ETV Bharat / bharat

ಮುಂದಿನ ವರ್ಷದಿಂದ ಭಾರತದಲ್ಲಿ ಬುಲೆಟ್ ಟ್ರೈನ್ ಓಡಾಟ: ವಿಶ್ವದೆಲ್ಲೆಡೆ ಅತ್ಯಂತ ವೇಗದ ರೈಲು ವ್ಯವಸ್ಥೆ ಹೇಗಿದೆ? ಒಂದು ನೋಟ

ಅಹಮದಾಬಾದ್‌ನ ಸಬರಮತಿಯಿಂದ ಮುಂಬೈಗೆ ಬುಲೆಟ್ ರೈಲು ಶೀಘ್ರದಲ್ಲೇ ಸಂಚಾರ ಆರಂಭಿಸಲಿದ್ದು, ಈ ನಿಟ್ಟಿನಲ್ಲಿ ಸಿದ್ಧತಾ ಕೆಲಸಗಳು ಭರದಿಂದ ಸಾಗಿವೆ. ದೇಶದ ಕೋಟ್ಯಂತರ ಜನರು ಕುತೂಹಲದಿಂದ ಕಾಯುತ್ತಿದ್ದ ಕ್ಷಣಗಳು ಕೊನೆಗೂ ಸಮೀಪಿಸುತ್ತಿವೆ.

ಬುಲೆಟ್ ಟ್ರೈನ್
ಬುಲೆಟ್ ಟ್ರೈನ್ (IANS)
author img

By ETV Bharat Karnataka Team

Published : January 12, 2026 at 3:33 PM IST

4 Min Read
Choose ETV Bharat

ಭಾರತದಲ್ಲಿ ಬುಲೆಟ್ ರೈಲು ಓಡಾಟ ಯಾವಾಗ? ಎಂಬ ಕೋಟ್ಯಂತರ ಜನರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು, 2027ರ ಆಗಸ್ಟ್ 15ರಿಂದ ಅಹಮದಾಬಾದ್‌ನ ಸಬರಮತಿಯಿಂದ ಮುಂಬೈಗೆ ಬುಲೆಟ್ ರೈಲು ಸಂಚಾರ ಆರಂಭಿಸಲಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳು ಅತ್ಯಂತ ವೇಗವಾಗಿ ಸಾಗುತ್ತಿವೆ. ಚೀನಾ, ಜಪಾನ್ ಮತ್ತು ಸ್ಪೇನ್ ಸೇರಿದಂತೆ ಹಲವು ದೇಶಗಳಲ್ಲಿ ಬುಲೆಟ್ ರೈಲುಗಳು ಈಗಾಗಲೇ ಓಡುತ್ತಿವೆ. ಇದೀಗ ಭಾರತವೂ ಇತಿಹಾಸ ನಿರ್ಮಿಸಲು ದಿನಗಳು ಸಮೀಪಿಸುತ್ತಿವೆ.

ವಿಶ್ವದ ಒಟ್ಟು 22 ದೇಶಗಳು ಹೈ ಸ್ಪೀಡ್ ರೈಲುಗಳನ್ನು ಅಂದರೆ ಬುಲೆಟ್ ಸ್ಪೀಡ್ ರೈಲುಗಳನ್ನು ಓಡಿಸುತ್ತಿವೆ. ಭಾರತದಲ್ಲಿ ರೈಲ್ವೆ ಸಂಚಾರ ವ್ಯವಸ್ಥೆಗಾಗಿ ಮೊದಲ ಪ್ರಸ್ತಾವನೆಯನ್ನು 1832ರಲ್ಲಿ ಮದ್ರಾಸ್‌ನಲ್ಲಿ ಮಾಡಲಾಗಿತ್ತು. ಇದರ ನಂತರ, ಭಾರತೀಯ ರೈಲ್ವೆ ಅಭಿವೃದ್ಧಿಯ ಹೊಸ ಆಯಾಮಗಳನ್ನೇ ಸೃಷ್ಟಿಸುತ್ತಾ ಹೋಯಿತು. ಸಾಮಾನ್ಯ ಪ್ರಯಾಣಿಕ ರೈಲುಗಳಿಂದ ಹಿಡಿದು ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್ ಮತ್ತು ಹೊಸ ಸೇರ್ಪಡೆಯಾಗಿ ಇದೀಗ ವಂದೇ ಭಾರತ ರೈಲುಗಳು ಬಂದಿವೆ. ಇದರ ನಂತರದಲ್ಲಿ ಅತ್ಯಾಧುನಿಕ ಮತ್ತು ಅತಿ ವೇಗದ ಬುಲೆಟ್ ರೈಲುಗಳು ಬರುತ್ತಿವೆ.

ಸೂರತ್‌ನ ಬುಲೆಟ್‌ ಟ್ರೈನ್ ಸ್ಟೇಷನ್‌ಗೆ ಪ್ರಧಾನಿ ಮೋದಿ ಕಳೆದ ವರ್ಷ ಭೇಟಿ ನೀಡಿದ ಕ್ಷಣ
ಸೂರತ್‌ನ ಬುಲೆಟ್‌ ಟ್ರೈನ್ ಸ್ಟೇಷನ್‌ಗೆ ಪ್ರಧಾನಿ ಮೋದಿ ಕಳೆದ ವರ್ಷ ಭೇಟಿ ನೀಡಿದ ಕ್ಷಣ (IANS)

ಬುಲೆಟ್ ರೈಲು ವಿಶ್ವದ ಎಷ್ಟು ದೇಶಗಳಲ್ಲಿ ಓಡುತ್ತಿವೆ?, ಈ ರೈಲು ಮೊದಲ ಬಾರಿಗೆ ಯಾವ ದೇಶದಲ್ಲಿ ಸಂಚಾರ ಆರಂಭಿಸಿತು?, ಈಗ ಯಾವ ದೇಶದಲ್ಲಿ ಅತ್ಯಂತ ವೇಗದ ಬುಲೆಟ್ ರೈಲು ಓಡುತ್ತಿದೆ? ಎಂಬುದನ್ನು ನೋಡೋಣ.

ವಿಶ್ವ ಜನಸಂಖ್ಯಾ ವಿಮರ್ಶೆ ವರದಿ ಪ್ರಕಾರ 2025ರವರೆಗೆ ಅಂದರೆ ಕಳೆದ ವರ್ಷದವರೆಗೆ, ವಿಶ್ವದ 22 ದೇಶಗಳಲ್ಲಿ ಹೈಸ್ಪೀಡ್ ರೈಲುಗಳು (ಬುಲೆಟ್ ರೀತಿಯದ್ದು) ಓಡುತ್ತಿವೆ. ಜರ್ಮನಿ, ಫ್ರಾನ್ಸ್, ಜಪಾನ್, ಇಟಲಿ, ಯುರೋಪ್, ಸ್ಪೇನ್ ಮತ್ತು ಚೀನಾದಲ್ಲಿ ಬುಲೆಟ್ ರೈಲುಗಳಿವೆ. ಇವುಗಳಲ್ಲಿ ಜರ್ಮನಿ, ಫ್ರಾನ್ಸ್, ಜಪಾನ್, ಸ್ಪೇನ್ ಮತ್ತು ಚೀನಾ ವಿಶ್ವದ ಅತಿ ಉದ್ದದ ಹೈಸ್ಪೀಡ್ ರೈಲ್ವೆ ಜಾಲ ಅಂದರೆ Network‌ ಹೊಂದಿವೆ.

ವಿಶ್ವದ ಹಲವು ದೇಶಗಳ ಬುಲೆಟ್ ರೈಲಿನ ವಿಶೇಷತೆಗಳೇನು? ಮತ್ತು ಅವುಗಳ ನೆಟ್‌ವರ್ಕ್‌ ಹೇಗಿದೆ ಗೊತ್ತೇ?. ಚೀನಾ ವಿಶ್ವದ ಅತಿದೊಡ್ಡ ರೈಲು ಜಾಲ ಹೊಂದಿದೆ. ಈ ದೇಶದಲ್ಲಿ ಚಲಿಸುವ ಬುಲೆಟ್ ರೈಲುಗಳು ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಹೋಗುತ್ತವೆ. ಇವು ಜನರನ್ನು ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಸಮಯದಲ್ಲಿ ತಮ್ಮ ಗಮ್ಯಸ್ಥಾನಕ್ಕೆ ಸಾಗಿಸುತ್ತವೆ. ಲಕ್ಷಾಂತರ ಪ್ರಯಾಣಿಕರು ಈ ರೈಲುಗಳಲ್ಲಿ ಪ್ರತಿದಿನ ಪ್ರಯಾಣಿಸುತ್ತಾರೆ. ಚೀನಾ ತನ್ನ ಅತ್ಯಾಧುನಿಕ ತಂತ್ರಜ್ಞಾನವನ್ನು ಸುಧಾರಿಸುತ್ತಲೇ ಬರುತ್ತಿದೆ. ಅದಕ್ಕಾಗಿಯೇ ಇಲ್ಲಿನ ಬುಲೆಟ್ ರೈಲುಗಳು ಇಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಭಿವೃದ್ಧಿಯೊಂದಿಗೆ ಜಾಗತಿಕ ಮೂಲಸೌಕರ್ಯದ ಮೇಲೆ ಪರಿಣಾಮ ಬೀರಿವೆ.

ಸ್ಪೇನ್‌ನಲ್ಲಿ ಆಕರ್ಷಕ ಬುಲೆಟ್ ರೈಲುಗಳಿವೆ. ಇದರ ವೇಗ ಗಂಟೆಗೆ 300 ಕಿ.ಮೀ. ಈ ರೈಲುಗಳು 3,993 ಕಿ.ಮೀ. ವಿಸ್ತೀರ್ಣವನ್ನು ಒಳಗೊಂಡಿವೆ. ಈ ದೇಶದ ರೈಲು ಜಾಲ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ಜಾಲಗಳಲ್ಲಿ ಒಂದು. ಅಂದರೆ, ವಿಶ್ವದ ಅತಿ ಉದ್ದದ ಹೈಸ್ಪೀಡ್ ರೈಲು ಜಾಲವನ್ನು ಹೊಂದಿರುವ ದೇಶಗಳಲ್ಲಿ ಸ್ಪೇನ್ ಕೂಡ ಇದೆ. ಇಲ್ಲಿನ ಬುಲೆಟ್ ರೈಲು ದೇಶದ ಎಲ್ಲ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತವೆ.

ನಿಮಗೆ ಗೊತ್ತಿರುವಂತೆ ಮೊದಲ ಬುಲೆಟ್ ರೈಲು ಜಪಾನ್‌ನಲ್ಲಿ ಸಂಚಾರ ಆರಂಭಿಸಿತ್ತು. ಜಪಾನ್‌ನಲ್ಲಿ ಗಂಟೆಗೆ 320 ಕಿ.ಮೀ ವೇಗದಲ್ಲಿ ಬುಲೆಟ್ ರೈಲುಗಳು ಓಡುತ್ತವೆ. ಈ ರೈಲುಗಳ ವ್ಯಾಪ್ತಿ 3147 ಕಿ.ಮೀ. ಅಂದರೆ ಪ್ರತಿದಿನ ಇಷ್ಟು ಕಿಲೋಮೀಟರ್‌ಗಳವರೆಗೆ ಜನರ ಪ್ರಯಾಣಕ್ಕೆ ನೆರವಾಗುತ್ತಿವೆ. ಮೊದಲು ಟೋಕಿಯೊ ಮತ್ತು ಒಸಾಕಾ ನಡುವೆ 1964ರಲ್ಲಿ ಬುಲೆಟ್ ರೈಲು ಶುರುವಾಗಿತ್ತು. ಇದರೊಂದಿಗೆ ಜಪಾನ್ ಬುಲೆಟ್ ರೈಲು ಓಡಿಸಿದ ವಿಶ್ವದ ಮೊದಲ ದೇಶವೆಂಬ ಖ್ಯಾತಿ ಗಳಿಸಿತು. ಕಳೆದ 50 ವರ್ಷಗಳಿಂದ ದೇಶದಲ್ಲಿ ತಂತ್ರಜ್ಞಾನ ಗಣನೀಯವಾಗಿ ಸುಧಾರಿಸುತ್ತಿದೆ. ಇದು ರೈಲುಗಳ ಮೇಲೂ ಪರಿಣಾಮ ಬೀರಿದೆ. ಗಂಟೆಗೆ 210 ಕಿ.ಮೀ (ಗಂಟೆಗೆ 130 ಮೈಲುಗಳು) ವೇಗದಲ್ಲಿ ಓಡುತ್ತಿದ್ದ ರೈಲುಗಳು ನಂತರ ಗಂಟೆಗೆ 320 ಕಿ.ಮೀ (200 ಮೈಲುಗಳು) ವೇಗದಲ್ಲಿ ಇದೇ ಕಾರಣ. ಪ್ರಸ್ತುತ ಪ್ರತಿದಿನ ಸುಮಾರು 10 ಲಕ್ಷ ಪ್ರಯಾಣಿಕರು ಬುಲೆಟ್ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ಫ್ರಾನ್ಸ್‌ನಲ್ಲಿ ಪ್ರತಿ ವರ್ಷ 1220 ಲಕ್ಷ ಜನರು ಬುಲೆಟ್‌ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಇಲ್ಲಿ ಈ ರೈಲುಗಳು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಇವುಗಳ ವ್ಯಾಪ್ತಿ 2760 ಕಿ.ಮೀ. ಇಲ್ಲಿನ ಹೈಸ್ಪೀಡ್ ರೈಲು ಜಾಲ ಅತ್ಯಂತ ಮುಂದುವರಿದ ವ್ಯವಸ್ಥೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿನ ಮಿಂಚಿನ ವೇಗದ ಬುಲೆಟ್ ರೈಲುಗಳು ಪ್ರತಿ ವರ್ಷ 1220 ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತವೆ. ಈ ರೈಲುಗಳು ಪ್ರಮುಖ ನಗರಗಳನ್ನು ಒಳಗೊಂಡಿವೆ. ಫ್ರಾನ್ಸ್ ಈ ವರ್ಷ ಅಲ್ಟ್ರಾಫಾಸ್ಟ್ ಎಂಬ ಹೊಸ ಆಧುನಿಕ ಅತಿ ವೇಗದ ರೈಲುಗಳನ್ನು ಅನಾವರಣಗೊಳಿಸುವ ಸಿದ್ಧತೆಯಲ್ಲಿದೆ.

ಜರ್ಮನಿಯಲ್ಲಿ 1991ರಿಂದ ಬುಲೆಟ್ ರೈಲುಗಳು ಚಾಲನೆಯಲ್ಲಿವೆ. ಇಲ್ಲಿ ಬುಲೆಟ್ ರೈಲುಗಳು ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸುತ್ತಿವೆ. ಇದು 1631 ಕಿ.ಮೀ ವಿಸ್ತೀರ್ಣವನ್ನು ಒಳಗೊಂಡಿದೆ. ಇದನ್ನು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ICE) ಎಂದು ಕರೆಯುತ್ತಾರೆ. 1991ರಲ್ಲಿ ಈ ಸಂಚಾರ ವ್ಯವಸ್ಥೆ ಪ್ರಾರಂಭವಾಗಿದ್ದು, ದೇಶದ ಅತಿದೊಡ್ಡ ಹೈಸ್ಪೀಡ್ ರೈಲು ಸೇವೆಯಾಗಿದೆ. ಇದನ್ನು ಡಾಯ್ಚ ಬಾನ್ (DB) ನಿರ್ವಹಿಸುತ್ತದೆ.

ಅಹಮದಾಬಾದ್‌ ಮುಂಬೈ ಬುಲೆಟ್ ರೈಲಿಗೆ ಕೊರೆದ ಸುರಂಗ
ಅಹಮದಾಬಾದ್‌ ಮುಂಬೈ ಬುಲೆಟ್ ರೈಲಿಗೆ ಕೊರೆದ ಸುರಂಗ (IANS)

ಈ ರೈಲುಗಳ ಗರಿಷ್ಠ ವೇಗ ಗಂಟೆಗೆ 330 ಕಿ.ಮೀ (ಸುಮಾರು 205 mph). ರೈಲುಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಿಗೆ ಜನರಿಗೆ ವೇಗದ ಮತ್ತು ವಿಶ್ವಾಸಾರ್ಹ ಆಯ್ಕೆಯನ್ನು ಒದಗಿಸುತ್ತವೆ. ದೂರದ ಪ್ರಯಾಣಕ್ಕಾಗಿ ಜನರು ಇವುಗಳಲ್ಲಿ ಪ್ರಯಾಣಿಸುತ್ತಾರೆ. ರೈಲುಗಳ ಸೀಟುಗಳು ದೊಡ್ಡದಾಗಿರುತ್ತವೆ. ವೈ-ಫೈ ಜೊತೆಗೆ ಪ್ರಯಾಣಿಕರು ತಮ್ಮ ಮೊಬೈಲ್, ಲ್ಯಾಪ್‌ಟಾಪ್ ಇತ್ಯಾದಿಗಳನ್ನು ಚಾರ್ಜ್ ಮಾಡುವ ಸೌಲಭ್ಯವಿದೆ. ಆಹಾರ ಮತ್ತು ಇತರ ಆಧುನಿಕ ಸೌಲಭ್ಯಗಳನ್ನೂ ಒದಗಿಸಲಾಗಿದೆ.

ಟರ್ಕಿಶ್ ಬುಲೆಟ್ ರೈಲುಗಳನ್ನು YHT ಎಂದು ಕರೆಯಲಾಗುತ್ತದೆ. ಇಲ್ಲಿನ ಬುಲೆಟ್ ರೈಲು ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಅವುಗಳ ವ್ಯಾಪ್ತಿ 1232 ಕಿ.ಮೀ. ಇಲ್ಲಿನ ಹೈ ಸ್ಪೀಡ್ ರೈಲುಗಳನ್ನು ಯುಕ್ಸೆಕ್ ಹೈ ಸ್ಪೀಡ್ ರೈಲು ಅಥವಾ YHT ಎಂದು ಕರೆಯುವರು. ಈ ರೈಲುಗಳು ಅಂಕಾರಾ-ಎಸ್ಕಿಸೆಹಿರ್-ಇಸ್ತಾನ್‌ಬುಲ್, ಅಂಕಾರಾ-ಕೊನ್ಯಾ ಮತ್ತು ಇಸ್ತಾನ್‌ಬುಲ್-ಎಸ್ಕಿಸೆಹಿರ್-ಕೊನ್ಯಾ ಮಾರ್ಗದ ಜೊತೆಗೆ ಇತರ ಮಾರ್ಗಗಳಲ್ಲಿ ಚಲಿಸುತ್ತವೆ. ಎಕಾನಮಿ ಮತ್ತು ಬಿಸ್ನೆಸ್ ಎಂಬ ಎರಡು ವಿಭಾಗಗಳ ಸೀಟುಗಳನ್ನು ಹೊಂದಿವೆ.

ಫಿನ್‌ಲ್ಯಾಂಡ್‌ನ ಬುಲೆಟ್ ರೈಲಿನಲ್ಲಿ ಅನೇಕ ಸೌಲಭ್ಯಗಳಿವೆ. ಇಲ್ಲಿನ ಬುಲೆಟ್ ರೈಲುಗಳ ವೇಗ ಗಂಟೆಗೆ 220 ಕಿ.ಮೀ. ವ್ಯಾಪ್ತಿ 1120 ಕಿ.ಮೀ. ಫಿನ್‌ಲ್ಯಾಂಡ್‌ನ ಬುಲೆಟ್ ರೈಲನ್ನು ಪೆಂಡೊಲಿನೊ ಎನ್ನುವರು. ಈ ರೈಲನ್ನು ಇಟಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರ ನೋಟ ಬಹ ಆಕರ್ಷವಾಗಿದೆ. ಪೆಂಡೊಲಿನೊ ರೈಲುಗಳು ಸಿಂಗಲ್ ಡೆಕ್ಕರ್. ಅಂದರೆ, ಪ್ರಯಾಣಿಕರು ಕುಳಿತುಕೊಳ್ಳಲು ಒಂದೇ ಒಂದು ಮಹಡಿ ಇದೆ.

ಇದನ್ನೂ ಓದಿ: ಬೆಂಗಳೂರು - ಕರ್ನೂಲ್​ ನಡುವೆ ಸಂಚರಿಸಲಿದೆ ಬುಲೆಟ್​ ರೈಲು; ಇಲ್ಲಿದೆ ಮಾಹಿತಿ