ETV Bharat / bharat

ಪಶ್ಚಿಮ ಏಷ್ಯಾ ದೇಶಗಳಲ್ಲಿ ಭಾರತೀಯರ ನೆರವಿಗೆ ಸಹಾಯವಾಣಿ; ಸಂಪರ್ಕಕ್ಕೆ ವಿಶೇಷ ಕಂಟ್ರೋಲ್​ ರೂಂ ಸ್ಥಾಪನೆ

ಮಧ್ಯ ಪ್ರಾಚ್ಯ ಬಿಕ್ಕಟ್ಟಿನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ಭಾರತ ಸಹಾಯವಾಣಿ ತೆರೆದಿದೆ.

india-sets-up-special-control-room-and-releases-helpline-numbers-for-gulf-region-amid-middle-east-crisis
ಅಬುಧಾಬಿಯಿಂದ ದೆಹಲಿಗೆ ಬಂದಿಳಿದ ಪ್ರಯಾಣಿಕರು (PTI)
author img

By ETV Bharat Karnataka Team

Published : March 4, 2026 at 12:20 PM IST

2 Min Read
Choose ETV Bharat

ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಗಲ್ಫ್​ ದೇಶಗಳಲ್ಲಿ ಯುದ್ಧ ಪರಿಸ್ಥಿತಿಯಿದ್ದು, ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಯುದ್ದಪೀಡಿತ ರಾಷ್ಟಗಳಲ್ಲಿರುವ ಭಾರತೀಯರ ಸುರಕ್ಷತೆಗೆ ಇದೀಗ ವಿಶೇಷ ನಿಯಂತ್ರಣ ಕೊಠಡಿ(ಎಸ್​ಸಿಆರ್​)ಯನ್ನು ವಿವಿಧ ದೇಶಗಳಲ್ಲಿ ಸ್ಥಾಪಿಸಲಾಗಿದ್ದು, ಸಂಪರ್ಕಕ್ಕೆ ಹಲವು ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ, ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ ಈ ಸಹಾಯವಾಣಿಗಳು ಕಾರ್ಯನಿರ್ವಹಿಸಲಿದ್ದು, ಹೆಚ್ಚಿನ ಸುರಕ್ಷತಾ ಸಂಪರ್ಕಕ್ಕೆ ಈ ಕೆಳಗಿನ ಸಹಾಯವಾಣಿಗಳನ್ನು ಸಂಪರ್ಕಿಸುವಂತೆ ತಿಳಿಸಿದೆ. 1800118797 (Toll Free), +91 11 2301 2113, +91 11 2301 4104, and +91 11 2301 7905.

ಇದರ ಜೊತೆಗೆ, ಈ ಪ್ರದೇಶಗಳಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿಗಳ ತುರ್ತು ಸಂಪರ್ಕ ಸಂಖ್ಯೆಗಳನ್ನೂ ಕೂಡ ಇಲಾಖೆ ನೀಡಿದೆ.

  • ಬಹ್ರೈನ್​: +973 39418071
  • ಇರಾನ್​: +98 9128109115 / +98 912810910 / +98 932179359
  • ಇರಾಕ್​: +964 771 651 1185 / +964 770444 4899
  • ಇಸ್ರೇಲ್​: +972 54 7520711 / +972 54 2428378
  • ಜೋರ್ಡಾನ್​: +962 770 422 276
  • ಕುವೈತ್​: +965 65501946
  • ಲೆಬನಾನ್​: +961 76860128
  • ಒಮನ್​: +968 98282270 (WhatsApp) / 80071234
  • ಕತಾರ್​: +974 55647502
  • ರಮಲ್ಲಾ ಮತ್ತು ಪ್ಯಾಲೇಸ್ತೇನ್​: +970 592916418
  • ಸೌದಿ ಅರೇಬಿಯಾ (ರಿಯಾದ್​): +966 11 4884697 / 800 247 1234
  • ಸೌದಿ ಅರೇಬಿಯಾ (ಜೆಡ್ಡಾ): +966 126648660 / +966 12 2614093
  • ಯುನೈಟೆಡ್​ ಅರಬ್​ ಎಮಿರೇಟ್ಸ್​: +971 543090571 (WhatsApp) / 800 46342

ಈ ದೇಶಗಳಲ್ಲಿರುವ ಭಾರತೀಯರು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವಂತೆ ಇಲಾಖೆ ಸಲಹೆ ನೀಡಿದೆ. ಅಲ್ಲದೇ, ರಾಯಭಾರ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆಯೂ ತಿಳಿಸಿದ್ದು, ಹೆಚ್ಚಿನ ಸಲಹೆಗಳಿಗಾಗಿ ಅಧಿಕೃತ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ.

ಇನ್ನು, ಭಾರತೀಯರನ್ನು ಕರೆ ತರಲು ಭಾರತೀಯ ವಿಮಾನಯಾನ ಸಂಸ್ಥೆಗಳು ಹಲವು ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗಿಳಿಸಿವೆ. ಮಂಗಳವಾರ 24 ವಿಮಾನಗಳು ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿವೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿತ್ತು. ಇಂದೂ ಕೂಡ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳನ್ನು ಕರೆತರಲು 58 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.

ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ನೇರವಾಗಿ ತಮ್ಮ ವಿಮಾನ ಹಾರಾಟದ ಕುರಿತು ಮಾಹಿತಿ ಪರಿಶೀಲಿಸಲು ಮತ್ತು ನವೀಕರಣಗಳಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆಯೂ ಸಚಿವಾಲಯ ಸೂಚನೆ ನೀಡಿದೆ.

ಇವುಗಳನ್ನೂ ಓದಿ: