ETV Bharat / bharat

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ನದಿಯಲ್ಲಿ ಕೊಚ್ಚಿಹೋದ 3 ಸಾವಿರ ಗ್ಯಾಸ್ ಸಿಲಿಂಡರ್‌ಗಳು! Video

ನದಿಯಲ್ಲಿ ತೇಲಿಬಂದ ಗ್ಯಾಸ್​ ಸಿಲಿಂಡರ್​ಗಳು- ಮಳೆ ನೀರಿಗೆ ಕೊಚ್ಚಿ ಹೋದ ಎಲ್​ಪಿಜಿ ಸಿಲಿಂಡರ್​ಗಳು- ಮಹಾರಾಷ್ಟ್ರದ ಪಾತಾಳಗಂಗಾ ನದಿ.

GAS CYLINDERS IN RIVER
ನದಿಯಲ್ಲಿ ತೇಲಿಬಂದ ಗ್ಯಾಸ್ ಸಿಲಿಂಡರ್‌ಗಳು (Source- Push raj X Account)
author img

By ETV Bharat Karnataka Team

Published : July 9, 2026 at 1:43 PM IST

1 Min Read
Choose ETV Bharat

ರಾಯಗಢ (ಮಹಾರಾಷ್ಟ್ರ): ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಅನೇಕ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿ ಹರಿಯುವ ಪಾತಾಳಗಂಗಾ ನದಿಯಲ್ಲಿ ನೂರಾರು ಗ್ಯಾಸ್ ಸಿಲಿಂಡರ್‌ಗಳು ಕೊಚ್ಚಿ ಹೋಗಿರುವ ದೃಶ್ಯ ಬೆಳಕಿಗೆ ಬಂದಿದೆ.

ಆರಂಭದಲ್ಲಿ, ಈ ಸಿಲಿಂಡರ್‌ಗಳು ಎಲ್ಲಿಂದ ಬಂದವು ಎಂಬುದರ ಬಗ್ಗೆ ಗೊಂದಲವಿತ್ತು. ಈಗ ಜಿಲ್ಲಾಡಳಿತ ಈ ಬಗ್ಗೆ ಮಾಹಿತಿ ನೀಡಿದೆ. ಪನ್ವೇಲ್ ತಾಲೂಕಿನ ಚವಾಣೆಯಲ್ಲಿರುವ ಹೆಚ್​​ಪಿಸಿಎಲ್​ ಎಲ್​​ಪಿಜಿ ಬಾಟ್ಲಿಂಗ್ ಸ್ಥಾವರದಿಂದ ಇವು ಪ್ರವಾಹದ ಅಬ್ಬರಕ್ಕೆ ಕೊಚ್ಚಿಕೊಂಡು ಬಂದಿವೆ. ಮಳೆ ನೀರು ಗ್ಯಾಸ್​ ಘಟಕಕ್ಕೆ ನುಗ್ಗಿತ್ತು. ಇದರಿಂದ ಸಿಲಿಂಡರ್​ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದರಲ್ಲಿ ತುಂಬಿದ ಮತ್ತು ಖಾಲಿ ಸಿಲಿಂಡರ್‌ಗಳೂ ಇವೆ ಎಂದು ತಿಳಿಸಿದೆ.

ಸಿಲಿಂಡರ್​ ಸಂಗ್ರಹಿಸಲು ಜನರಿಂದ ಸಾಹಸ: ನದಿ ನೀರಿನಲ್ಲಿ ತೇಲಿಬಂದ ಗ್ಯಾಸ್​ ಸಿಲಿಂಡರ್​ಗಳನ್ನು ಸಂಗ್ರಹಿಸಲು ಜನರು ಸಾಹಸ ಮಾಡಿದ್ದಾರೆ. ರಭಸವಾಗಿ ಹರಿಯುವ ನೀರನ್ನೂ ಲೆಕ್ಕಿಸದೆ ಹಗ್ಗದಿಂದ ಕೊಕ್ಕೆ ಹಾಕಿ ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.

ಕೊಚ್ಚಿಹೋದ ಸಿಲಿಂಡರ್​ಗಳನ್ನು ಹೆಚ್​​ಪಿ ಕಂಪನಿಗೆ ವಾಪಸ್​ ತಂದುಕೊಡುವಂತೆ ಜಿಲ್ಲಾಧಿಕಾರಿ ಕಿಶನ್ ಜವಾಲೆ ಜನರಲ್ಲಿ ಮನವಿ ಮಾಡಿದ್ದಾರೆ. ನದಿಯಿಂದ ಅಥವಾ ಆ ಪ್ರದೇಶದಿಂದ ಸಿಕ್ಕ HPCL ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿದವರು ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬಾರದು. ತಕ್ಷಣವೇ ಅವುಗಳನ್ನು ಹೆಚ್​​ಪಿ ಕಂಪನಿ, ಹತ್ತಿರದ ವಿತರಕರು, ತಹಶೀಲ್ದಾರ್ ಕಚೇರಿ, ಉಪ ವಿಭಾಗೀಯ ಅಧಿಕಾರಿ ಕಚೇರಿಗೆ ತಂದು ಕೊಡಬೇಕು. ಅಂತಹ ಸಿಲಿಂಡರ್‌ಗಳನ್ನು ಬಳಸಿ ಜನರು ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

ಇವುಗಳನ್ನೂ ಓದಿ: