'ನಾನು ಪ್ರಾಮಾಣಿಕ'; ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಯಾದ ಬಳಿಕ ಕೇಜ್ರಿವಾಲ್ ಮೊದಲ ಪ್ರತಿಕ್ರಿಯೆ!
ಆಮ್ ಆದ್ಮಿ ಪಕ್ಷದ ಪ್ರಮುಖ ಐದು ನಾಯಕರನ್ನು ಜೈಲಿಗೆ ಹಾಕುವ ಮೂಲಕ ಪಕ್ಷವನ್ನು ಮುಗಿಸಲು ಯೋಜಿಸಿದೆ. ಆದರೆ, ಸತ್ಯವೂ ಅಂತಿಮವಾಗಿ ಗೆಲ್ಲುತ್ತದೆ ಎಂದು ನಾವು ಮೊದಲಿನಿಂದ ಹೇಳುತ್ತಾ ಬಂದಿದ್ದೇವೆ ಎಂದು ಭಾವುಕರಾದರು.


Published : February 27, 2026 at 1:46 PM IST
ನವದೆಹಲಿ: ನಾನು ಮತ್ತು ಮನೀಶ್ ಸಿಸೋಡಿಯಾ ಇಬ್ಬರು ಪ್ರಮಾಣಿಕರು ಎಂದು ಎಎಪಿ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಶುಕ್ರವಾರ ರೋಸ್ ಅವೆನ್ಯೂ ಕೋರ್ಟ್ ಖುಲಾಸೆಗೊಂಡ ಬಳಿಕ ಮಾಧ್ಯಮಗಳಿಗೆ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾದೇಶದಲ್ಲಿ ಅತಿ ದೊಡ್ಡ ರಾಜಕೀಯ ಪಿತೂರಿಯನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಪ್ರಮುಖ ಐದು ನಾಯಕರನ್ನು ಜೈಲಿಗೆ ಹಾಕುವ ಮೂಲಕ ಪಕ್ಷವನ್ನು ಮುಗಿಸಲು ಯೋಜಿಸಿದೆ. ಆದರೆ, ಸತ್ಯವೂ ಅಂತಿಮವಾಗಿ ಗೆಲ್ಲುತ್ತದೆ ಎಂದು ನಾವು ಮೊದಲಿನಿಂದ ಹೇಳುತ್ತಾ ಬಂದಿದ್ದೇವೆ ಎಂದರು.
ನಾನು ಭ್ರಷ್ಟನಲ್ಲ. ನ್ಯಾಯಾಲಯ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಪ್ರಯಾಣಿಕರು ಎಂದಿದೆ. ಇಂದು ಕೋರ್ಟ್ ಈ ಪ್ರಕರಣದಲ್ಲಿ ನಮ್ಮನ್ನು ಖುಲಾಸೆಗೊಳಿಸಿದೆ. ಯಾವಾಗಲೂ ಸತ್ಯಕ್ಕೆ ಜಯ. ಭಾರತದ ಕಾನೂನು ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದರು.
ಮನೀಶ್ ಸಿಸೋಡಿಯಾ ಕೂಡ ನ್ಯಾಯಾಲಯದ ನಿರ್ಧಾರವನ್ನು ಪ್ರಶಂಸಿದ್ದು, ಸತ್ಯವೂ ಜಯಿಸುತ್ತದೆ. ಇಂದು ಮತ್ತೊಮ್ಮೆ ಸತ್ಯವೇ ಗೆದ್ದಿದೆ. ನಾನು ಈ ದಿನ ಅಂಬೇಡ್ಕರ್ ಅವರ ದೂರದೃಷ್ಟಿ ಚಿಂತನೆ ಮತ್ತು ಸಂವಿಧಾನದ ರಚನೆ ಬಗ್ಗೆ ಹೆಮ್ಮೆ ಹೊಂದಿದ್ದೇನೆ. ಮೋದಿ ಮತ್ತು ಅವರ ಪಕ್ಷ ಮತ್ತು ಇತರ ಅವರ ಎಲ್ಲಾ ಏಜೆನ್ಸಿಗಳು ನಮ್ಮನ್ನು ಅಪ್ರಮಾಣಿಕರು ಎಂದು ಸಾಬೀತು ಮಾಡಲು ಹೋದರು. ಆ ಎಲ್ಲಾ ಪ್ರಯತ್ನಗಳ ಹೊರತಾಗಿ ಇಂದು ನಾವು ಪ್ರಮಾಣಿಕರು ಎಂದು ನ್ಯಾಯಾಲಯ ತಿಳಿಸಿದೆ ಎಂದರು.
ದೆಹಲಿ ಅಬಕಾರಿ ಪ್ರಕರಣದಲ್ಲಿ ಮಾಜಿ ಸಿಎಂ ಅರವಿಂದದ್ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ಪಿತೂರಿ ಪಾತ್ರವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಆರೋಪಗಳು ನ್ಯಾಯಾಂಗ ಪರಿಶೀಲನೆಯಲ್ಲಿ ವಿಫಲವಾಗಿವೆ ಮತ್ತು ಮನೀಶ್ ಸಿಸೋಡಿಯಾ ಅವರ ಕಡೆಯಿಂದ ಯಾವುದೇ ಕ್ರಿಮಿನಲ್ ಉದ್ದೇಶ ಈ ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಆರೋಪಗಳು ನ್ಯಾಯಾಂಗ ಪರಿಶೀಲನೆಯಲ್ಲಿ ವಿಫಲವಾಗಿವೆ. ಮನೀಶ್ ಸಿಸೋಡಿಯಾ ಅವರ ಕಡೆಯಿಂದ ಯಾವುದೇ ಕ್ರಿಮಿನಲ್ ಉದ್ದೇಶ ಕಂಡುಬಂದಿಲ್ಲ ಎಂದು ಅವರನ್ನು ಪ್ರಕರಣದಿಂದ ಖುಲಾಸೆ ಮಾಡಿದೆ.
ಈ ತೀರ್ಪನ್ನು ಕೇಜ್ರಿವಾಲ್ ಪತ್ನಿ ಸುನೀತಾ ಕೂಡ ಸ್ವಾಗತಿಸಿದ್ದು, ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇವುಗಳನ್ನೂ ಓದಿ :
ದೆಹಲಿ ಅಬಕಾರಿ ನೀತಿ ಪ್ರಕರಣ; ಕವಿತಾ ವಿಚಾರಣೆಗೆ ಹಾಜರಾಗುತ್ತಿಲ್ಲ, ಸುಪ್ರೀಂಗೆ ಇಡಿ ವಿವರಣೆ

