ETV Bharat / bharat

ಜಮ್ಮು- ಕಾಶ್ಮೀರದಲ್ಲಿ ಭಾರಿ ಮಳೆಗೆ ಭೂಕುಸಿತ; ಮನೆಗಳಿಗೆ ಹಾನಿ, ರಸ್ತೆಗಳು ಅವಶೇಷಗಳಿಂದ ಆವೃತ

ಹಲವು ಕಟ್ಟಡಗಳು ಹಾನಿಗೊಂಡಿದ್ದು, ಹಲವು ವಾಹನಗಳು ಮಣ್ಣಿನ ಅವಶೇಷಗಳಿಂದ ತುಂಬಿದೆ. ರಸ್ತೆಗಳು ಕಲ್ಲು ಮತ್ತು ಅವಶೇಷಗಳಿಂದ ಆವೃತಗೊಂಡಿದೆ.

J-K: Several houses, shops buried under debris after heavy rainfall triggers landslide in upper reaches of Doda
ಜಮ್ಮು- ಕಾಶ್ಮೀರದ ದೋಡಾದಲ್ಲಿ ಭಾರಿ ಮಳೆ (ANI)
author img

By ANI

Published : July 7, 2026 at 1:00 PM IST

1 Min Read
Choose ETV Bharat

ದೋಡಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಥಾತ್ರಿ ಪ್ರದೇಶದ ಮೇಲಿನ ಪ್ರದೇಶದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಪರಿಣಾಮ ಹಲವಾರು ಮನೆಗಳು, ಅಂಗಡಿಗಳು ಮತ್ತು ವಾಹನಗಳು ಅವಶೇಷಗಳ ರಾಶಿಯಡಿ ಹೂತುಹೋಗಿವೆ.

ಹಲವು ಕಟ್ಟಡಗಳು ಹಾನಿಗೊಂಡಿದ್ದು, ವಾಹನಗಳು ಮಣ್ಣಿನ ಅವಶೇಷಗಳಿಂದ ತುಂಬಿವೆ. ರಸ್ತೆಗಳು ಕಲ್ಲು ಮತ್ತು ಅವಶೇಷಗಳಿಂದ ಆವೃತಗೊಂಡಿವೆ.

ಸದ್ಯಕ್ಕೆ ಈ ಭೂಕುಸಿತದಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ದೋಡಾ ಜಿಲ್ಲೆಯ ಥಾತ್ರಿ ಪ್ರದೇಶದ ಮೇಲ್ಭಾಗದ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಇಲ್ಲಿಗೆ ಕೆಸರು, ಬಂಡೆಗಳು ಮತ್ತು ಅವಶೇಷಗಳು ನುಗ್ಗಿಬಂದಿವೆ.

ಈ ಘಟನೆ ವರದಿ ಬೆನ್ನಲ್ಲೇ ಸ್ಥಳಕ್ಕೆ ತಹಶೀಲ್ದಾರ್ ಸತೀಶ್ ರಾಣಾ ಭೇಟಿ ನೀಡಿ, ಪ್ರಾಥಮಿಕ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮಣ್ಣು ಮತ್ತು ಅವಶೇಷಗಳ ಕುಸಿತದಿಂದಾಗಿ ಕನಿಷ್ಠ 10 ಮನೆಗಳು ಮತ್ತು 25 ಅಂಗಡಿಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ರಾತ್ರಿ ಸುಮಾರು 12 ಗಂಟೆ ಭಾರಿ ಮಳೆ ಆರಂಭವಾಯಿತು. ಬಹುಶಃ ಮೋಡ ಸ್ಫೋಟದ ಪರಿಣಾಮವಾಗಿ ಭಾರಿ ಪ್ರಮಾಣದ ಅವಶೇಷಗಳು ಕೊಚ್ಚಿ ಬಂದಿದ್ದು, ಜನರ ಮನೆಗಳಿಗೆ ಹಾನಿಯಾಗಿದೆ. ಮಣ್ಣು ಮಿಶ್ರಿತ ನೀರು ಮನೆಗಳೊಳಗೆ ನುಗ್ಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 10 ಮನೆಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಈ ಕುರಿತು ಸ್ಥಳೀಯರು ಮಾತನಾಡಿ, ರಾತ್ರಿ ಮಲಗಿದ್ದಾಗ, ಸುಮಾರು 12: 30ರ ಹೊತ್ತಿಗೆ ಭಾರಿ ಮಳೆಯ ಸದ್ದು ಕೇಳಿಬಂತು. ನಿರಂತರವಾಗಿ ನೀರು ಹರಿಯುವ ಶಬ್ಧ ಕೇಳಿಸಿತು. ಸುಮಾರು ನಸುಕಿನ 3 ಗಂಟೆ ಹೊತ್ತಿಗೆ ಪ್ರವಾಹ ಉಂಟಾಯಿತು. ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ವ್ಯಾಪಕ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಪ್ರದೇಶದಲ್ಲಿ ಆಗಿರುವ ಹಾನಿಯ ಸಂಪೂರ್ಣ ಪ್ರಮಾಣವನ್ನು ಅಂದಾಜಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜುಲೈ 6ರಂದು ದೋಡಾದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಸೋಮವಾರದಂದು ಈ ಪ್ರದೇಶದಲ್ಲಿ 26.6 ಮಿಲಿ ಮೀಟರ್​ ಮಳೆಯಾಗಿದೆ. ಇದು ಪ್ರದೇಶದಲ್ಲಿ ಸಾಮಾನ್ಯಕ್ಕಿಂತ 4.1 ಮಿಮೀ ಮಳೆ ಹೆಚ್ಚಾಗಿದೆ. ಆದ್ರೆ ದೋಡಾ, ಕಿಶ್ತ್ವಾರ್, ಉಧಂಪುರ, ರಿಯಾಸಿ, ಜಮ್ಮು, ಸಾಂಬಾ, ಖತುವಾ ಮಾತ್ರವಲ್ಲದೆ ವಿವಿಧೆಡೆ ಹೆಚ್ಚಿನ ಪ್ರಮಾಣದ ಮಳೆ ಅಬ್ಬರಿಸಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ: ಹಠಾತ್ ಪ್ರವಾಹದಿಂದ ರಸ್ತೆಯಲ್ಲೇ ಹೂತುಹೋದ ವಾಹನಗಳು