ನೋಯ್ಡಾ ಅರಣ್ಯ ಸೊಸೈಟಿಯ 21ನೇ ಮಹಡಿಯಲ್ಲಿ ಎಸಿ ಸ್ಫೋಟದಿಂದ ಅಗ್ನಿ ಅವಘಡ
ನೋಯ್ಡಾದ ಸೆಕ್ಟರ್ 119 ಪ್ರದೇಶದ ಅಪಾರ್ಟ್ಮೆಂಟ್ ಕಟ್ಟಡದ 21ನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

Published : June 29, 2026 at 1:41 PM IST
ನವದೆಹಲಿ/ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ -119 ರಲ್ಲಿರುವ ಅರಣ್ಯ ಸೊಸೈಟಿಯ ಅಪಾರ್ಟ್‌ಮೆಂಟ್‌ನಲ್ಲಿ ಹವಾನಿಯಂತ್ರಣ (ಎಸಿ) ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ 21ನೇ ಮಹಡಿಯಲ್ಲಿ ಸಂಭವಿಸಿದೆ. ಜ್ವಾಲೆಗಳು ಮತ್ತು ಹೊಗೆ ಕಾಣಿಸಿಕೊಂಡಿದ್ದರಿಂದ ಸೊಸೈಟಿ ಸಂಕೀರ್ಣದಲ್ಲಿದ್ದ ಜನರು ಭಯಭೀತಗೊಂಡಿದ್ದಾರೆ. ನಿವಾಸಿಗಳು ತಕ್ಷಣ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಹಲವಾರು ಅಗ್ನಿಶಾಮಕ ದಳದವರು ಮತ್ತು ಸ್ಥಳೀಯ ಪೊಲೀಸ್ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಸಿಬ್ಬಂದಿ ಮತ್ತು ಆಡಳಿತವು ಹತ್ತಿರದ ಫ್ಲಾಟ್‌ಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.
दिनांक 29.06.2026 को थाना सेक्टर-113 क्षेत्रांतर्गत सेक्टर-119 स्थित एक सोसाइटी के 21वें फ्लोर पर फ्लैट में एसी फटने से आग लगने की सूचना प्राप्त हुई। सूचना पर तत्काल कार्रवाई करते हुए फायर सर्विस की टीम द्वारा 08 गाड़ियाँ की मदद से आग को पूर्णत: बुझा दिया गया है। कोई जनहानि नही… pic.twitter.com/L9rfQbC1Vj
— POLICE COMMISSIONERATE GAUTAM BUDDH NAGAR (@noidapolice) June 29, 2026
ತಕ್ಷಣ ಕಾರ್ಯಪ್ರವೃತ್ತರಾದ ಸಿಎಂ ತುರ್ತು ಕ್ರಮಗಳಿಗೆ ಸೂಚನೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತಲುಪಿ ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದರು. ಎಲ್ಲಾ ಹಂತಗಳಲ್ಲಿಯೂ ಜಾಗರೂಕರಾಗಿರಲು ಅವರು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.
ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಸೆಕ್ಟರ್ 119ರ ಅರಣ್ಯ ಸೊಸೈಟಿಯ 21ನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ತಿಳಿಸಿದ್ದಾರೆ.
ಗೌತಮ್ ಬುದ್ಧ ನಗರದ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಅಲ್ಲೇ ಬೀಡು ಬಿಟ್ಟಿದ್ದಾರೆ. ಪ್ರಸ್ತುತ ಮಾಹಿತಿಯ ಪ್ರಕಾರ, ಯಾರೂ ಅವಘಡದಲ್ಲಿ ಸಿಲುಕಿಕೊಂಡಿಲ್ಲ ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
#WATCH नोएडा: सेक्टर-113 पुलिस स्टेशन के अधिकार क्षेत्र में आने वाली अरण्य सोसाइटी, सेक्टर-119 के एक फ्लैट में आग लग गई। दमकल की 6 गाड़ियां मौके पर मौजूद हैं। आग बुझाने का काम जारी है। अभी तक किसी के हताहत होने की खबर नहीं है। pic.twitter.com/uRjnbh54mw
— ANI_HindiNews (@AHindinews) June 29, 2026
ಎಸಿ ಸ್ಫೋಟದಿಂದ ಈ ಅವಘಡ: ಎಸಿ ಸ್ಫೋಟದಿಂದಾಗಿ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ತಕ್ಷಣ 20 ರಿಂದ 25 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದರು. ತುರ್ತಾಗಿ ಕಾರ್ಯಪ್ರವೃತ್ತರಾದ ಸಿಬ್ಬಂದಿಯ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಫ್ಲಾಟ್ ಒಳಗೆ ಮಲಗಿದ್ದ ಕುಟುಂಬವನ್ನು ಸಕಾಲದಲ್ಲಿ ಸ್ಥಳಾಂತರಿಸಲಾಗಿದೆ. ಅರ್ಧ ಗಂಟೆಯ ತೀವ್ರ ಪ್ರಯತ್ನದ ನಂತರ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಯಿತು. ಅಗ್ನಿಶಾಮಕ ದಳದವರು ಬೆಂಕಿ ಇತರ ಫ್ಲಾಟ್‌ಗಳಿಗೆ ಹರಡುವುದನ್ನು ತಡೆದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ .
ಇದನ್ನೂ ಓದಿ : ಎರ್ನಾಕುಲಂ ವೈಪಿನ್ ಯಾರ್ಡ್‌ನಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿ ಭಾರಿ ಬೆಂಕಿ ಅವಘಡ: ಮುಂದುವರೆದ ರಕ್ಷಣಾ ಕಾರ್ಯಾಚರಣೆ

