ETV Bharat / bharat

ಗೆಳತಿಯ ಮಗುವನ್ನು ಅಪಹರಿಸಿ ದೆಹಲಿಯಿಂದ ಬಿಹಾರಕ್ಕೆ ಪರಾರಿಯಾಗಿದ್ದ ಪ್ರೇಮಿ ಕಾನ್ಪುರದಲ್ಲಿ ಬಂಧನ

ಬಿಹಾರದ ಯುವಕನೊಬ್ಬ ದೆಹಲಿಯಲ್ಲಿ ವಾಸಿಸುವ ತನ್ನ ಗೆಳತಿಯನ್ನು ತನ್ನೊಂದಿಗೆ ವಾಸಿಸಲು ಒತ್ತಾಯಿಸುತ್ತಿದ್ದ. ಇದಕ್ಕೆ ಅವಳು ನಿರಾಕರಿಸಿದಾಗ, ಅವನು ಅಪಾಯಕಾರಿ ಹೆಜ್ಜೆ ಇಟ್ಟಿದ್ದಾನೆ.

Representative image
ಪ್ರಾತಿನಿಧಿಕ ಚಿತ್ರ (IANS)
author img

By ETV Bharat Karnataka Team

Published : January 10, 2026 at 6:00 PM IST

2 Min Read
Choose ETV Bharat

ಕಾನ್ಪುರ (ಉತ್ತರ ಪ್ರದೇಶ) : ಗೆಳತಿಯ ಮಗುವನ್ನು ಅಪಹರಿಸಿ ದೆಹಲಿಯಿಂದ ಬಿಹಾರಕ್ಕೆ ಪರಾರಿಯಾಗಿದ್ದ ಪ್ರೇಮಿಯೊಬ್ಬನನ್ನು ಜಿಆರ್‌ಪಿ ಮತ್ತು ಆರ್‌ಪಿಎಫ್ ತಂಡ ಕಾನ್ಪುರದಲ್ಲಿ ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.

ಬಿಹಾರ ನಿವಾಸಿಯಾದ ಯುವಕ ಹೇಮಂತ್ ದೆಹಲಿಯಲ್ಲಿ ವಾಸಿಸುವ ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದರು. ಶುಕ್ರವಾರ ಮಹಿಳೆಯನ್ನು ಭೇಟಿ ಮಾಡಿ ತನ್ನೊಂದಿಗೆ ಬಂದು ವಾಸಿಸುವಂತೆ ಕೇಳಿಕೊಂಡಿದ್ದರು. ಆಗ ಆಕೆ ನಿರಾಕರಿಸಿದ್ದರು, ಈ ವೇಳೆ ಯಾವುದೋ ನೆಪದಲ್ಲಿ ಆಕೆಯ ಒಂದು ವರ್ಷದ ಮಗುವನ್ನು ಕರೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕಾನ್ಪುರ ಕೇಂದ್ರ ಠಾಣೆಯ ಆರ್‌ಪಿಎಫ್ ಉಸ್ತುವಾರಿ ಎಸ್​. ಎನ್. ಪಾಟಿದಾರ್ ಮಾತನಾಡಿದ್ದು, 'ದೆಹಲಿ ಪೊಲೀಸರ ಮಾಹಿತಿಯ ಆಧಾರದ ಮೇಲೆ ಮಗುವನ್ನು ಅಪಹರಿಸಿದ ಆರೋಪಿಯನ್ನು ಹುಡುಕಲು ವಿಕ್ರಮಶಿಲಾ ಎಕ್ಸ್‌ಪ್ರೆಸ್‌ನಲ್ಲಿ ಶೋಧ ನಡೆಸಲಾಯಿತು. ಫೋಟೋದ ಆಧಾರದಲ್ಲಿ ಮಗುವನ್ನು ಗುರುತಿಸಿ ನಂತರ ಅದನ್ನು ಅಪಹರಿಸಿದ್ದ ಬಿಹಾರದ ನಿವಾಸಿ ಹೇಮಂತ್ ಕುಮಾರ್ ಅವರನ್ನು ಬಂಧಿಸಲಾಯಿತು' ಎಂದಿದ್ದಾರೆ.

'ವಿಚಾರಣೆಯ ಸಮಯದಲ್ಲಿ ಹೇಮಂತ್ ದೆಹಲಿಯಲ್ಲಿ ವಾಸಿಸುವ ತನ್ನ ವಿವಾಹಿತ ಗೆಳತಿಯನ್ನು ಭೇಟಿಯಾಗಲು ಶುಕ್ರವಾರ ಬಿಹಾರದಿಂದ ದೆಹಲಿಗೆ ಬಂದಿದ್ದಾಗಿ ತಿಳಿಸಿದ್ದಾರೆ. ಅವರು ವಿವಾಹಿತೆಯನ್ನು ಬಿಹಾರಕ್ಕೆ ಕರೆದುಕೊಂಡು ಹೋಗುವುದಾಗಿ ಕೇಳಿಕೊಂಡಿದ್ದಾರೆ. ಆದರೆ, ಆ ಮಹಿಳೆ ಅವರ ಮನವಿಯನ್ನು ನಿರಾಕರಿಸಿದ್ದಾರೆ. ಹೀಗಾಗಿ, ಹೇಮಂತ್ ಆಕೆಯ ಒಂದು ವರ್ಷದ ಮಗುವನ್ನು ಆಟಿಕೆ ಖರೀದಿಸುವ ನೆಪದಲ್ಲಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಆ ಮಹಿಳೆ ದೆಹಲಿಯಲ್ಲಿ ಹೇಮಂತ್ ವಿರುದ್ಧ ಅಪಹರಣದ ಎಫ್‌ಐಆರ್ ದಾಖಲಿಸಿದ್ದರು. ಇದಾದ ನಂತರ, ಪೊಲೀಸ್ ತಂಡವು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಅವರ ಮೊಬೈಲ್ ಫೋನ್ ಟ್ರ್ಯಾಕ್​ನೊಂದಿಗೆ ಹೇಮಂತ್ ಅವರನ್ನು ಪತ್ತೆಹಚ್ಚಿತು. ಮಗು ಸುರಕ್ಷಿತವಾಗಿ ಚೇತರಿಸಿಕೊಂಡ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ' ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ದೆಹಲಿ ಪೊಲೀಸರು ಮತ್ತು ಮಗುವಿನ ಕುಟುಂಬ ಶನಿವಾರ ಬೆಳಗ್ಗೆ ಕಾನ್ಪುರಕ್ಕೆ ಆಗಮಿಸಿತು. ಆರ್‌ಪಿಎಫ್ ತಂಡವು ಮಗುವನ್ನು ತಾಯಿಗೆ ಹಸ್ತಾಂತರಿಸಿದೆ. ಆರೋಪಿ ಹೇಮಂತ್‌ನನ್ನು ದೆಹಲಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ : 3 ವರ್ಷದಲ್ಲಿ 9,639 ಮಕ್ಕಳ ಅಪಹರಣ: ಶೇ.71.50ರಷ್ಟು ಬಾಲಕಿಯರು; ಬೆಂಗಳೂರಲ್ಲಿ ಹೆಚ್ಚು ಪ್ರಕರಣ

ರಾಜ್ಯವನ್ನು ಕಂಗೆಡಿಸುತ್ತಿರುವ ಮಕ್ಕಳ ಅಪಹರಣ ಪ್ರಕರಣ : ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಮಕ್ಕಳ ಅಪಹರಣ ಪ್ರಕರಣಗಳು ರಾಜ್ಯವನ್ನು ಕಂಗೆಡಿಸುವಂತೆ ಮಾಡಿದೆ. ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯತೆ ಕಂಡು ಬರುತ್ತಿದೆ.

ಮಕ್ಕಳ ಅಪಹರಣ ಪ್ರಕರಣಗಳಿಗೆ ಕೇವಲ ಪೊಲೀಸರ ಮೇಲೆ ಬೊಟ್ಟು ಮಾಡುವ ಹಾಗಿಲ್ಲ‌. ಇದರಲ್ಲಿ ಪೋಷಕರ ಪಾತ್ರವೂ ಅತಿ ಹೆಚ್ಚಿದೆ. ಮಕ್ಕಳನ್ನು ನಿಗಾ ವಹಿಸಿ, ಜಾಗರೂಕತೆಯಿಂದ ನೋಡಿಕೊಳ್ಳಬೇಕು. ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲಿ ವಿಶೇಷ ಬಾಲ ಪೊಲೀಸ್ ಘಟಕ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಇರುತ್ತಾರೆ. ಆದರೆ, ಅಪಹರಣವಾದ ಅಥವಾ ನಾಪತ್ತೆಯಾಗಿರುವ ಮಕ್ಕಳನ್ನು ಶೋಧಿಸುವ ಕೆಲಸ ಕೇವಲ ಪೊಲೀಸರದ್ದು ಮಾತ್ರವಲ್ಲ, ಸಮುದಾಯ, ಪೋಷಕರು ಇದಕ್ಕೆ ಹೆಚ್ಚಿನ ಸಹಕಾರ ನೀಡುವ ಅವಶ್ಯಕತೆ ಇದೆ.

9,639 ಮಕ್ಕಳ ಅಪಹರಣ : ಕಳೆದ ಮೂರು ವರ್ಷಗಳಲ್ಲಿ, 2023, 2024 ಹಾಗೂ 2025ರ ನವೆಂಬರ್ 15ರ ವರೆಗೆ ರಾಜ್ಯದಲ್ಲಿ ಒಟ್ಟು 9,639 ಮಕ್ಕಳು ಅಪಹರಣಕ್ಕೊಳಗಾಗಿರುವ ವರದಿಯಾಗಿದೆ ಎಂದು ಗೃಹ ಇಲಾಖೆ ಅಂಕಿ-ಅಂಶ ನೀಡಿದೆ. 2023ರಲ್ಲಿ ರಾಜ್ಯದಲ್ಲಿ 3,039 ಮಕ್ಕಳು, 2024ರಲ್ಲಿ 3,411 ಮಕ್ಕಳು ಹಾಗೂ 2025ರಲ್ಲಿ ಇದುವರೆಗೆ 3,189 ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ.