ETV Bharat / bharat

ಈಟಿವಿ ಭಾರತ್​ ಸಹಯೋಗದಲ್ಲಿ ಫೆ.26, 27 ರಂದು ಹೈದರಾಬಾದ್​ನಲ್ಲಿ ರಾಷ್ಟ್ರೀಯ ಮಟ್ಟದ ಐಪಿಇ ಸ್ಟಾರ್ಟಪೀಡಿಯಾ

ಇನ್​​ಸ್ಟಿಟ್ಯೂಟ್ ಆಫ್ ಪಬ್ಲಿಕ್ ಎಂಟರ್‌ಪ್ರೈಸ್ (ಐಪಿಇ) ಮತ್ತು ಈಟಿವಿ ಭಾರತ್​ ಸಹಯೋಗದಲ್ಲಿ 26, 27 ರಂದು 12ನೇ ಸ್ಟಾರ್ಟ್ಅಪ್ ಶೃಂಗಸಭೆ ಸ್ಟಾರ್ಟಪೀಡಿಯಾ-26 ನಡೆಯಲಿದೆ.

IPE STARTUPEDIA 26
ಇನ್​​ಸ್ಟಿಟ್ಯೂಟ್ ಆಫ್ ಪಬ್ಲಿಕ್ ಎಂಟರ್‌ಪ್ರೈಸ್ ಕಚೇರಿ (ETV Bharat)
author img

By ETV Bharat Karnataka Team

Published : February 23, 2026 at 6:01 AM IST

2 Min Read
Choose ETV Bharat

ಹೈದರಾಬಾದ್: ಇನ್​​ಸ್ಟಿಟ್ಯೂಟ್ ಆಫ್ ಪಬ್ಲಿಕ್ ಎಂಟರ್‌ಪ್ರೈಸ್ (ಐಪಿಇ), ಈಟಿವಿ ಭಾರತ್ ಜೊತೆಗೂಡಿ ಫೆಬ್ರವರಿ 26-27 ರಂದು ಇಲ್ಲಿನ ಶಮಿರ್‌ಪೇಟ್ ಕ್ಯಾಂಪಸ್‌ನಲ್ಲಿ 12ನೇ ಸ್ಟಾರ್ಟ್ಅಪ್ ಶೃಂಗಸಭೆ ಸ್ಟಾರ್ಟಪೀಡಿಯಾ-26 ಅನ್ನು ಆಯೋಜಿಸಲಾಗುತ್ತಿದೆ.

ವಿದ್ಯಾರ್ಥಿಗಳು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳು ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದು ವ್ಯವಹಾರ ಮತ್ತು ಸ್ಟಾರ್ಟ್ಅಪ್ ವಿಚಾರಗಳಲ್ಲಿ ಚರ್ಚಿಸಲು ಮತ್ತು ಮಾರ್ಗದರ್ಶನ ಪಡೆಯಲು ಅವಕಾಶ ನೀಡಲಿದೆ ಎಂದು ಐಪಿಇ ಅಧಿಕಾರಿಯೊಬ್ಬರು ತಿಳಿಸಿದರು.

ಸ್ಟಾರ್ಟಪೀಡಿಯಾ-26 ಶೃಂಗವು ಮಾರ್ಗದರ್ಶನ ನೀಡುವ ಸ್ಟಾರ್ಟ್ಅಪ್ ಕಾರ್ಯಕ್ರಮವಾಗಿದೆ. ಪ್ರಮುಖ ಉದ್ಯಮಿಗಳು ಮತ್ತು ವ್ಯಾಪಾರ ತಜ್ಞರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮಾರ್ಗದರ್ಶನ ಮತ್ತು ತರಬೇತಿ ಪಡೆಯಲು ಬಯಸುವ ಹೊಸಬರಿಗೆ ನೆರವಾಗಲಿದೆ ಎಂದು ಅವರು ಹೇಳಿದರು.

ಶೃಂಗಸಭೆಯ ವಿವರ
ಶೃಂಗಸಭೆಯ ವಿವರ (ETV Bharat)

"ಯಾರಾದರೂ ವ್ಯವಹಾರ ಆರಂಭಿಸುವ ಉದ್ದೇಶ ಹೊಂದಿದ್ದರೆ ಅಥವಾ ಹೊಸ ವ್ಯವಹಾರ ಅಥವಾ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಲು ಬಯಸಿದರೆ, ಸ್ಟಾರ್ಟಪೀಡಿಯಾ ಶೃಂಗವು ನಿಮಗಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ವೇದಿಕೆಯಾಗಿದೆ" ಎಂದು ಅವರು ಮಾಹಿತಿ ನೀಡಿದರು.

IPE ಹೈದರಾಬಾದ್ ರಾಷ್ಟ್ರೀಯ ಮಟ್ಟದ ಸ್ಟಾರ್ಟ್ಅಪ್ ಶೃಂಗಸಭೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ಈ ಕಾರ್ಯಕ್ರಮವು ನಾಯಕತ್ವ ಕೌಶಲ್ಯಗಳನ್ನು ಕಲಿಯಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನೆಟ್‌ವರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡುತ್ತದೆ. Startupedia-26 ಕಲಿಕೆ, ಅನುಷ್ಠಾನ ಮತ್ತು ನಾಯಕತ್ವದ ಗುಣಗಳನ್ನು ಹೊಂದಿದೆ. ಹೊಸ ವ್ಯವಹಾರ ಉದ್ದೇಶಗಳನ್ನು ಉತ್ತೇಜಿಸಲು ಮತ್ತು ಅವರನ್ನು ಹೂಡಿಕೆದಾರರೊಂದಿಗೆ ಸಂಪರ್ಕಿಸಲು ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ" ಎಂದು ಐಪಿಇ ಅಧಿಕಾರಿ ತಿಳಿಸಿದರು.

ನವೀನ ವ್ಯವಹಾರ ಕಲ್ಪನೆಗಳನ್ನು ಉತ್ತೇಜಿಸುವುದು, ಯುವಕರು ಹೊಸ ಮಾರ್ಗಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುವುದು, ನಾಯಕತ್ವ ಕೌಶಲ್ಯಗಳನ್ನು ನೀಡುವುದು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳನ್ನು ಹೂಡಿಕೆದಾರರೊಂದಿಗೆ ಸಂಪರ್ಕಿಸುವುದು Startupedia-26 ನ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

"ಈ ಶೃಂಗಸಭೆ ನವೋದ್ಯಮ ಜಗತ್ತಿಗೆ ಕಾಲಿಡಲು ಬಯಸುವ ಹೊಸಬರಿಗಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಅವರಲ್ಲಿ ವ್ಯವಹಾರ ಕಲ್ಪನೆಗಳನ್ನು ಅಭಿವೃದ್ಧಿಪಡಿಸುವುದು ಗುರಿಯಾಗಿದೆ" ಎಂದರು.

ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ನಾಯಕತ್ವ ಕೌಶಲ್ಯಗಳು, ಕಲ್ಪನೆಗಳ ತುಲನೆ ಮತ್ತು ಮಾರ್ಗದರ್ಶನ, ಬ್ಯುಸಿನೆಸ್​ ಪಿಚ್ ಡೆಕ್, ಸಂಪರ್ಕ ಅವಕಾಶಗಳು, ಪಂಡಿತರ ಚರ್ಚೆಗಳು ಇರಲಿವೆ.

ಶೃಂಗಸಭೆಯಲ್ಲಿ ಹೀಗೆ ನೋಂದಣಿ ಮಾಡಿಕೊಳ್ಳಿ

  • Startupedia-26 ನಲ್ಲಿ ಭಾಗವಹಿಸಲು ಬಯಸುವವರು ನೀಡಲಾಗುವ ಕರಪತ್ರದಲ್ಲಿ ಇರುವ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ 1 ರಿಂದ 5 ಸದಸ್ಯರ ತಂಡವಾಗಿ ನೋಂದಾಯಿಸಿಕೊಳ್ಳಬಹುದು.
  • ಭಾಗವಹಿಸುವವರು ತಮ್ಮ ಕಲ್ಪನೆ/ಪರಿಕಲ್ಪನೆಯ ವಿಶ್ಲೇಷಣೆಯನ್ನು ಒದಗಿಸಬೇಕು.
  • ನೋಂದಣಿಯ ನಂತರ, ಅವರು ಸಲಹೆಗಳೊಂದಿಗೆ ಇಮೇಲ್ ಸಂದೇಶಗಳನ್ನ ಪಡೆಯುತ್ತಾರೆ. ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ ಮತ್ತು ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ.
  • ಆಯ್ಕೆಯಾದ ತಂಡಗಳು ಪಾವತಿ ಮಾಡಿ ದೃಢೀಕರಿಸಬೇಕು.

ಶೃಂಗಸಭೆಯ ವೇಳಾಪಟ್ಟಿ

  • ಸ್ಥಳ: ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಎಂಟರ್‌ಪ್ರೈಸ್ (IPE) ಶಮೀರ್‌ಪೇಟ್, ಹೈದರಾಬಾದ್
  • ಫೆಬ್ರವರಿ 26 ರಂದು ಬೆಳಿಗ್ಗೆ 9 ಗಂಟೆಗೆ ನೋಂದಣಿ, ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಪ್ರಾರಂಭ
  • 11.30 ರಿಂದ 12.30 ರವರೆಗೆ: ಹವಾಮಾನ ತಂತ್ರಜ್ಞಾನ ಮತ್ತು ಹಸಿರು ಯುನಿಕಾರ್ನ್‌ಗಳ ಕುರಿತು ಭಾಷಣ
  • 12.30 ರಿಂದ 1.30 ರವರೆಗೆ: ಮುಂದಿನ ಪೀಳಿಗೆಯ ಸಂಸ್ಥಾಪಕರ ದೃಷ್ಟಿಕೋನ, ಮೌಲ್ಯಗಳ ಕುರಿತು AI ಹೊರತಾದ ನಾವೀನ್ಯತೆಗಳ ಕುರಿತು ಚರ್ಚೆ
  • 2.30 ರಿಂದ 3.30 ರವರೆಗೆ: ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ತಂತ್ರಗಳ ಕುರಿತು ಪ್ಯಾನಲ್ ಚರ್ಚೆ.
  • 3.30 ರಿಂದ 4.30 ರವರೆಗೆ: ಕ್ರಿಯೇಟರ್ ಎಕಾನಮಿ 3.0 - ಬಿಲ್ಡ್, ಬ್ರ್ಯಾಂಡ್ ಮತ್ತು ಹಣಗಳಿಕೆ ಕುರಿತು ಭಾಷಣ.

ಇವುಗಳನ್ನೂ ಓದಿ: