ETV Bharat / bharat

Census 2027: ಏಪ್ರಿಲ್​​ನಿಂದ ಮೊದಲ ಹಂತದ ಜನಗಣತಿ ಆರಂಭ: ಕೇಂದ್ರ ಗೃಹ ಸಚಿವಾಲಯ

ಜನಗಣತಿ 2027: 2026ರ ಏಪ್ರಿಲ್​ನಿಂದ ಮನೆ - ವಸತಿಗಳ ಪಟ್ಟಿ ಮಾಡಿ ಬಳಿಕ 2027ಕ್ಕೆ ಜನಸಂಖ್ಯಾ ಗಣತಿ ಕಾರ್ಯ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

First Phase Of Census 2027 To Take Place Between April And September: MHA
2027ಕ್ಕೆ ಮೊದಲ ಹಂತದ ಜನಗಣತಿ ಆರಂಭ (ETV Bharat)
author img

By ETV Bharat Karnataka Team

Published : January 8, 2026 at 10:19 AM IST

2 Min Read
Choose ETV Bharat

ನವದೆಹಲಿ: 2027ರ ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಕಾರ್ಯ ಈ ವರ್ಷ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯಲ್ಲಿ ಈ ಕಾರ್ಯ ಸಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ತಿಳಿಸಿದೆ.

30 ದಿನಗಳ ಮನೆ ಪಟ್ಟಿ ಕಾರ್ಯಾಚರಣೆ ಪ್ರಾರಂಭವಾಗುವ ಮೊದಲು 15 ದಿನಗಳ ಅವಧಿಯಲ್ಲಿ ಸ್ವಯಂ ಎಣಿಕೆ ನಡೆಸುವ ಆಯ್ಕೆಯೂ ಇರುತ್ತದೆ ಎಂದು ತಿಳಿಸಲಾಗಿದೆ.

ಮತ ಏಣಿಕೆ ಸಮೀಕ್ಷೆಯು 2021ರಲ್ಲಿ ನಡೆಯಬೇಕಿತ್ತು. ಆದರೆ, A ಸಂದರ್ಭದಲ್ಲಿ ಕೋವಿಡ್​ 19 ಸಾಂಕ್ರಾಮಿಕದಿಂದ ಇದನ್ನು ಮುಂದೂಡಲಾಗಿತ್ತು. ದೇಶದ ಜನಸಂಖ್ಯೆ ಮಾಹಿತಿ ನೀಡುವ ಈ ಬೃಹತ್​ ಸಮೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲಾಗುವುದು. ಮನೆಗಳ ಪಟ್ಟಿ ಮತ್ತು ವಸತಿ ಗಣತಿಯನ್ನು 2026ರ ಏಪ್ರಿಲ್​ನಿಂದ ನಡೆಸಲಾಗುವುದು. ಜನಸಂಖ್ಯಾ ಏಣಿಕೆ 2027ರ ಫೆಬ್ರವರಿಯಿಂದ ನಡೆಯಲಿದೆ.

ಕೇಂದ್ರ ಸರ್ಕಾರವು ಈ ಮೂಲಕ ಭಾರತದ ಜನಗಣತಿ 2027 ರ ಮನೆ ಪಟ್ಟಿ ಕಾರ್ಯಾಚರಣೆಗಳು 2026ರ ಏಪ್ರಿಲ್ 1 ರಿಂದ 2026 ಸೆಪ್ಟೆಂಬರ್ 30ರ ನಡುವೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯಲ್ಲಿ ನಡೆಯಲಿದೆ ಎಂದು ಘೋಷಿಸಲಿದೆ.

ಮನೆ ಮನೆಗೆ ಮನೆ ಪಟ್ಟಿ ಮಾಡುವ ಕಾರ್ಯಾಚರಣೆ ಪ್ರಾರಂಭವಾಗುವ 30 ದಿನಗಳ ಮೊದಲು 15 ದಿನಗಳ ಅವಧಿಯಲ್ಲಿ ಸ್ವಯಂ ಗಣತಿಗೆ ಒಂದು ಆಯ್ಕೆಯೂ ಇರುತ್ತದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

2027ರ ಜನಗಣತಿಯು ಜನಸಂಖ್ಯಾ ಎಣಿಕೆಯ ಹಂತದಲ್ಲಿ ಜಾತಿ ದತ್ತಾಂಶವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು ಸರ್ಕಾರ ಈ ಹಿಂದೆ ಹೇಳಿತ್ತು.

ಕೊನೆಯ ಸಮಗ್ರ ಜಾತಿ ಆಧಾರಿತ ಗಣತಿಯನ್ನು ಬ್ರಿಟಿಷರು 1881 ಮತ್ತು 1931 ರ ನಡುವೆ ಮಾಡಿದ್ದರು. ಸ್ವಾತಂತ್ರ್ಯದ ನಂತರ ನಡೆದ ಎಲ್ಲಾ ಜನಗಣತಿ ಕಾರ್ಯಾಚರಣೆಗಳಿಂದ ಜಾತಿಯನ್ನು ಹೊರಗಿಡಲಾಗಿತ್ತು.

ಕಳೆದ ವರ್ಷ ಏಪ್ರಿಲ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಮುಂಬರುವ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು.

ಸುಮಾರು 30 ಲಕ್ಷ ಗಣತಿದಾರರು ಜನಗಣತಿಯಲ್ಲಿ ಭಾಗಿಯಾಗಲಿದ್ದು, ಮೊದಲ ಡಿಜಿಟಲ್ ಜನಗಣತಿಯಲ್ಲಿ, ಉತ್ತಮ ಗುಣಮಟ್ಟದ ಡೇಟಾವನ್ನು ಖಚಿತಪಡಿಸಿಕೊಳ್ಳಲು ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳಿಗೆ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಡೇಟಾ ಸಂಗ್ರಹಿಸಲಿದ್ದಾರೆ.

2011ರ ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆ 1,210.19 ಮಿಲಿಯನ್ ಆಗಿದ್ದು, ಅದರಲ್ಲಿ 623.72 ಮಿಲಿಯನ್ (ಶೇಕಡಾ 51.54) ಪುರುಷರಾಗಿದ್ದು, ಮಹಿಳೆಯರ ಸಂಖ್ಯೆ 586.46 ಮಿಲಿಯನ್ ಅಂದರೆ. ಶೇಕಡಾ 48.46ರಷ್ಟಿದೆ.

ಇವುಗಳನ್ನೂ ಓದಿ:

ಮುಂದಿನ ಜನ ಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ

ಜನಗಣತಿಗೆ 11,718 ಕೋಟಿ ರೂ.ಗಳನ್ನು ಹಂಚಿಕೆ ಮಾಡುವ ತೀರ್ಮಾನಕ್ಕೆ ಕೇಂದ್ರ ಸಂಪುಟ ಅಸ್ತು