ಬಂಗಾಳದ 77 ಬೂತ್ಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಪರಿಶೀಲನೆ
ಫಲ್ಟಾ, ಡೈಮಂಡ್ ಹಾರ್ಬರ್, ಮಗರ್ಹತ್ ಮತ್ತು ಬಡ್ಜ್ ಬಡ್ಜ್ನಲ್ಲಿ ಮರು ಮತದಾನ ನಡೆಸುವಂತೆ 32 ದೂರುಗಳು ಬಂದಿವೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮತಗಟ್ಟೆ ಅಧಿಕಾರಿಗಳಿಂದಾಗಿ ಈ ದೂರು ಬಂದಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.


By PTI
Published : April 30, 2026 at 5:23 PM IST
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ನಡೆದ ದಕ್ಷಿಣ 24 ಪರಗಣ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ 77 ಬೂತ್ಗಳಲ್ಲಿ ಮರು ಮತದಾನದ ಬೇಡಿಕೆಯನ್ನು ಚುನಾವಣಾ ಆಯೋಗ ಸಕ್ರಿಯವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಲ್ಟಾ, ಡೈಮಂಡ್ ಹಾರ್ಬರ್, ಮಗರ್ಹತ್ ಮತ್ತು ಬಡ್ಜ್ ಬಡ್ಜ್ನಲ್ಲಿ ಮರು ಮತದಾನ ನಡೆಸುವಂತೆ 32 ದೂರುಗಳು ಬಂದಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮತಗಟ್ಟೆ ಅಧಿಕಾರಿಗಳಿಂದಾಗಿ ಈ ದೂರು ಬಂದಿದೆ. ಇವಿಎಂ ಅಮಸಪರ್ಕ ಕಾರ್ಯಾಚರಣೆ, ಮತಗಟ್ಟೆ ವಶಪಡಿಸಿಕೊಳ್ಳುವುದು, ಬೆದರಿಸುವುದು ಅಥವಾ ಮತದಾನದ ಗೌಪ್ಯತೆಯ ಉಲ್ಲಂಘನೆ ಆಧಾರದ ಮೇಲೆ ಈ ದೂರು ಸಲ್ಲಿಕೆಯಾಗಿವೆ.
ಎಪ್ರಿಲ್ 29ರಂದು (ಬುಧವಾರ) ನಡೆದ ಮತದಾನದಲ್ಲಿ ಈ ದೂರುಗಳು ಬಂದಿದ್ದು, ಅನೇಕ ಕಡೆ ಇವಿಎಂ ತಿರುಚುವಿಕೆ ಆರೋಪ, ಯಂತ್ರಗಳಲ್ಲಿ ವಸ್ತುಗಳ ಬಳಕೆ ಮತ್ತು ಕಣ್ಗಾವಲು ಕ್ಯಾಮರಾಗಳನ್ನು ಅಡ್ಡಿಪಡಿಸುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಲಾಗಿದೆ. ಪ್ರಮಾಣ ಮತ್ತು ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ದೂರು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದೂರಿನ ಹಿನ್ನೆಲೆ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಮರು ಮತದಾನದ ಕುರಿತು ಯಾವುದೇ ನಿರ್ಧಾರವನ್ನು ನಡೆಸುವ ಮೊದಲು ಈ ಕುರಿತು ಪರಿಶೀಲನೆ ನಡೆಸುವಂತೆ ವಿಶೇಷ ವೀಕ್ಷಕರಾಗಿರುವ ಸುಬ್ರತಾ ಗುಪ್ತಾ ಅವರಿಗೆ ಸೂಚಿಸಿದ್ದಾರೆ.
ಪ್ರಸ್ತುತ ಗುಪ್ತಾ ಅವರು ಕ್ಷೇತ್ರದಲ್ಲಿನ ಹಲವು ಬೂತ್ಗಳ ಪರಿಸ್ಥಿತಿಯ ಮರು ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ವೀಕ್ಷಕರ ಜೊತೆ ಕೂಡ ಮಾತುಕತೆ ನಡೆಸಿದ್ದಾರೆ.
ದೂರು ಸ್ವೀಕರಿಸಿರುವ ಸ್ಥಳಲ್ಲಿ ಭೌತಿಕವಾಗಿ ತಳಮಟ್ಟದ ಪರಿಸ್ಥಿತಿ ಪರಿಶೀಲನೆ ನಡೆಸಿ, ಬಳಿಕ ಈ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಕೋರಲಾಗಿದೆ. ಇದು ಚುನಾವಣೆ ಪ್ರಕ್ರಿಯೆ ಮರುದಿನ ನಡೆಯುವ ಪರಿಶೀಲನೆ ಪ್ರಕ್ರಿಯೆಯು ಆಗಿದೆ.
ಗುಪ್ತಾ ಪರಿಶೀಲನೆ ಬಳಿಕ ಆಯೋಗವು ಮರು ಮತದಾನ ನಡೆಸುವ ಕುರಿತು ಅಂತಿಮ ನಿರ್ಧಾರ ನಡೆಸಲಿದೆ. ಅಗತ್ಯವಿದ್ದಲ್ಲಿ ಪರಿಣಾಮಕ್ಕೆ ಒಳಗಾದ ಬೂತ್ಗಳಲ್ಲಿ ಶುಕ್ರವಾರಕ್ಕೂ ಮೊದಲು ಮರು ಮತದಾನವನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ಡೈಮಂಡ್ ಹಾರ್ಬರ್ ಪ್ರದೇಶದ ಮಗರ್ಹತ್ ಪಶ್ಚಿಮದಲ್ಲಿ ಗಂಭೀರವಾದ ಆರೋಪಗಳು ಕೇಳಿ ಬಂದಿದ್ದು, ಜನರ ಮತ ಚಲಾವಣೆಯನ್ನು ಗಮನಿಸಲು ಮತದಾರರ ಶರ್ಟ್ ಜೇಬಿನಲ್ಲಿ ರಹಸ್ಯ ಕ್ಯಾಮರಾವನ್ನು ಇರಿಸಲಾಗಿತ್ತು ಎಂಬ ಆರೋಪ ಮಾಡಲಾಗಿದೆ.
ಮರು ಮತದಾನಕ್ಕೆ ಸೂಚನೆಗಳು ಸ್ಪಷ್ಟವಾಗಿವೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲವನ್ನೂ ತಳಮಟ್ಟದಲ್ಲಿ ನಿರ್ಣಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವುಗಳನ್ನೂ ಓದಿ:
ಬಂಗಾಳ ಕೋಟೆಗಾಗಿ ಬಿಜೆಪಿ v/s ದೀದಿ ಫೈಟ್: ತಮಿಳುನಾಡಿನಲ್ಲಿ ಡಿಎಂಕೆಗೆ 2ನೇ ಸಲ ಅಧಿಕಾರ?
ಎಕ್ಸಿಟ್ ಪೋಲ್: ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಯುಡಿಎಫ್ಗೆ ಅಧಿಕಾರ

