PMGKAY ಅಡಿ ಅಕ್ಕಿ ಸಾರವರ್ಧಿತೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಕೇಂದ್ರ
ವಿವಿಧ ಕೃಷಿ - ಹವಾಮಾನ ಶೇಖರಣಾ ಪರಿಸ್ಥಿತಿಗಳಲ್ಲಿ ಬಲವರ್ದಿತ ಅಕ್ಕಿ ಮತ್ತು ಅದರ ಸ್ವಯಂ ಜೀವಿತಾವಧಿಯನ್ನು ನಿರ್ಣಯಿಸುವ IIT ಖರಗ್‌ಪುರದ ಅಧ್ಯಯನವನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


Published : February 28, 2026 at 9:07 AM IST
ನವದೆಹಲಿ: ದೀರ್ಘಾವಧಿಯ ಶೇಖರಣಾ ವ್ಯವಸ್ಥೆಯಲ್ಲಿ ಅಕ್ಕಿಯಲ್ಲಿನ ಪೋಷಕಾಂಶಗಳ ನಷ್ಟದ ಬಗೆಗಿನ ಕಳವಳದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಸಂಬಂಧಿತ ಕಲ್ಯಾಣ ಯೋಜನೆಗಳ ಅಡಿ ಸರಬರಾಜು ಮಾಡಲಾದ ಅಕ್ಕಿಯ ಸಾರವರ್ಧಿತೀಕರಣವನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ದೇಶದ ವೈವಿಧ್ಯಮಯ ಕೃಷಿ - ಹವಾಮಾನ ವಲಯಗಳಲ್ಲಿ ನಿಜವಾದ ಶೇಖರಣಾ ಪರಿಸ್ಥಿತಿಗಳಲ್ಲಿ (FRK) ಮತ್ತು ಫೋರ್ಟಿಫೈಡ್ ರೈಸ್ (ಬಲವರ್ದಿತ ಅಕ್ಕಿ FR) ನ ಸ್ವಯಂ ಜೀವಿತಾವಧಿಯನ್ನು ನಿರ್ಣಯಿಸಲು IIT ಖರಗ್‌ಪುರಕ್ಕೆ ನಿಯೋಜಿಸಲಾದ ಅಧ್ಯಯನದ ಸಂಶೋಧನೆಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ತೇವಾಂಶ, ಶೇಖರಣಾ ಪರಿಸ್ಥಿತಿ, ತಾಪಮಾನ, ಸಾಪೇಕ್ಷ ಆರ್ದ್ರತೆ ಮತ್ತು ಪ್ಯಾಕೇಜಿಂಗ್ ವಸ್ತುಗಳಂತಹ ಅಂಶಗಳು FRK ಮತ್ತು FRನ ಸ್ಥಿರತೆ ಮತ್ತು ಶೆಲ್ಫ್ ಜೀವಿತಾವಧಿಯನ್ನು ನಿರ್ಣಾಯಕವಾಗಿ ಪ್ರಭಾವಿಸುತ್ತವೆ ಎಂದು ಅಧ್ಯಯನವು ತೀರ್ಮಾನಿಸಿದೆ.
ವರದಿಯ ಪ್ರಕಾರ, FRK ಮತ್ತು FR ದೀರ್ಘಾವಧಿಯ ಸಂಗ್ರಹಣೆ ಮತ್ತು ನಿಯಮಿತ ನಿರ್ವಹಣೆಯ ಸಮಯದಲ್ಲಿ ಸೂಕ್ಷ್ಮ ಪೋಷಕಾಂಶಗಳ ನಷ್ಟ ಮತ್ತು ಸ್ವಯಂ ಜೀವಿತಾವಧಿ ಕಡಿಮೆ ಮಾಡುವ ಸಾಧ್ಯತೆಯಿದೆ. ಇದು ಪರಿಣಾಮಕಾರಿ ಜೀವಿತಾವಧಿಯನ್ನು ನಿರೀಕ್ಷೆಗಿಂತ ಕಡಿಮೆ ಮಾಡುತ್ತದೆ ಮತ್ತು ಉದ್ದೇಶಿತ ಪೌಷ್ಟಿಕಾಂಶದ ಫಲಿತಾಂಶವನ್ನು ಸೀಮಿತಗೊಳಿಸುತ್ತದೆ.
ಸಂಗ್ರಹಣೆ ಪ್ರಮಾಣ ಮತ್ತು ವಾರ್ಷಿಕ ಸಂಗ್ರಹಣೆಯನ್ನು ಪರಿಗಣಿಸಿದರೆ, ಅಕ್ಕಿ ಎರಡರಿಂದ ಮೂರು ವರ್ಷಗಳವರೆಗೆ ಗೋಡೌನ್ನಲ್ಲಿ ಉಳಿಯುತ್ತದೆ. PMGKAY ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿ ವಾರ್ಷಿಕ 372 ಲಕ್ಷ ಮೆಟ್ರಿಕ್ ಟನ್ (LMT) ಹಂಚಿಕೆಗೆ ಪ್ರತಿಯಾಗಿ ಕೇಂದ್ರ ಪೂಲ್‌ನಲ್ಲಿ ಒಟ್ಟು 674 LMT ಲಭ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಖಾರಿಫ್ ಮಾರ್ಕೆಟಿಂಗ್ ಸೀಸನ್ (KMS) 2025- 26 ರಿಂದ ಬಾಕಿ ಇರುವ ಸ್ವೀಕೃತಿಗಳು ಸೇರಿವೆ.
ಈ ಸಂಶೋಧನೆಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚು ದೃಢವಾದ ಮತ್ತು ಪರಿಣಾಮಕಾರಿ ಪೋಷಕಾಂಶ ವಿತರಣಾ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಮತ್ತು ಕಾರ್ಯಗತಗೊಳಿಸುವವರೆಗೆ ಅಕ್ಕಿಯ ಸಾರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಸಚಿವಾಲಯದ ಹೇಳಿಕೆ ತಿಳಿಸಿದೆ.
ಸಾರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರವು ಆಹಾರ ಧಾನ್ಯದ ಅರ್ಹತೆಗಳಲ್ಲಿ ಯಾವುದೇ ಕಡಿತವನ್ನು ಉಂಟುಮಾಡುವುದಿಲ್ಲ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ -PDS , ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ ICDS ಅಥವಾ ಮಧ್ಯಾಹ್ನದ ಊಟ ಯೋಜನೆಯ ಅಡಿ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ಹೆಚ್ಚು ದೃಢವಾದ ಮತ್ತು ಪರಿಣಾಮಕಾರಿ ಪೋಷಕಾಂಶ ವಿತರಣಾ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿ ಕಾರ್ಯಗತಗೊಳಿಸಿದ ನಂತರ ಬಲವರ್ಧಿತ ಅಕ್ಕಿಯನ್ನು ಪುನರಾರಂಭಿಸಲಾಗುತ್ತದೆ ಎಂದು ಟೈಮ್‌ಲೈನ್ ನಿರ್ದಿಷ್ಟಪಡಿಸದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಕ್ಕಿ ಬಲವರ್ಧಿತ ಕಾರ್ಯಕ್ರಮವನ್ನು 2019 ರಲ್ಲಿ ಪೈಲಟ್ ಯೋಜನೆ ಆಗಿ ಪ್ರಾರಂಭಿಸಲಾಯಿತು, ಆರಂಭದಲ್ಲಿ ನಿರ್ದಿಷ್ಟ ಜಿಲ್ಲೆಗಳನ್ನು ಗುರಿಯಾಗಿರಿಸಿಕೊಂಡು ಈ ಯೋಜನೆ ಜಾರಿಗೆ ತರಲಾಗಿತ್ತು. ಇದನ್ನು ಹಂತಗಳಲ್ಲಿ ಹೆಚ್ಚಳ ಮಾಡಲಾಗಿತ್ತು. ಮಾರ್ಚ್ 2022ರ ವೇಳೆಗೆ ಐಸಿಡಿಎಸ್ ಮತ್ತು ಪಿಎಂ ಪೋಷಣ್ ಒಳಗೊಂಡಂತೆ ಮಾರ್ಚ್ 2023 ರ ವೇಳೆಗೆ ಪಿಡಿಎಸ್ ಅಡಿ 291ಕ್ಕೂ ಹೆಚ್ಚಿನ ಜಿಲ್ಲೆಗಳಿಗೆ ಈ ಯೋಜನೆ ತಲುಪುವಂತೆ ಮಾಡಲಾಗಿತ್ತು. ಮಾರ್ಚ್ 2024ರ ವೇಳೆಗೆ ರಾಷ್ಟ್ರವ್ಯಾಪಿ ಅನುಷ್ಠಾನ ಸಾಧಿಸಲಾಯಿತು. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಏಪ್ರಿಲ್ 2022 ರಲ್ಲಿ ಎಲ್ಲ ಯೋಜನೆಗಳಲ್ಲಿ ಪೂರ್ಣ ಅನುಷ್ಠಾನಕ್ಕೆ ಅನುಮೋದನೆ ನೀಡಿತ್ತು.
ಇವುಗಳನ್ನು ಓದಿ:
ಮೊದಲು ಮಿಲೇನಿಯಲ್ಸ್ ಕಾಂಗ್ರೆಸ್‌ಗೆ ಪಾಠ ಕಲಿಸಿತ್ತು: ಈಗ Gen -Z ಕೂಡ ಸಿದ್ಧವಾಗಿದೆ: ಪ್ರಧಾನಿ ಮೋದಿ

