ETV Bharat / bharat

ಸದರ್​ ಸಮ್ಮೇಳನಕ್ಕೆ ಹರಿಯಾಣದ ಮುರ್ರಾ ಕೋಣಗಳ ಆಗಮನ; ಒಂದು ಕೋಣದ ತೂಕ ಬರೋಬ್ಬರಿ 20 ಕ್ವಿಂಟಾಲ್!

ತೆಲಂಗಾಣದಲ್ಲಿ ಸದರ್ ಸಮ್ಮೇಳನವು ಎರಡು ದಿನಗಳ ಕಾಲ ನಡೆಯಲಿದ್ದು, ಈ ಬಾರಿ ಪ್ರಸಿದ್ಧವಾದ ಮುರ್ರಾ ತಳಿಯ ಕೋಣಗಳನ್ನು ಕರೆತರಲಾಗಿದೆ. ಅವುಗಳ ಬೃಹತ್ ಗಾತ್ರ ಮತ್ತು ಶಕ್ತಿಯನ್ನು ನೋಡಲು ಜನರು ಮುಗಿಬೀಳುವ ಸಾಧ್ಯತೆಗಳಿವೆ.

ಸದರ್​ ಸಮ್ಮೇಳನ  MURRAH BUCKS  TELANGANA SADAR SAMMELAN  ಹರಿಯಾಣದ ಮುರ್ರಾ ಕೋಣ
ಸದರ್​ ಸಮ್ಮೇಳನಕ್ಕೆ ಸಿದ್ಧವಾದ ಹೈದರಾಬಾದ್ (EENADU)
author img

By ETV Bharat Karnataka Team

Published : October 18, 2025 at 3:32 PM IST

2 Min Read
Choose ETV Bharat

ಹೈದರಾಬಾದ್, ತೆಲಂಗಾಣ: ರಾಜ್ಯದ ಬಹುನಿರೀಕ್ಷಿತ ಸದರ್ ಸಮ್ಮೇಳನವನ್ನು ದೀಪಾವಳಿಯ ಮರುದಿನ ನಡೆಸಲು ಹೈದರಾಬಾದ್ ನಗರಿ ಸಂಪೂರ್ಣ ಸಿದ್ಧವಾಗಿದೆ. ಈ ದಿನದ ರಂಗನ್ನು ಮತ್ತಷ್ಟು ಹೆಚ್ಚಿಸಲು ಸಂಘಟಕರು ಹರಿಯಾಣದಿಂದ ಅತ್ಯಂತ ಪ್ರತಿಷ್ಠಿತ ಮುರ್ರಾ ತಳಿಯ ಕೋಣಗಳನ್ನು ಕರೆತಂದಿದ್ದಾರೆ. ಅದರಲ್ಲಿ ರಾಷ್ಟ್ರಮಟ್ಟದ ಪ್ರದರ್ಶನಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ಪ್ರಮುಖ ಕೋಣಗಳಲ್ಲಿ ರೋಲೆಕ್ಸ್, ಕೊಹಿನೂರ್, ಘೋಲು-2, ಬಾಡಷಾ ಮತ್ತು ಬಜರಂಗಿ ಸೇರಿವೆ.

ಇದೇ ಮುರ್ರಾ ತಳಿಯ ಕೋಣಗಳು ಹರಿಯಾಣದ ರೋಹ್ಟಕ್​​ ಮತ್ತು ಹಿಸ್ಸಾರ್‌ನಿಂದ ಬಂದಿವೆ. ಪ್ರತಿಯೊಂದು ಕೋಣ ಸುಮಾರು 12 ಅಡಿ ಉದ್ದ ಮತ್ತು ಸುಮಾರು 20 ಕ್ವಿಂಟಾಲ್​ ತೂಕ ಹೊಂದಿವೆ. ಈ ಕೋಣಗಳನ್ನು ನೋಡುವುದೇ ಒಂದು ಅದ್ಭುತ. ಕೋಣಗಳ ಬೃಹತ್ ಗಾತ್ರ ಮತ್ತು ಶಕ್ತಿಯು ಸದರ್ ಸಮ್ಮೇಳನದ ಸಾಂಪ್ರದಾಯಿಕ ಆಚರಣೆಯ ಹೆಮ್ಮೆ ಮತ್ತು ಸಮೃದ್ಧಿಯ ಸಂಕೇತವಾಗಿದೆ.

ದಿನಕ್ಕೆ 1 ಕೋಣಕ್ಕೆ 20 ಲೀಟರ್​​ ಹಾಲು: ಪ್ರದರ್ಶನಗಳ ಸಮಯದಲ್ಲಿ ಕೋಣಗಳ ಆರೈಕೆಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಲಾಗುತ್ತದೆ. ಹಣ್ಣುಗಳು, ಕಬ್ಬು, ಒಣ ಹಣ್ಣುಗಳು ಮತ್ತು ನಿತ್ಯ 20 ಲೀಟರ್ ಹಾಲು ಅವುಗಳ ಆಹಾರದಲ್ಲಿ ಸೇರಿರುತ್ತದೆ. ಇದು ಅವುಗಳ ಶಕ್ತಿ ಮತ್ತು ಸಾಮರ್ಥ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸರಿಯಾದ ಪೋಷಣೆಯ ಜೊತೆಗೆ, ಅವುಗಳಿಗೆ ನಿತ್ಯ ಎಣ್ಣೆಯಿಂದ ಮಸಾಜ್ ಮಾಡಲಾಗುತ್ತದೆ. ಪ್ರತಿಯೊಂದು ಕೋಣವನ್ನು ದಿನವೂ 5 ಕಿಲೋಮೀಟರ್ ನಡೆಸಲಾಗುತ್ತದೆ. ಇದೆಲ್ಲವು ಅವುಗಳ ದೈಹಿಕ ಸಾಮರ್ಥ್ಯ ಮತ್ತು ಅವುಗಳ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಈ ಅಂಶಗಳು ಪ್ರದರ್ಶನದಲ್ಲಿ ಪ್ರಮುಖ ಮಾನದಂಡವಾಗಿದೆ.

ಅವುಗಳ ಆರೈಕೆಯನ್ನು ನೋಡಿಕೊಳ್ಳುವ ತಜ್ಞರು, ಈ ಕೋಣಗಳ ಸ್ವಭಾವ ಮತ್ತು ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಹಾಗೂ ದೈಹಿಕ ನೋಟಕ್ಕೆ ಮಾತ್ರವಲ್ಲದೇ, ಸ್ಥಿರವಾದ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಸಿಂಗಾರ ಬಹಳ ಮುಖ್ಯ ಎನ್ನುತ್ತಾರೆ. ಈ ಪದ್ಧತಿಗಳು ಕೋಣಗಳು ಶಾಂತವಾಗಿರಲು ಸಹಾಯ ಮಾಡುತ್ತವೆ. ಈ ಬಹುಮಾನಿತ ಮುರ್ರಾ ಕೋಣಗಳ ಸೇರ್ಪಡೆಯು ಸದರ್ ಸಮ್ಮೇಳಕ್ಕೆ ಹೆಚ್ಚಿನ ಉತ್ಸಾಹ ಮತ್ತು ಪ್ರತಿಷ್ಠೆಯನ್ನು ತಂದಿದೆ. ಈ ಸಮ್ಮೇಳನ ರಾಜ್ಯಾದ್ಯಂತದ ಜಾನುವಾರು ತಳಿಗಾರರು, ರೈತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ರೋಲೆಕ್ಸ್, ಕೊಹಿನೂರ್ ಮತ್ತು ಇತರ ಬಹುಮಾನ ವಿಜೇತ ಕೋಣಗಳು ಹೆಚ್ಚಿನ ಜನಸಮೂಹವನ್ನು ಸೆಳೆಯುವ ನಿರೀಕ್ಷೆಯಿದೆ. ಇದು ಭಾರತದ ಶ್ರೀಮಂತ ಜಾನುವಾರು ಪರಂಪರೆ ಮತ್ತು ತೆಲಂಗಾಣದಲ್ಲಿ ಸಾಂಪ್ರದಾಯಿಕ ಜಾನುವಾರು ಪ್ರದರ್ಶನಗಳ ಶಾಶ್ವತ ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಮೊದಲ ಮಹಿಳಾ ಉರಗ ರಕ್ಷಕಿ: ದೇವಯಾನಿಗೆ ಬಾಲ್ಯದಿಂದಲೂ ಇತ್ತು ಹಾವಿನ ಬಗ್ಗೆ ಆಕರ್ಷಣೆ!