ ಹೊಂದಾಣಿಕೆ: ಮುನ್ಸಿಪಲ್​ ಚುನಾವಣೆಯಲ್ಲಿ ಸ್ಥಳೀಯ ನಾಯಕರಿಂದ ಕಾಂಗ್ರೆಸ್​ - ಎಐಎಂಐಎಂ ಜೊತೆ ಮೈತ್ರಿ!

ಸ್ಥಳೀಯ ಮಟ್ಟದಲ್ಲಿ ಅಲ್ಲಿನ ಪ್ರಾದೇಶಿಕ ನಾಯಕರಿಂದ ಈ ಮೈತ್ರಿ ನಡೆದಿದ್ದು, ಈ ಕುರಿತು ಶಿವಸೇನೆ (ಯುಬಿಟಿ) ಬಿಜೆಪಿ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದೆ.

maharashtra-bjp-embarrassed-as-local-leaders-forge-alliances-with-congress-aimim
ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ರವೀಂದ್ರ ಚೌಹಣ್​ ಜೊತೆ ಇತರೆ ನಾಯಕರು (ETV Bharat)
author img

By ETV Bharat Karnataka Team

Published : January 7, 2026 at 5:36 PM IST

3 Min Read
Choose ETV Bharat

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಮುನ್ಸಿಪಲ್​ ಕಾರ್ಪೊರೇಷನ್​ನಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿರುಗಾಳಿಯನ್ನೇ ಸೃಷ್ಟಿಸಿದೆ. ಅಕೋಟ್​ ಮತ್ತು ಮೀರಾ - ಭಾಯಂದರ್ ಮುನ್ಸಿಪಲ್ ಕಾರ್ಪೊರೇಶನ್​ನಲ್ಲಿ ಬಹುಮತಗಳಿಸಲು ಬಿಜೆಪಿ ನಾಯಕರು ಅಕೋಟ್​ ವಿಕಾಸ್​ ಮಂಚ್​ ಸೃಷ್ಟಿಸಿಕೊಂಡಿದ್ದಾರೆ.

ಶಿವಸೇನೆ(ಯುಬಿಟಿ) ಹೊರಗಿಡಲು ಕಾಂಗ್ರೆಸ್​ ಜತೆ ಮೈತ್ರಿ: ಇದೆ ವೇಳೆ ಶಿವಸೇನೆಯನ್ನು ಬಿಜೆಪಿ ಹೊರಗಿಟ್ಟಿದ್ದು, ಅಂಬಾರ್​ನಾಥ್ ಮುನ್ಸಿಪಲ್​ ಕೌನ್ಸಿಲ್​ನಲ್ಲಿ ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಸ್ಥಳೀಯ ಬಿಜೆಪಿ ನಾಯಕರ ಈ ನಡೆ ಶಿವಸೇನೆ (ಯುಬಿಟಿ) ಗುಂಪಿನಿಂದ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ಕುರಿತು ವಾಗ್ದಾಳಿ ನಡೆಸಿರುವ ಸಂಜಯ್​ ರಾವತ್​​, ಬಿಜೆಪಿ ತನ್ನ ಎರಡು ಮುಖದ ಹುಳು ಎಂದು ಹರಿಹಾಯ್ದಿದ್ದಾರೆ.

ಬಿಜೆಪಿ ಎರಡು ಮುಖ ಹೊಂದಿದ್ದು, ಯಾವ ಕಡೆ ಬೇಕಾದರೂ ಹೊರಳುತ್ತದೆ. ಅಕೋಟ್​- ಮೀರಾ ಭಾಯಂದರ್​ ಮತ್ತು ಅಂಬರ್​ನಾಥ್​ನಲ್ಲಿ ಬಿಜೆಪಿ ರಹಸ್ಯವಾಗಿ ಎಐಎಂಐಎಂ ಮತ್ತು ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಂಡಿದೆ. ಅವರು ನಂಜಾಗಿದ್ದಾರೆ (ವಿಷಕಾರಿ). ಅವರು ಮುಸ್ಲಿಂ ಮತಗಳಿಸಲು ಈ ಪ್ರಯತ್ನ ನಡೆಸಿದ್ದಾರೆ ಎಂದು ರಾವತ್​ ಟೀಕಾ ಪ್ರಹಾರ ನಡೆಸಿದ್ದಾರೆ.

ರಾವತ್ ಅವರ ತೀವ್ರ ಟೀಕೆಗಳ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಥಳೀಯ ಮಟ್ಟದಲ್ಲಿ ನಡೆದ ಇಂತಹ ಮೈತ್ರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಶಿವಸೇನಾ ಶಾಸಕನಿಂದ ಬಿಜೆಪಿ ವಿರುದ್ಧ ವಾಗ್ದಾಳಿ: ಶಿವಸೇನಾ ಶಾಸಕ ಬಾಲಾಜಿ ಕಿನಿಕರ್​​ ಕೂಡ ಇಂತಹ ಮೈತ್ರಿಗಳನ್ನು ಟೀಕಿಸಿದ್ದು, ಬಿಜೆಪಿ ಬಹುಮತಕ್ಕಾಗಿ ಪಕ್ಷದ ತತ್ವಗಳನ್ನು ಮರೆತಿದೆ. ಒಂದು ಕಡೆ ಅಧಿಕಾರ ಪಡೆಯಲು ನೇರವಾಗಿ ಕಾಂಗ್ರೆಸ್​ ಜೊತೆ ಮೈತ್ರಿ ಮಾಡುತ್ತಾರೆ. ಮತ್ತೊಂದು ಕಡೆ ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುವುದಾಗಿ ಭರವಸೆ ನೀಡುತ್ತಾರೆ. ಇದು ಬಿಜೆಪಿಯ ಬೂಟಾಟಿಕೆ. ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಏಕೈಕ ಕಾರಣ ಅಧಿಕಾರಕ್ಕೆ ಬರುವುದಾಗಿದೆ. ಇತ್ತೀಚಿನ ಮುನ್ಸಿಪಲ್​ ಕೌನ್ಸಿಲ್​ ಮತ್ತು ನಗರ ಪಂಚಾಯತ್​ ಚುನಾವಣೆಯಲ್ಲಿ ಶಿವಸೇನಾ ಜೊತೆಯಲ್ಲಿ ಬಿಜೆಪಿ ಅನೇಕ ಮೇಯರ್​ ಮತ್ತು ಕೌನ್ಸಿಲರ್​ ಸ್ಥಾನವನ್ನು ಗೆದ್ದಿದೆ. ಚುನಾವಣೆಗೂ ಮುನ್ನ ಈ ಅಪವಿತ್ರ ಮೈತ್ರಿ ಮುಂದುವರಿಸಿದರೆ ಬಿಜೆಪಿ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್​: ಶಿವಸೇನಾ ಶಾಸಕ ಮತ್ತು ಮಹಾರಾಷ್ಟ್ರ ಸಚಿವ ಪ್ರತಾಪ್​ ಸರ್ನೈಕ್​ ಮಾತನಾಡಿ, ಮೀರಾ- ಭಾಯಂದರ್​ ಮುನ್ಸಿಪಲ್​ ಕಾರ್ಪೊರೇಷನ್​ ಚುನಾವಣೆಯಲ್ಲಿ ಬಿಜೆಪಿ ಎಐಎಂಐಎಂ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದಿದ್ದಾರೆ. ಈ ವಿವಾದದ ಕುರಿತು ಕಾಂಗ್ರೆಸ್​ ಅಂತರ ಕಾಯ್ದುಕೊಂಡಿದ್ದು, ಸ್ಥಳೀಯ ಮಟ್ಟದ ಮೈತ್ರಿಗಳು ಪಕ್ಷಕ್ಕೆ ಏನು ಮಾಡುವುದಿಲ್ಲ ಎಂದು ಹೇಳಿದೆ.

ಕಾಂಗ್ರೆಸ್​ ವಕ್ತಾರರು ಹೇಳಿದ್ದಿಷ್ಟು: ಈ ಕುರಿತು ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಕಾಂಗ್ರೆಸ್​ ಪಕ್ಷದ ವಕ್ತಾರ ಸಚಿನ್​ ಸಾವಂತ್​, ಸ್ಥಳೀಯ ನಾಯಕರು ಈ ಮೈತ್ರಿ ಮಾಡಿಕೊಂಡಿದ್ದು, ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ಮೈತ್ರಿ ಬಿಜೆಪಿಗೂ ಏನು ಮಾಡುವುದಿಲ್ಲ, ಸ್ಥಳೀಯ ವಿಚಾರಗಳ್ನು ಗಮನದಲ್ಲಿರಿಸಿಕೊಂಡಿ ಸ್ಥಳೀಯ ನಾಯಕರು ಈ ಮೈತ್ರಿಯನ್ನು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

12 ನಾಯಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್: ಅಂಬರ್​ನಾಥ್​​ನಲ್ಲಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್, 12 ನಾಯಕರನ್ನು ಅಮಾನತುಗೊಳಿಸಿದ್ದು, ಬ್ಲಾಕ್ ಸಮಿತಿಯನ್ನು ವಿಸರ್ಜಿಸಿದೆ.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾಟೀಲ್, ಈ ಕುರಿತು ಅಂಬರ್​ನಾಥ್​ ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ನಾವು ಕಾಂಗ್ರೆಸ್ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ. ನಾವು 12 ಸ್ಥಾನಗಳನ್ನು ಗೆದ್ದಿದ್ದೇವೆ, ಆದರೆ ರಾಜ್ಯ ನಾಯಕತ್ವ ಅಥವಾ ರಾಜ್ಯ ಕಚೇರಿಗೆ ತಿಳಿಸದೇ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಇದು ಮಾಧ್ಯಮ ಮೂಲಗಳ ಮೂಲಕ ನಮಗೆ ತಿಳಿದುಬಂದಿದೆ. ಇದು ಉತ್ತಮವಾದ ನಿರ್ಧಾರವಲ್ಲ, ಆದ್ದರಿಂದ ರಾಜ್ಯ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರ ಸೂಚನೆಯ ಪ್ರಕಾರ, ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇವುಗಳನ್ನೂ ಓದಿ:

ಮಸೀದಿಯಲ್ಲಿ ಚಾಕು ಇರಿತ: ಮಹಾರಾಷ್ಟ್ರ ಕಾಂಗ್ರೆಸ್​ ಉಪಾಧ್ಯಕ್ಷ ಹಿದಾಯತುಲ್ಲಾ ಪಟೇಲ್ ಸಾವು

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಯ 44 ಸೇರಿ 'ಮಹಾಯುತಿ'ಯ 68 ಮಂದಿ ಅವಿರೋಧ ಆಯ್ಕೆ