ಕಾಶ್ಮೀರ: ಪ್ರಸಿದ್ಧ ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿ -7 ಡಿಗ್ರಿ ಸೆಲ್ಸಿಯಸ್ ತಾಪಮಾನ!
ಶ್ರೀನಗರದಲ್ಲಿ ಕನಿಷ್ಠ ತಾಪಮಾನ 0.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಋತುಮಾನದ ಸರಾಸರಿಗಿಂತ ಸುಮಾರು 2.5 ಡಿಗ್ರಿ ಹೆಚ್ಚು ಎಂದು ಹವಾಮಾನ ಇಲಾಖೆ ಹೇಳಿದೆ.


Published : January 2, 2026 at 4:14 PM IST
ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಕಾಶ್ಮೀರದಲ್ಲಿ ಚಳಿಗಾಲದ ತೀವ್ರ ಚಳಿ ಮುಂದುವರೆದಿದೆ. ಗುಲ್ಮಾರ್ಗ್ ಅತ್ಯಂತ ಶೀತಲ ಸ್ಥಳವಾಗಿದೆ. ವಿಶ್ವಪ್ರಸಿದ್ಧ ಸ್ಕೀ ರೆಸಾರ್ಟ್‌ನಲ್ಲಿ ತಾಪಮಾನ -7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಶ್ರೀನಗರ ಕೇಂದ್ರ ತಿಳಿಸಿದೆ.
ಕೆಲವು ಪ್ರದೇಶಗಳಲ್ಲಿ ರಾತ್ರಿ ತಾಪಮಾನ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಿದ್ದರೂ ಸಹ ದೀರ್ಘಕಾಲದ ಚಳಿ ಮುಂದುವರೆದಿದೆ. ಹೆಚ್ಚಿನ ಆರ್ದ್ರತೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಬೆಳಗಿನ ಸಮಯದಲ್ಲಿ ಚಳಿ ಹೆಚ್ಚಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
A fresh spell of almost 6-10 inches of snow received over Gurez & Tulail valley of Bandipora dist since yesterday evening.
— Meteorological Centre Srinagar (@metsrinagar) December 31, 2025
Video credit: Bashir Ahmad Tulaili. https://t.co/Hm8PUMuiqM pic.twitter.com/NAHBemx3ZV
ಶ್ರೀನಗರದಲ್ಲಿ ಕನಿಷ್ಠ ತಾಪಮಾನ 0.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಋತುಮಾನದ ಸರಾಸರಿಗಿಂತ ಸುಮಾರು 2.5 ಡಿಗ್ರಿ ಹೆಚ್ಚಾಗಿದೆ. ಗರಿಷ್ಠ ತಾಪಮಾನ 9.4 ಡಿಗ್ರಿ ಸೆಲ್ಸಿಯಸ್‌ಗೆ ಏರಿದ್ದು, ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಆದರೆ, ನಿವಾಸಿಗಳು ಬೆಳಗಿನ ನಿರಂತರ ಚಳಿ ಮತ್ತು ನೆರಳಿನ ಪ್ರದೇಶಗಳಲ್ಲಿ ಹಿಮಪಾತವನ್ನು ವರದಿ ಮಾಡಿದ್ದಾರೆ.
ಕಣಿವೆಯ ಇತರ ಹವಾಮಾನ ಕೇಂದ್ರಗಳಲ್ಲಿ ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರವಾದ ಪಹಲ್ಗಾಮ್‌ನಲ್ಲಿ ಕನಿಷ್ಠ -6.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಾಶ್ಮೀರದ ಪ್ರಮುಖ ಹೆಬ್ಬಾಗಿಲು ಪಟ್ಟಣವಾದ ಖಾಜಿಗುಂಡ್‌ನಲ್ಲಿ -1.2 ಡಿಗ್ರಿ ತಾಪಮಾನವಿದ್ದರೆ, ಉತ್ತರ ಕಾಶ್ಮೀರದ ಕುಪ್ವಾರಾದಲ್ಲಿ 0.8 ಡಿಗ್ರಿ ತಾಪಮಾನ ದಾಖಲಾಗಿದೆ. ದಕ್ಷಿಣ ಕಾಶ್ಮೀರದ ಕೊಕರ್ನಾಗ್‌ನಲ್ಲಿ ಕನಿಷ್ಠ ಮೈನಸ್ 0.5 ಡಿಗ್ರಿ ತಾಪಮಾನವಿದೆ.
ಜಮ್ಮು ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಶೀತ ವಾತಾವರಣವಿತ್ತು. ಭದೇರ್ವಾ ಎಂಬಲ್ಲಿ ಕನಿಷ್ಠ ತಾಪಮಾನ -2.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬಟೋಟ್ 2.8 ಡಿಗ್ರಿ ಸೆಲ್ಸಿಯಸ್‌ನಲ್ಲಿತ್ತು. ಜಮ್ಮು ನಗರದಲ್ಲಿ ಕನಿಷ್ಠ 6 ಡಿಗ್ರಿ ಸೆಲ್ಸಿಯಸ್ ಮತ್ತು ಮಾತಾ ವೈಷ್ಣೋ ದೇವಿ ದೇವಾಲಯದ ಮೂಲ ಪಟ್ಟಣ ಕತ್ರಾದಲ್ಲಿ 6.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಲ್ಮಾರ್ಗ್‌ನಲ್ಲಿ ಸುಮಾರು 5 ಮಿಲಿಮೀಟರ್ ಮಳೆ ಅಥವಾ ಹಿಮಪಾತವಾಗಿದೆ. ಆದರೆ ಶ್ರೀನಗರ, ಬನಿಹಾಲ್, ಖಾಜಿಗುಂಡ್, ಕುಪ್ವಾರಾ ಮತ್ತು ಇತರ ಹಲವು ಕೇಂದ್ರಗಳಿಂದ ಸಣ್ಣ ಪ್ರಮಾಣ ಮಳೆಯಾದ ವರದಿಯಾಗಿದೆ.
𝙒𝙚𝙖𝙩𝙝𝙚𝙧 𝙐𝙥𝙙𝙖𝙩𝙚 𝙅&𝙆
— Meteorological Centre Srinagar (@metsrinagar) January 1, 2026
Past 24hrs weather:Light to moderate snow over higher reaches & light rain over many places of JMU Div.
●1 Jan:Generally cloudy with light rain/Snow at scattered places.
●Overall no major Western disturbances till 20 Jan except few feeble WDs. pic.twitter.com/kqpOJKSX4p
ಜನವರಿ 20ರವರೆಗೆ ಜಮ್ಮು ಮತ್ತು ಕಾಶ್ಮೀರದ ಮೇಲೆ ಯಾವುದೇ ಪ್ರಮುಖ ಪಾಶ್ಚಿಮಾತ್ಯ ಅಡಚಣೆಗಳು ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಈ ಅವಧಿಯಲ್ಲಿ ಕೆಲವು ದುರ್ಬಲ ಪಾಶ್ಚಿಮಾತ್ಯ ಅಡಚಣೆಗಳು ಈ ಪ್ರದೇಶದ ಮೇಲೆ ಹಾದುಹೋಗಬಹುದು. ಒಟ್ಟಾರೆ ಹವಾಮಾನ ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ. ಮುಖ್ಯವಾಗಿ, ಎತ್ತರದ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಮತ್ತು ಪ್ರತ್ಯೇಕವಾದ ಮಳೆ ಅಥವಾ ಹಿಮಪಾತವಾಗಬಹುದು ಇಲಾಖೆ ಹೇಳಿದೆ.
ಚಳಿಗಾಲದ ಅವಧಿಯಲ್ಲಿ ಮಳೆಯ ಕೊರತೆ ಉಂಟಾಗುವುದರಿಂದ ಆತಂಕ ಹೆಚ್ಚಿದೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಲ್ಲಿಯವರೆಗೆ ಶೇ.39ರಷ್ಟು ಮಳೆ ಕೊರತೆ ಕಂಡುಬಂದಿದೆ.
ಇವುಗಳನ್ನೂ ಓದಿ:

