ETV Bharat / bharat

ಜೆಎನ್​ಯು ವಿದ್ಯಾರ್ಥಿ ಸಂಘದ ಚುನಾವಣೆ: ಎಡಪಂಥೀಯ ಒಕ್ಕೂಟಕ್ಕೆ ಭರ್ಜರಿ ಜಯ, ಎಬಿವಿಪಿಗೆ ಹಿನ್ನಡೆ

ಜೆಎನ್​ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಅಭ್ಯರ್ಥಿ ವಿಕಾಸ್ ಪಟೇಲ್ ಅವರನ್ನು 449 ಮತಗಳಿಂದ ಸೋಲಿಸುವ ಮೂಲಕ ಅದಿತಿ ಮಿಶ್ರಾ ಅಧ್ಯಕ್ಷರಾಗಿ ಆಯ್ಕೆಯಾದರು.

left-sweeps-jnu-students-union-elections-2025
ಜೆಎನ್​ಯು ವಿದ್ಯಾರ್ಥಿ ಸಂಘದ ಚುನಾವಣೆ (ETV Bharat)
author img

By ETV Bharat Karnataka Team

Published : November 7, 2025 at 11:39 AM IST

1 Min Read
Choose ETV Bharat

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಂಥೀಯ ಒಕ್ಕೂಟವು ಭರ್ಜರಿ ಗೆಲುವು ದಾಖಲಿಸುವ ಮೂಲಕ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಎಡಪಂಥೀಯ ಒಕ್ಕೂಟ ಒಟ್ಟು ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.

ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್​ಎ), ವಿದ್ಯಾರ್ಥಿ ಒಕ್ಕೂಟ (ಎಸ್​ಎಫ್​ಐ) ಮತ್ತು ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (ಡಿಎಸ್​ಎಫ್​)ಗಳ ಮೈತ್ರಿಕೂಟವು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಎಬಿವಿಪಿ ಅಭ್ಯರ್ಥಿ ವಿಕಾಸ್ ಪಟೇಲ್ ಅವರನ್ನು 449 ಮತಗಳಿಂದ ಸೋಲಿಸುವ ಮೂಲಕ ಅದಿತಿ ಮಿಶ್ರಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಾನ್ಯಾ ಕುಮಾರಿ ಅವರನ್ನು ಸೋಲಿಸುವ ಮೂಲಕ ಕಿಜಾಕೂಟ್ ಗೋಪಿಕಾ ಬಾಬು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಬಲಪಂಥೀಯ ಪ್ರತಿಸ್ಪರ್ಧಿಗಳಾದ ರಾಜೇಶ್ವರ್ ಕಾಂತ್ ದುಬೆ ಮತ್ತು ಅನುಜ್ ಅವರನ್ನು ಸೋಲಿಸುವ ಮೂಲಕ ಸುನಿಲ್ ಯಾದವ್ ಮತ್ತು ಡ್ಯಾನಿಶ್ ಅಲಿ ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗೆ ಆಯ್ಜೆಯಾಗಿದ್ದಾರೆ.

ಈ ವರ್ಷ ಚುನಾವಣೆಯಲ್ಲಿ 9,043 ವಿದ್ಯಾರ್ಥಿಗಳು ಮತ ಚಲಾಯಿಸಿದ್ದು, ಶೇ. 67 ರಷ್ಟು ಮತದಾನವಾಗಿದೆ.

ಎಬಿವಿಪಿಗೆ ಹಿನ್ನಡೆ: ಚುನಾವಣೆಯಲ್ಲಿ ಎಡಪಂಥೀಯ ಅಭ್ಯರ್ಥಿಗಳು ನಾಲ್ಕು ಸ್ಥಾನಗಳನ್ನು ಭದ್ರ ಮಾಡಿಕೊಳ್ಳುವ ಮೂಲಕ ಎಬಿವಿಪಿಗೆ ಹಿನ್ನಡೆ. ಇದಕ್ಕೂ ಮೊದಲು, 2015 ರಲ್ಲಿ ಸೌರಭ್ ಶರ್ಮಾ ಆಯ್ಕೆಯಾಗುವ ಮೂಲಕ 14 ವರ್ಷದ ಬಳಿಕ ಎಬಿವಿಪಿ ಚುನಾವಣೆಯಲ್ಲಿ ಗೆಲುವು ಕಂಡಿತ್ತು. ಇದಕ್ಕೆ ಮೊದಲು 2000-01ಕ್ಕೆ ಮುಂಚೆ ಎಡ ಪಂಥೀಯ ಪ್ರಾಬಲ್ಯವನ್ನು ಮುರಿದು ಎಬಿವಿಪಿ ಮೊದಲ ಬಾರಿಗೆ ಅಧ್ಯಕ್ಷೀಯ ಸ್ಥಾನವನ್ನು ಗೆದ್ದುಕೊಂಡಿತ್ತು.

ಈ ವರ್ಷದ ಗೆಲುವಿನ ಫಲಿತಾಂಶದೊಂದಿಗೆ ಎಡಪಂಥೀಯ ಒಕ್ಕೂಟವು ತನ್ನ ರಾಜಕೀಯ ಪ್ರಾಬಲ್ಯವನ್ನು ಮತ್ತೆ ದೃಢಪಡಿಸಿದೆ. ಜೆಎನ್‌ಯುನಲ್ಲಿ ತನ್ನ ದೀರ್ಘ ನಾಯಕತ್ವದ ಸಂಪ್ರದಾಯವನ್ನು ಮುಂದುವರೆಸಿದೆ.

ವಿದ್ಯಾರ್ಥಿ ಸಂಘದ ಚುನಾವಣೆ: ಎಐಎಸ್​ಎ, ಎಸ್​ಎಫ್​ಐ ಮತ್ತು ಡಿಎಸ್​ಎಫ್​ನಂತಹ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ದೀರ್ಘಾವಧಿಯ ಉಪಸ್ಥಿತಿ ಮತ್ತು ಪ್ರಾಬಲ್ಯವನ್ನು ಹೊಂದಿರುವ ಜೆಎನ್​ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸಾಮಾನ್ಯವಾಗಿ ಎಡಪಂಥೀಯ ಒಕ್ಕೂಟ ಮತ್ತು ಎಬಿವಿಪಿ ನಡುವೆ ಸ್ಪರ್ಧೆಯನ್ನು ಕಾಣಬಹುದು. ಶಿಕ್ಷಣ ನೀತಿ ಮತ್ತು ಹಾಸ್ಟೆಲ್ ಸಮಸ್ಯೆಗಳಂತಹ ಕ್ಯಾಂಪಸ್ ಸಮಸ್ಯೆಗಳು ಪ್ರಚಾರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದರೂ, ಜೆಎನ್​ಯು ವಿದ್ಯಾರ್ಥಿ ಸಂಘದ ಚುನಾವಣೆಯ ಪ್ರಚಾರದಲ್ಲಿ ಸಾಮಾಜಿಕ ನ್ಯಾಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳಿಗೆ ಮೀಸಲಾಗಿರುವ ವಿಷಯಗಳು ಕಾಣಬಹುದು.

ಇದನ್ನೂ ಓದಿ: ಹಿಂದೂ, ಬೌದ್ಧ, ಜೈನ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಜೆಎನ್‌ಯು ಅಧಿಸೂಚನೆ