ETV Bharat / bharat

ಇರಾನ್ v/s ಇಸ್ರೇಲ್, ಅಮೆರಿಕ ಸಂಘರ್ಷ: ಮಧ್ಯಪ್ರಾಚ್ಯದಲ್ಲಿ ಸಿಬಿಎಸ್​ಇ 10, 12ನೇ ಕ್ಲಾಸ್​ ಪರೀಕ್ಷೆಗಳ ಮುಂದೂಡಿಕೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಆರ್ಥಿಕತೆಯ ಮೇಲೆ ಮಾತ್ರವಲ್ಲದೇ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ.

CBSE EXAMS POSTPONES
ಸಾಂದರ್ಭಿಕ ಚಿತ್ರ (IANS)
author img

By PTI

Published : March 3, 2026 at 1:44 PM IST

2 Min Read
Choose ETV Bharat

ನವದೆಹಲಿ: ಇರಾನ್ - ಇಸ್ರೇಲ್ ಮತ್ತು ಅಮೆರಿಕದ ಸಂಘರ್ಷದ ಮಧ್ಯೆ, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಮಾರ್ಚ್ 5 ರಂದು ನಿಗದಿಯಾಗಿದ್ದ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮುಂದೂಡಿ ಮಂಗಳವಾರ ಆದೇಶಿಸಿದೆ.

"ಮಧ್ಯಪ್ರಾಚ್ಯದ ಭಾಗಗಳಾದ ಬಹ್ರೇನ್, ಇರಾನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿನ ದಾಳಿಗಳು ನಡೆಯುತ್ತಿರುವುದರಿಂದ ಮಾರ್ಚ್ 5 ರಿಂದ ನಡೆಯಬೇಕಿದ್ದ 10, 12 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲು ಮಂಡಳಿ ನಿರ್ಧರಿಸಿದೆ ಎಂದು CBSE ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಹೇಳಿದ್ದಾರೆ.

ಮಾರ್ಚ್ 5ರ ನಂತರ ಪರಿಸ್ಥಿತಿ ಪರಿಶೀಲಿಸಿ, ಮುಂದಿನ ಪರೀಕ್ಷಾ ದಿನಾಂಕವನ್ನು ಘೋಷಿಸಲಾಗುವುದು. ಉದ್ವಿಗ್ನತೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ತಡೆಯಲು ಈ ನಿರ್ಧಾರ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಮಂಡಳಿಯು, ಇದೇ ಪ್ರದೇಶದಲ್ಲಿ ಮಾರ್ಚ್ 2 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಿತ್ತು.

ಇರಾನ್​ ಧರ್ಮಗುರು ಖಮೇನಿ ಹತ್ಯೆ: ಇಸ್ರೇಲ್ ಮತ್ತು ಅಮೆರಿಕದ ಸೇನಾ ಪಡೆಗಳು ಜಂಟಿಯಾಗಿ ಫೆಬ್ರವರಿ 28 ರಂದು ಇರಾನ್ ಮೇಲೆ ದಾಳಿ ನಡೆಸಿದವು. ಇದರಲ್ಲಿ ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದರು. ಇದರಿಂದ ಕುಪಿತಗೊಂಡಿರುವ ಇರಾನ್​ ಅಮೆರಿಕ ನೆಲೆಗಳು ಇರುವ ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ನಡೆಸಿ ತಿರುಗೇಟು ನೀಡುತ್ತಿದೆ.

ಇದರಿಂದ, ಕಳೆದ ನಾಲ್ಕು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಬಾಂಬ್​, ಕ್ಷಿಪಣಿ, ಡ್ರೋನ್​ಗಳ ದಾಳಿಯಿಂದ 500 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಇಸ್ರೇಲ್​ ಶಾಲೆಯೊಂದರ ಮೇಲೆ ನಡೆಸಿದ ದಾಳಿಯಲ್ಲಿ ಈಗಾಗಲೇ 200 ಮಕ್ಕಳು ಮೃತಪಟ್ಟಿದ್ದಾರೆ ಎಂದು ಇರಾನ್​ ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧ ಸದ್ಯಕ್ಕೆ ನಿಲ್ಲಲ್ಲ-ಟ್ರಂಪ್​: ಇತ್ತ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಈ ಯುದ್ಧ ಸದ್ಯ ನಿಲ್ಲಲ್ಲ ಎಂದು ಹೇಳಿದ್ದಾರೆ. ಇರಾನ್ ಮೇಲೆ ನಡೆಯುತ್ತಿರುವ ಭಾರೀ ಮತ್ತು ನಿಖರವಾದ ಬಾಂಬ್ ದಾಳಿ ಒಂದು ವಾರ ಅಥವಾ ಅಗತ್ಯವಿರುವ ದಿನಗಳವರೆಗೆ ಮುಂದುವರಿಯುತ್ತದೆ ಎಂದಿದ್ದಾರೆ.

ಇಸ್ರೇಲ್​ ಮತ್ತು ಅಮೆರಿಕಕ್ಕೆ ಟಕ್ಕರ್ ನೀಡಲು ಇರಾನ್ ಕೂಡ ತನ್ನ ಬತ್ತಳಿಕೆಯಲ್ಲಿರುವ ಶಸ್ತ್ರಾಸ್ತ್ರಗಳ ವಿಡಿಯೋ ಮಾಡಿ ಪ್ರಕಟಿಸಿದೆ. ಎರಡೂ ರಾಷ್ಟ್ರಗಳ ಮೇಲೆ ದಾಳಿಗೆ ಈ ಬಾಂಬ್​ಗಳು ಸಿದ್ಧವಾಗಿವೆ ಎಂದು ಹೇಳಿದೆ.

ಇವುಗಳನ್ನೂ ಓದಿ: