ETV Bharat / bharat

ನೇಪಾಳ ಪ್ರವಾಹದ ಬೆನ್ನಲ್ಲೇ ಗಡಿ ರಾಜ್ಯ ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್​: ನದಿಗಳ ಮೇಲೆ ನಿಗಾ, ರಕ್ಷಣಾ ತಂಡಗಳು ಸನ್ನದ್ಧ

ನೇಪಾಳದೊಂದಿಗೆ ತನ್ನ ಉತ್ತರದ ಗಡಿಯನ್ನು ಹಂಚಿಕೊಳ್ಳುವ ಯುಪಿಯಲ್ಲಿ ಆಡಳಿತವು ನದಿಗಳ ಮೇಲೆ ಕಣ್ಣಿಟ್ಟಿದ್ದು, ಹತ್ತಿರದ ಹಳ್ಳಿಗಳ ಮೇಲೆ ನಿಗಾ ವಹಿಸಿದೆ. ಇದರ ಜೊತೆ ಜೊತೆಗೆ ಪರಿಹಾರ ಮತ್ತು ರಕ್ಷಣಾ ತಂಡಗಳನ್ನು ಸಿದ್ಧವಾಗಿರಿಸಿದೆ.

UTTAR PRADESH  ನೇಪಾಳ ಪ್ರವಾಹ  NEPAL FLOOD EFFECT  FLOODS
ಉತ್ತರ ಪ್ರದೇಶದಲ್ಲಿ ಪ್ರವಾಹ ಮತ್ತು ಮಳೆಯಿಂದ ಜನ-ಜೀವನ ಅಸ್ತವ್ಯಸ್ತ. (ETV Bharat)
author img

By PTI

Published : August 28, 2026 at 7:31 AM IST

1 Min Read
Choose ETV Bharat

ಲಖನೌ, ಉತ್ತರ ಪ್ರದೇಶ: ನೇಪಾಳದಲ್ಲಿನ ಭೀಕರ ಪ್ರವಾಹದಲ್ಲಿ 177ಕ್ಕೂ ಅಧಿಕ ಜನರು ಸಾವನ್ನಪ್ಪಿ, ಸಾವಿರಾರು ಜನರು ಕಾಣೆಯಾದ ಬಳಿಕ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮತ್ತು ಕುಷಿನಗರ ಜಿಲ್ಲೆಗಳಲ್ಲಿ ಆಡಳಿತವು ಹೈ ಅಲರ್ಟ್ ಘೋಷಿಸಿದೆ. ಹಾಗೇ ನೇಪಾಳದ ನದಿಗಳ ಕೆಳಗಿರುವ ಗಂಡಕ್ ಮತ್ತು ಇತರ ಜಲಮೂಲಗಳ ಮೇಲೆ ನಿಗಾ ವಹಿಸುವುದನ್ನು ಚುರುಕುಗೊಳಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನವನ್ನು ಅನುಸರಿಸಿ ಯುಪಿ ಸರ್ಕಾರವು 32 ಸದಸ್ಯರ ಎಸ್‌ಡಿಆರ್‌ಎಫ್ ತುಕಡಿ ಮತ್ತು 22 ಪಿಎಸಿ ಸಿಬ್ಬಂದಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನೇಪಾಳದಲ್ಲಿ ನಿಯೋಜಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ನಾಲ್ಕು ರಬ್ಬರ್ ಬೋಟ್​​ಗಳು ಲಭ್ಯವಿದ್ದು, ಹೆಚ್ಚುವರಿ ಎಸ್‌ಡಿಆರ್‌ಎಫ್ ತುಕಡಿಯೊಂದಿಗೆ ಒಂದು ಅಲ್ಯೂಮಿನಿಯಂ ದೋಣಿಯನ್ನು ಸಹ ಕಳುಹಿಸಲಾಗುತ್ತಿದೆ. ಪರಿಹಾರ ಆಯುಕ್ತರ ನಿಯಂತ್ರಣ ಕೊಠಡಿ, ಗಡಿ ಜಿಲ್ಲೆಗಳ ಮೇಲ್ವಿಚಾರಣೆ ನಡೆಸುತ್ತಿದ್ದು, ಸಿಲುಕಿಕೊಂಡಿರುವ ಯುಪಿ ನಿವಾಸಿಗಳ ಕುಟುಂಬಗಳು 1070 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಅದು ಹೇಳಿಕೆ ಹೇಳಿದೆ.

ಮಹಾರಾಜ್‌ಗಂಜ್‌ನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರವ್ ಸಿಂಗ್ ಸೊಗರ್ವಾಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಶಕ್ತಿ ಮೋಹನ್ ಅವಸ್ತಿ, ನಾರಾಯಣಿ ನದಿ ಮತ್ತು ಪಕ್ಕದ ಪ್ರದೇಶಗಳನ್ನು ಪರಿಶೀಲಿಸಿದರು.

ರಕ್ಷಣಾ ವ್ಯವಸ್ಥೆಗಳು ಸರಿ ಇವೆಯಾ ಎಂದು ತಿಳಿಯಲು ಅವರು ಟೈಲ್ ಫಾಲ್ ಬಳಿ ಎಸ್‌ಡಿಆರ್‌ಎಫ್ ದೋಣಿಯನ್ನು ಹತ್ತಿ ಪರಿಶೀಲಿಸಿದರು. ನದಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸಿದ್ಧರಾಗಿರಲು ಸೊಗರ್ವಾಲ್ ಕಂದಾಯ, ಪೊಲೀಸ್, ಎಸ್‌ಎಸ್‌ಬಿ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಹಲವು ನಿರ್ದೇಶನಗಳನ್ನು ನೀಡಿದರು. ನದಿ ಮತ್ತು ತಗ್ಗು ಪ್ರದೇಶಗಳಿಂದ ದೂರವಿರಲು ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಿದರು.

ನೆರೆಯ ಕುಶಿನಗರದಲ್ಲಿ ಸ್ಥಳೀಯವಾಗಿ ನಾರಾಯಣಿ ಎಂದು ಕರೆಯಲ್ಪಡುವ ಗಂಡಕ್ ನದಿಯ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಆಡಳಿತವು ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಜಿಲ್ಲಾಧಿಕಾರಿ ಮಹೇಂದ್ರ ಸಿಂಗ್ ತನ್ವರ್, ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಕುಮಾರ್ ಅವರೊಂದಿಗೆ, ನದಿ ತೀರದ ಹಳ್ಳಿಗಳು ಮತ್ತು ವಾಲ್ಮೀಕಿನಗರ ಬ್ಯಾರೇಜ್​ನ್ನು ಸಹ ಪರಿಶೀಲಿಸಿದರು. ಯಾವುದೇ ಪರಿಸ್ಥಿತಿ ಎದುರಿಸಲು ನಿವಾಸಿಗಳು ಸಿದ್ದವಾಗಬೇಕು ಹಾಗೂ ಜಾಗರೂಕರಾಗಿರಬೇಕು ಮತ್ತು ನದಿ ಮತ್ತು ತಗ್ಗು ಪ್ರದೇಶಗಳಿಂದ ದೂರ ಇರುವಂತೆ ಸೂಚನೆಯ ಮನವಿ ಮಾಡಿದರು.

ಇದನ್ನೂ ಓದಿ: ನೇಪಾಳ ಪ್ರವಾಹ: ಒಂದೇ ನಗರದಲ್ಲಿ 100ಕ್ಕೂ ಹೆಚ್ಚು ಜನ ನಾಪತ್ತೆ; ಪತ್ನಿ, ಮಗನಿಗಾಗಿ ಹೋಟೆಲ್ ಮಾಲೀಕನ ರೋದನ