ಕೋಲ್ಕತ್ತಾ, ಡಾರ್ಜಿಲಿಂಗ್, ಸಿಕ್ಕಿಂನಲ್ಲಿ ಭೂಕಂಪ: ಭಯ ಭೀತಗೊಂಡ ಜನ
ಕೋಲ್ಕತ್ತಾ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದೆ. ಇದರಿಂದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

Published : February 27, 2026 at 2:15 PM IST
ಕೋಲ್ಕತ್ತಾ, ಪಶ್ಚಿಮಬಂಗಾಳ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ಡಾರ್ಜಿಲಿಂಗ್, ಸಿಕ್ಕಿಂ ಮತ್ತು ನೇಪಾಳದಲ್ಲಿ ಶುಕ್ರವಾರ ಭೂಕಂಪನದ ಅನುಭವವಾಗಿದೆ. ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಕೆಲವು ಜಿಲ್ಲೆಗಳಲ್ಲಿ ಮತ್ತೆ ಕಂಪನದ ಅನುಭವವಾಗಿದೆ. ಇಂದು ಮಧ್ಯಾಹ್ನ 1:22 ಕ್ಕೆ ಕಂಪನದ ಅನುಭವವಾಗಿದೆ. 52 ಸೆಕೆಂಡುಗಳಲ್ಲಿ ಒಟ್ಟು ಮೂರು ಕಂಪನಗಳು ಸಂಭವಿಸಿವೆ. ರಿಕ್ಟರ್ ಮಾಪಕದಲ್ಲಿ 5ರಷ್ಟು ತೀವ್ರತೆಯ ಕಂಪನಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಕಂಪನದ ನಂತರ ನಬನ್ನಾ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಅನೇಕರು ಭಯಭೀತರಾಗಿ ಬೀದಿ ಬಂದು ನಿಂತುಕೊಂಡಿದ್ದಾರೆ. ಕಂಪನದ ಸಮಯದಲ್ಲಿ ಸೀಲಿಂಗ್ ಫ್ಯಾನ್‌ಗಳು ಅಲುಗಾಡಿದರೆ, ಪೀಠೋಪಕರಣಗಳು ಶೇಕ್ ಆದವು. ಕಿಟಕಿಗಳು ಸದ್ದು ಮಾಡಿದವು ಎಂದು ಹಲವಾರು ಪ್ರದೇಶಗಳ ನಿವಾಸಿಗಳು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಬಹುಮಹಡಿ ಕಟ್ಟಡಗಳಲ್ಲಿ ಭೂಕಂಪದ ಅನುಭವ ಹೆಚ್ಚಾಗಿ ಅನುಭವಕ್ಕೆ ಬಂದಿದೆ.
ಡಾರ್ಜಿಲಿಂಗ್ನಲ್ಲೂ ನಡುಗಿದ ಭೂಮಿ: ಅದೇ ರೀತಿ, ಇಂದು ಬೆಳಗ್ಗೆ ಡಾರ್ಜಿಲಿಂಗ್‌ನಲ್ಲಿ 2.5ರಷ್ಟು ತೀವ್ರತೆಯ ಭೂಕಂಪನದ ಅನುಭವವಾಗಿದೆ. ಭೂಕಂಪದ ತೀವ್ರತೆ ಹೆಚ್ಚಿರಲಿಲ್ಲ, ಆದರೆ ಭಯಭೀತ ಜನರು ತಮ್ಮ ಮನೆಗಳಿಂದ ಹೊರಗೆ ಓಡಿಬಂದರು. ಭೂಕಂಪದ ಕೇಂದ್ರಬಿಂದು ಸಿಕ್ಕಿಂ ಎಂದು ವರದಿಯಾಗಿದೆ.
ಫೆಬ್ರವರಿ ಅಂತ್ಯದಿಂದ ಸಿಕ್ಕಿಂನಲ್ಲಿ ಹಲವಾರು ಭೂಕಂಪಗಳು ಮತ್ತು ಕಂಪನಗಳು ಭೀತಿಯನ್ನುಂಟುಮಾಡಿವೆ. ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ ಹಲವಾರು ಕಂಪನಗಳು ಸಂಭವಿಸಿವೆ. ಇಂದು ಬೆಳಗ್ಗೆ 4:10 ರ ಸುಮಾರಿಗೆ ಸಿಕ್ಕಿಂನಲ್ಲಿ 3.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ವ್ಯಾಪಕ ಭೀತಿಯನ್ನುಂಟುಮಾಡಿದೆ.
ಪುನರಾವರ್ತಿತ ಕಂಪನಗಳಿಂದ ಭೀತಿಗೊಳಗಾದ ಜನ: ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಅನೇಕ ಜನರಿಗೆ ಬಲವಾದ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಕ್ಕಿಂನಲ್ಲಿ, ವಿಶೇಷವಾಗಿ ಪಶ್ಚಿಮ ಸಿಕ್ಕಿಂನಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿವೆ. ಪುನರಾವರ್ತಿತ ಕಂಪನಗಳು ಸ್ಥಳೀಯ ಆತಂಕವನ್ನು ಹೆಚ್ಚಿಸಿವೆ.
ನಿನ್ನೆಯಷ್ಟೇ ಸಿಕ್ಕಿಂನಲ್ಲಿ ನಾಲ್ಕು ಪ್ರತ್ಯೇಕ ಭೂಕಂಪಗಳು ಸಂಭವಿಸಿದ್ದು, ಭಯ ಮತ್ತು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಆದಾಗ್ಯೂ, ಸಾವುನೋವುಗಳು ಅಥವಾ ದೊಡ್ಡ ಹಾನಿಯ ಬಗ್ಗೆ ತಕ್ಷಣದ ವರದಿಗಳಾಗಿಲ್ಲ.
ಇತ್ತೀಚೆಗೆ ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಆಗಾಗ ಭೂಕಂಪನದ ವರದಿಗಳಾಗುತ್ತಿವೆ. ಅದರಲ್ಲೂ ನೇಪಾಳ ಸೇರಿದಂತೆ ಇತರ ಕಡೆ ಆಗಾಗ ಭೂಮಿ ಕಂಪಿಸುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಇವುಗಳನ್ನು ಓದಿ:
ಮಗುವಿನ ಚಿಕಿತ್ಸೆಗೆ 16 ಕೋಟಿ ಸಂಗ್ರಹ! ನೆರವಾಯ್ತು ಕ್ರೌಡ್‌ಫಂಡಿಂಗ್; ಸಚಿವ ನಾರಾ ಲೋಕೇಶ್ಗೂ ಪೋಷಕರ ಧನ್ಯವಾದ!
'ನಾನು ಪ್ರಮಾಣಿಕ'; ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಯಾದ ಬಳಿಕ ಕೇಜ್ರಿವಾಲ್ ಮೊದಲ ಪ್ರತಿಕ್ರಿಯೆ!

