ದುಬೈ ಸೇರಿದಂತೆ ಮಧ್ಯಪ್ರಾಚ್ಯದ ಈ ದೇಶಗಳಿಗೆ ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ
ದುಬೈ, ಜೋರ್ಡಾನ್, ದೋಹಾ, ದಮ್ಮಮ್, ಬಹ್ರೈನ್, ಶರ್ಜಾ, ಕುವೈತ್, ರಾಸ್ ಅಲ್-ಖೈಮಾ ದೇಶಗಳಿಗೆ ವಿಮಾನ ಹಾರಾಟ ಸೇವೆ ರದ್ದು ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.


By PTI
Published : February 28, 2026 at 6:19 PM IST
ನವದೆಹಲಿ: ಇರಾನ್ ಮೇಲಿನ ವೈಮಾನಿಕ ದಾಳಿ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿ ಪರಿಗಣಿಸಿ ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇಂಡಿಗೋ, ಇರಾನ್ ಮತ್ತು ಮಧ್ಯಪ್ರಾಚ್ಯದಲ್ಲಿನ ವಾಯು ಪ್ರದೇಶ ನಿರ್ಬಂದ ದೃಷ್ಟಿಯನ್ನು ಗಮನದಲ್ಲಿರಿಸಿಕೊಂಡ ಮಧ್ಯ ಪ್ರಾಚ್ಯಕ್ಕೆ ಪ್ರಯಾಣ ನಡೆಸುವ ಎಲ್ಲಾ ವಿಮಾನಗಳನ್ನು ಇಂದು ಮಧ್ಯರಾತ್ರಿ 12ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು.
ದುಬೈ, ಜೋರ್ಡಾನ್, ದೋಹಾ, ದಮ್ಮಮ್, ಬಹ್ರೈನ್, ಶರ್ಜಾ, ಕುವೈತ್, ರಾಸ್ ಅಲ್-ಖೈಮಾ ದೇಶಗಳಿಗೆ ವಿಮಾನ ಹಾರಾಟ ಸೇವೆ ರದ್ದು ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಭದ್ರತೆ ಮತ್ತು ಸುರಕ್ಷತೆಯು ಪ್ರಮುಖವಾಗಿದ್ದು, ಈ ಹಿನ್ನೆಲೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಮ್ಮ ತಂಡವು ಅಲ್ಲಿನ ಪರಿಸ್ಥಿತಿಗಳ ಸೂಕ್ಷ್ಮ ಅವಲೋಕನ ನಡೆಸಿದೆ. ವಿಮಾನ ಹಾರಾಟದಲ್ಲಿ ಅಡ್ಡಿಯುಂಟಾಗಲಿದೆ ಎಂದಿದೆ.
ಏರ್ ಇಂಡಿಯಾ ಸಂಸ್ಥೆ ಕೂಡ ಪರಿಸ್ಥಿತಿ ಬಿಕ್ಕಟ್ಟಿನ ಹಿನ್ನೆಲೆ ವಾಯವ್ಯ ಏಷ್ಯಾಕ್ಕೆ ಪ್ರಯಾಣಿಸುವ ವಿಮಾನಗಳನ್ನು ರದ್ದು ಮಾಡಿದೆ. ಈ ಕುರಿತು ಪೋಸ್ಟ್ ಮಾಡಿರುವ ಸಂಸ್ಥೆ, ಮಧ್ಯ ಪ್ರದೇಶದ ಹಲವು ಭಾಗದಲ್ಲಿ ಉಂಟಾಗುತ್ತಿರುವ ಬೆಳವಣಿಗೆ ಹಿನ್ನೆಲೆ ಮಧ್ಯಪ್ರಾಚ್ಯದ ಎಲ್ಲಾ ಪ್ರದೇಶಗಳ ಎಲ್ಲಾ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಕ್ರಮ ನಿರ್ವಹಣೆಗೆ ನಾವು ಬದ್ಧರಾಗಿರುವುದಾಗಿ ತಿಳಿಸಿದೆ.
ನಮ್ಮ ವಿಮಾನ ಕಾರ್ಯಾಚರಣೆಗಳಿಗೆ ಸುರಕ್ಷತೆ ಮತ್ತು ಭದ್ರತಾ ಪರಿಸ್ಥಿತಿ ನಿರ್ಣಯಿಸುವುದನ್ನು ನಾವು ಮುಂದುವರಿಸುತ್ತೇವೆ. ಅಗತ್ಯವಿರುವ ಕಾರ್ಯಾಚರಣೆಗಳನ್ನು ಪೂರ್ವಭಾವಿಯಾಗಿ ಹೊಂದಿಸುತ್ತೇವೆ. ನಮ್ಮ ತಂಡಗಳು ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಿವೆ ಎಂದಿದೆ.
ಇದಕ್ಕೆ ಮುನ್ನ ಇಸ್ರೇಲ್ ವಾಯು ಪ್ರದೇಶ ಬಂದ್ ಆದ ಹಿನ್ನೆಲೆ ದೆಹಲಿಯಿಂದ ಟೆಲ್ ಅವಿವ್ಗೆ ಪ್ರಯಾಣಿಸುತ್ತಿದ್ದ ವಿಮಾನ ಮರಳಿ ಮುಂಬೈನಲ್ಲಿ ಲ್ಯಾಂಡ್ ಆಯಿತು.
ಇರಾನ್ ಅನ್ನು ಅನ್ನು ಗುರಿಯಾಗಿಸಿಕೊಂಡು ಅಮೆರಿಕ -ಇಸ್ರೇಲ್ ಜಂಟಿ ದಾಳಿ ನಡೆಸಿದೆ. ಪರಿಣಾಮವಾಗಿ ಇರಾನ್ ಟೆಹ್ರಾನ್ನಲ್ಲಿ ಅದರ ಅರೆಸೈನಿಕ ಪಡೆಗಳು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿದವು. ಅಲ್ಲಿನ ಯುಎಸ್ ನೌಕಾಪಡೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆದಿದೆ ಎಂದು ಬಹ್ರೇನ್ ಹೇಳಿದೆ. ಯುಎಸ್ ಸೈನ್ಯದ ನೆಲೆಯಾಗಿರುವ ಕುವೈತ್‌ನಲ್ಲಿ ಸೈರನ್‌ಗಳು ಮತ್ತು ಸ್ಫೋಟಗಳ ಸದ್ದು ಕೇಳಿಬರುತ್ತಿದೆ ಎಂದು ತಿಳಿಸಿವೆ. ಕತಾರ್‌ನಲ್ಲಿಯೂ ಸ್ಫೋಟಗಳು ಕೇಳಿಬರುತ್ತಿವೆ ಎಂಬ ವರದಿಯಾಗಿದೆ.
ಇದನ್ನೂ ಓದಿ:
ಅಮೆರಿಕ, ಇಸ್ರೇಲ್ ದಾಳಿ ಬೆನ್ನಲ್ಲೇ ಮಧ್ಯಪ್ರಾಚ್ಯದಾದ್ಯಂತ ಇರಾನ್ ಪ್ರತೀಕಾರ; ಏರ್ ಇಂಡಿಯಾ, ಇಂಡಿಗೋ ವಿಮಾನ ರದ್ದು

