ETV Bharat / bharat

ಈ ಊರಲ್ಲಿ ಇರೋದು ಒಂದೇ ಮನೆ: ಅಲ್ಲಿದೆ 4ಜಿ ಮೊಬೈಲ್​ ಟವರ್​, ವಿದ್ಯುತ್​, ರಸ್ತೆ ಸಂಪರ್ಕ; ಎಲ್ಲಿದೆ ಈ ವಿಶೇಷ ಹಳ್ಳಿ?

ಇಡೀ ಗ್ರಾಮದಲ್ಲಿ ಒಂದೇ ಒಂದು ಮನೆಯಿದೆ. ಇದನ್ನು ಸಂಪರ್ಕಿಸಲು ರಸ್ತೆ, ಮೊಬೈಲ್​​ನಲ್ಲಿ ಮಾತನಾಡಲು ಟವರ್​, ಬೆಳಕಿಗಾಗಿ ವಿದ್ಯುತ್​ ಸಂಪರ್ಕ ಕೂಡ ಕೊಡಲಾಗಿದೆ. ನೀವೂ ತಿಳಿದುಕೊಳ್ಳಿ ಈ ಊರಿನ ವಿಶೇಷತೆ.

KAKATI VILLAGE
ಹಿಮಾಚಲದಲ್ಲಿರುವ ಏಕ ಮನೆಯ ಗ್ರಾಮ (ETV Bharat)
author img

By ETV Bharat Karnataka Team

Published : January 7, 2026 at 8:03 PM IST

3 Min Read
Choose ETV Bharat

ಧರ್ಮಶಾಲಾ (ಹಿಮಾಚಲ ಪ್ರದೇಶ): ಗ್ರಾಮವೆಂದರೆ ನೂರಾರು ಮನೆಗಳು, ಸಾವಿರಾರು ಜನರು, ರಸ್ತೆ ಸಂಪರ್ಕ, ಶಾಲೆ ಇರುತ್ತವೆ. ಆದರೆ, ಈ ಊರು ಇವೆಲ್ಲಕ್ಕೂ ತದ್ವಿರುದ್ಧ. ಇಲ್ಲಿ ಒಂದೇ ಮನೆ ಇದೆ. ಅದೂ ಮಣ್ಣಿನ ಸೂರು. 6 ಮಂದಿ ವಾಸಿಸುತ್ತಿದ್ದಾರೆ. ಸುತ್ತಲೂ ಬಂಜರು ಕಣಿವೆ.

ಈ ವಿಶೇಷ ಊರಿನ ಹೆಸರು ಕಾಕತಿ. ಲಹೌಲ್ ಸ್ಪಿತಿ ಜಿಲ್ಲೆಯ ಕಾಜಾ ಪಂಚಾಯತಿಗೆ ಸೇರುತ್ತದೆ. ಬಂಜರು ಪರ್ವತಗಳಿಂದ ಆವೃತವಾಗಿದೆ. ಇಲ್ಲಿ ಹಸಿರಿನ ಕುರುಹು ಕೂಡ ಇಲ್ಲ. ಚಳಿಗಾಲದಲ್ಲಿ ಹಿಮ ಆವರಿಸಿಕೊಳ್ಳುತ್ತದೆ. ಪರ್ವತಗಳ ತಪ್ಪಲಿನ ಕೆಳಗೆ ಇಲ್ಲಿನ ನಿವಾಸಿಗಳಿಗೆ ಸೇರಿದ ಹೊಲಗಳಿವೆ. ಕೆಲವು ಸಣ್ಣ ಮರಗಳಿದ್ದು, ಅವೇ ಹಸಿರಿನ ಪ್ರತೀಕ. ಪರ್ವತಗಳೇ ಇಲ್ಲಿನ ಹೊಲಗಳಿಗೆ ಬೇಲಿಯಂತೆ ಕಾವಲು ಕಾಯುತ್ತವೆ.

ಶತಮಾನಗಳಷ್ಟು ಹಳೆಯ ಮಣ್ಣಿನ ಮನೆ
ಶತಮಾನಗಳಷ್ಟು ಹಳೆಯ ಮಣ್ಣಿನ ಮನೆ (ETV Bharat)

ಇಲ್ಲಿರುವ ಮಣ್ಣಿನ ಮನೆಯು 100 ವರ್ಷಗಳಷ್ಟು ಹಳೆಯದಾಗಿದೆ. ನಿವಾಸಿಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನುವಾರುಗಳನ್ನೂ ಸಾಕಿದ್ದಾರೆ. 21 ನೇ ಶತಮಾನದಲ್ಲಿ ಇಂತಹ ಹಳ್ಳಿ ಇರಲು ಸಾಧ್ಯವೇ ಎಂಬಷ್ಟರಮಟ್ಟಿಗೆ ಅಚ್ಚರಿ ಸೃಷ್ಟಿಸುತ್ತದೆ.

ಇದು ಗ್ರಾಮ, ಇರುವುದು ಒಂದೇ ಮನೆ: ಸ್ಪಿಟಿ ಕಣಿವೆಯ ಪ್ರಧಾನ ಕಚೇರಿ ಕಾಜಾದಲ್ಲಿದೆ. ಕಾಕತಿ ಗ್ರಾಮವು ಕಾಜಾದಿಂದ 10 ಕಿಲೋಮೀಟರ್ ದೂರದಲ್ಲಿದೆ. ಈ ಊರಿಗೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ಇಲ್ಲಿ ಕೇವಲ ಒಂದು ಮನೆ ಮತ್ತು ಒಂದೇ ಕುಟುಂಬ ಮಾತ್ರ ವಾಸಿಸುತ್ತಿದೆ. ಸುತ್ತಲೂ ಹಲವು ಕಿಲೋಮೀಟರ್‌ಗಳವರೆಗೂ ಯಾವುದೇ ಜನವಸತಿ ಇಲ್ಲ. ಇಲ್ಲಿರುವ ಕುಟುಂಬವು ಪೂರ್ವಜರ ಭೂಮಿಯನ್ನು ಉಳುವೆ ಮಾಡುತ್ತಾ ಜೀವನ ಸಾಗಿಸುತ್ತಿದೆ.

ತ್ಸೆರಿಂಗ್ ನಮಗ್ಯಾಲ್ ದಂಪತಿ
ತ್ಸೆರಿಂಗ್ ನಮಗ್ಯಾಲ್ ದಂಪತಿ (ETV Bharat)

ಕುಟುಂಬದಲ್ಲಿ ಇಬ್ಬರು ಸಹೋದರರಿದ್ದಾರೆ. ಕಿರಿಯ ಸಹೋದರ ಕಲ್ಜಾಂಗ್ ತಕ್ಪಾ ಲಾಮಾ ಎಂಬಾತ ಕುಟುಂಬದ ಸಂಪ್ರದಾಯದ ಪ್ರಕಾರ ಬೌದ್ಧ ಸನ್ಯಾಸಿಯಾಗಿದ್ದಾರೆ. ಹಿರಿಯ ಸಹೋದರ ತ್ಸೆರಿಂಗ್ ನಮಗ್ಯಾಲ್ ಅವರು ರಿಂಗ್ಜಿನ್ ಉಡಾನ್ ಎಂಬವರನ್ನು ವಿವಾಹವಾಗಿದ್ದಾರೆ. ಮೂವರು ಪುತ್ರರಿದ್ದಾರೆ. ಹಿರಿಯ ಪುತ್ರ ಕಾಂಗ್ರಾ ಮತ್ತು ಮಂಡಿ ಜಿಲ್ಲೆಗಳ ಗಡಿಯಲ್ಲಿರುವ ಬೌದ್ಧ ದೇವಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಎರಡನೇ ಮಗು ವಿಶೇಷಚೇತನವಾಗಿದೆ. ಮೂರನೇ ಮಗ ಟ್ಯಾಕ್ಸಿ ಓಡಿಸುತ್ತಾನೆ. ಈ ಕುಟುಂಬವು ಅವರ ವಂಶಾವಳಿಯ ಐದನೇ ಪೀಳಿಗೆಯಾಗಿದೆ. 15 ಬಿಘಾ (ಎಕರೆ) ಭೂಮಿಯಲ್ಲಿ ಕೃಷಿ ಮಾಡುತ್ತಿದೆ.

ವಲಸೆಯ ಬಗ್ಗೆ ಎಂದಿಗೂ ಯೋಚಿಸಿಲ್ಲ: ಡಿಸೆಂಬರ್‌ನಲ್ಲಿ ವಿಪರೀತ ಹಿಮಪಾತವಾಗುತ್ತದೆ. ಲಹೌಲ್ ಸ್ಪಿಟಿ ನಗರವು ಎಲ್ಲ ಭಾಗಗಳಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಇಲ್ಲಿ ಹಲವಾರು ಅಡಿಗಳಷ್ಟು ಹಿಮ ಬೀಳುತ್ತದೆ. ಹೆಚ್ಚಿನ ಜನರು ಕುಲು ಮನಾಲಿ ಮತ್ತು ಮಂಡಿಗೆ ವಲಸೆ ಹೋಗುತ್ತಾರೆ. ಆದರೆ ಚೆರಿಂಗ್ ಅವರ ಕುಟುಂಬವು ಯಾವತ್ತೂ ವಲಸೆ ಹೋಗಿಲ್ಲ.

ಕಣಿವೆಯ ಮಧ್ಯೆ ಇರುವ ಮನೆ ಮತ್ತು ಜಮೀನು
ಕಣಿವೆಯ ಮಧ್ಯೆ ಇರುವ ಮನೆ ಮತ್ತು ಜಮೀನು (ETV Bharat)

"ನಾವು ಸ್ಪಿಟಿ ಕಣಿವೆಯನ್ನು ತುಂಬಾ ಪ್ರೀತಿಸುತ್ತೇವೆ. ವಲಸೆ ಹೋಗುವ ಬಗ್ಗೆ ಎಂದಿಗೂ ಯೋಚಿಸಿಲ್ಲ. ನಾವು ಗ್ರಾಮೀಣ ಪರಿಸರವನ್ನು ಇಷ್ಟಪಡುತ್ತೇವೆ. ಜನದಟ್ಟಣೆಯ ನಗರಗಳು ನಮಗೆ ಇಷ್ಟವಿಲ್ಲ. ಕೆಲವೊಮ್ಮೆ, ಚಳಿಗಾಲದಲ್ಲಿ ಮಂಡಿ ಜಿಲ್ಲೆಯ ರೆವಾಲ್ಸರ್ ಅಥವಾ ಉತ್ತರಾಖಂಡದ ನೈನಿತಾಲ್‌ಗೆ ಹೋಗಿದ್ದೇವೆ. ಸ್ವಲ್ಪ ಸಮಯದ ನಂತರ ಹಳ್ಳಿಗೆ ಹಿಂತಿರುಗುತ್ತೇವೆ. ನಮ್ಮ ಕುಟುಂಬದ ಅನೇಕ ತಲೆಮಾರುಗಳು ಇಲ್ಲಿ ವಾಸಿಸುತ್ತಾ ಬಂದಿವೆ" ಎಂದು ಕುಟುಂಬವು ತಿಳಿಸಿದೆ.

ಚಳಿಗಾಲದಲ್ಲಿ ಮಂಜು ಆವರಿಸಿದಾಗ ಕಾಣುವ ದೃಶ್ಯ
ಚಳಿಗಾಲದಲ್ಲಿ ಮಂಜು ಆವರಿಸಿದಾಗ ಕಾಣುವ ದೃಶ್ಯ (ETV Bharat)

ಚಳಿಗಾಲದಲ್ಲಿ ಇಲ್ಲಿ -20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗುತ್ತದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಗ್ರಾಮವು ಡಿಜಿಟಲ್ ಇಂಡಿಯಾಕ್ಕೆ ಸಂಪರ್ಕ ಹೊಂದಿದೆ. ಬಿಎಸ್‌ಎನ್‌ಎಲ್ ಇಲ್ಲಿ 4ಜಿ ಟವರ್ ಸ್ಥಾಪಿಸಿದೆ. ಇದರಿಂದ, ಕುಟುಂಬವು ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುತ್ತಿದೆ. 2011 ರಲ್ಲಿ ಈ ಮನೆಗೆ ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಗಿದೆ.

ರಸ್ತೆ, ವಿದ್ಯುತ್​, ಮೊಬೈಲ್​ ಟವರ್​ ಇಲ್ಲಿದೆ: ಕಾಕತಿ ಗ್ರಾಮವು 2008 ರಲ್ಲಿ ರಸ್ತೆ ಸಂಪರ್ಕವು ಕಂಡಿತು. 2011 ರಲ್ಲಿ ಮನೆಗೆ ವಿದ್ಯುತ್ ಸಂಪರ್ಕವೂ ಸಿಕ್ಕಿತು. 2025 ರಲ್ಲಿ ಬಿಎಸ್​ಎನ್​ಎಲ್​ 4ಜಿ ಮೊಬೈಲ್ ನೆಟ್‌ವರ್ಕ್ ಸ್ಥಾಪಿಸಿತು. ಚೆರಿಂಗ್ ಅವರ ಪೂರ್ವಜರು ಈ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪೂರ್ವಜರು ಕಟ್ಟಿಸಿದ ಮಣ್ಣಿನ ಮನೆ ಈಗಲೂ ಇದೆ. ಹಿಮಪಾತದ ವೇಳೆ ಮನೆಯಿಂದ ಹೊರಬರಲು ಸಾಧ್ಯವಾಗದ ಕಾರಣ, ಮನೆಯೊಳಗೆ ಔಷಧಗಳು, ಆಹಾರ ಸಾಮಗ್ರಿ, ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಂಡಿರುತ್ತದೆ.

ಇವುಗಳನ್ನೂ ಓದಿ: