ETV Bharat / bharat

ನೀಟ್​-ಪಿಜಿ ಪರೀಕ್ಷೆಯ ಕೀ ಉತ್ತರ ಪ್ರಕಟಿಸುವ ನೀತಿ ಬಹಿರಂಗಪಡಿಸಿ: ಎನ್​​ಬಿಎಗೆ ಸುಪ್ರೀಂಕೋರ್ಟ್​ ಸೂಚನೆ

ಪರೀಕ್ಷೆಯ ಬಳಿಕ ಪ್ರಕಟಿಸಲಾಗುವ ಕೀ ಉತ್ತರಗಳನ್ನು ಯಾವ ನೀತಿಯ ಆಧಾರದ ಮೇಲೆ ನೀಡಲಾಗುತ್ತದೆ ಎಂಬದನ್ನು ತಿಳಿಸಲು ಎನ್​ಬಿಎಗೆ ಸುಪ್ರೀಂಕೋರ್ಟ್​ ಸೂಚಿಸಿದೆ.

NEET PG EXAMINATIONS
ಸುಪ್ರೀಂಕೋರ್ಟ್​, ನೀಟ್​ ಪರೀಕ್ಷೆ (IANS, ETV Bharat ಒಳಚಿತ್ರ)
author img

By ETV Bharat Karnataka Team

Published : November 8, 2025 at 10:07 AM IST

2 Min Read
Choose ETV Bharat

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಸ್ನಾತಕೋತ್ತರ (PG) ಪರೀಕ್ಷೆಗಳಿಗೆ ಕೀ ಉತ್ತರಗಳನ್ನು ಪ್ರಕಟಿಸುವ ತನ್ನ ನೀತಿಯನ್ನು ಬಹಿರಂಗಪಡಿಸಲು ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ (NBA) ಸುಪ್ರೀಂಕೋರ್ಟ್​ ಶುಕ್ರವಾರ ನಿರ್ದೇಶನ ನೀಡಿದೆ.

ನೀಟ್​-ಪಿಜಿ ಪರೀಕ್ಷೆಯ ಕೀ ಉತ್ತರಗಳ ಪ್ರಕಟಣೆ ಸಂದರ್ಭದಲ್ಲಿ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳಲು ಕ್ರಮ ಜರುಗಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಮತ್ತು ವಿಪುಲ್ ಪಂಚೋಲಿ ಅವರಿದ್ದ ಪೀಠವು ನಡೆಸಿತು.

ಈ ವೇಳೆ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಎನ್‌ಬಿಇ ಪರ ವಾದಿಸಿದ ವಕೀಲರಿಗೆ ಪೀಠವು ಸೂಚಿಸಿತು.

ಅರ್ಜಿದಾರರ ವಾದವೇನು? ಪರೀಕ್ಷೆಯ ಬಳಿಕ ಎನ್​​ಇಬಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೀ ಉತ್ತರಗಳನ್ನು ಪ್ರಕಟಿಸಬೇಕು. ಅವುಗಳನ್ನು ಎಲ್ಲರೂ ಪಡೆಯುವಂತೆ ಆನ್​ಲೈನ್​ನಲ್ಲಿ ಪ್ರದರ್ಶಿಸಬೇಕು ಎಂದು ಖಾಸಗಿ ಕೋಚಿಂಗ್​ ಸೆಂಟರ್​ಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿವೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)-ಸ್ನಾತಕೋತ್ತರ (ಪಿಜಿ) ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳಿವೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ವಿಚಾರಣೆಯ ಸಮಯದಲ್ಲಿ ಎನ್​ಬಿಇ ಪರ ವಕೀಲರು, ಪ್ರಶ್ನೆ ಪತ್ರಿಕೆಗಳ ಕೀ ಉತ್ತರಗಳನ್ನು ಪಡೆಯುವ ಉದ್ದೇಶದಿಂದ ಕೋಚಿಂಗ್​​ ಕೇಂದ್ರಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿವೆ. ಇದು ಪರೀಕ್ಷೆಯ ಗುಣಮಟ್ಟಕ್ಕೆ ಧಕ್ಕೆ ತರುತ್ತದೆ ಎಂದು ವಕೀಲರು ವಾದಿಸಿದರು.

ಅಂಕಗಳು, ಕೀ ಉತ್ತರಗಳ ಪ್ರಕಟಣೆ ಕೀಗಳು ಸೂಕ್ತವಾದ ಪರೀಕ್ಷಾ ಸೂತ್ರಗಳನ್ನು ರೂಪಿಸಲು ಸುಪ್ರೀಂಕೋರ್ಟ್ ಏಪ್ರಿಲ್​ 29ರಂದು ನಿರ್ದೇಶಿಸಿತ್ತು.

ಇತರ ಪ್ರಮುಖ ಸುದ್ದಿ: ಬೆಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಒಡಿಶಾದ ಹುಡುಗನೊಬ್ಬ ವೈದ್ಯಕೀಯ ಕೋರ್ಸ್‌ ದಾಖಲಾತಿಗೆ ಅಗತ್ಯವಿರುವ ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಮಾದರಿಯಾಗಿದ್ದಾನೆ. ಶುಭಂ ಶಬರ್ ಈ ಸಾಧನೆ ಮಾಡಿದ ಯುವಕ.

ಮೂಲತಃ ಒಡಿಶಾದ ಖೋರ್ಧಾ ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿಯಾಗಿರುವ ಶುಭಂ ಶಬರ್, ತಾನು ನೀಟ್​ ಪಾಸಾದ ಸುದ್ದಿ ಬಂದಾಗ ಬೆಂಗಳೂರಿನಲ್ಲೇ ಇದ್ದ. ಕಂಪನಿಯಲ್ಲಿ ಪೊರಕೆ ಹಿಡಿದ ಕಸ ಗುಡಿಸುತ್ತಿದ್ದಾಗ ಬಂದ ಫೋನ್ ಕರೆ​ ಆತನ ಜೀವನದ ದಿಕ್ಕನ್ನೇ ಬದಲಾಯಿಸಿದೆ. 2025ರ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ಸುದ್ದಿ ಕೇಳಿ ನಿಂತಲ್ಲೇ ಆನಂದಭಾಷ್ಪ ಸುರಿಸಿದ್ದ. ನಿರಂತರ ಓದು ಮತ್ತು ಕಠಿಣ ಪರಿಶ್ರಮ ಹಾಗೂ ನನ್ನ ತಂದೆ - ತಾಯಿಯ ಪಟ್ಟ ಪಡಿಪಾಟಿಲು ತನ್ನನ್ನು ಕೈಬಿಡಲಿಲ್ಲ ಎಂದು ಆತ ಆನಂದಬಾಷ್ಪ ಸುರಿಸಿದ್ದ.

ಇದನ್ನೂ ಓದಿ: ನೀಟ್​ ಪರೀಕ್ಷೆಯ ಫಲಿತಾಂಶದ ಬಳಿಕ ಜಾತಿ ಬದಲಾಯಿಸಲು ಅವಕಾಶವಿಲ್ಲ: ಹೈಕೋರ್ಟ್ ಸ್ಪಷ್ಟನೆ

ದೃಷ್ಟಿ ದೋಷದಿಂದ 1 ಮೀಟರ್ ವರೆಗೆ ಮಾತ್ರ ನೋಡಲು ಸಾಧ್ಯ: NEETನಲ್ಲಿ ರ‍್ಯಾಂಕ್ ಗಳಿಸಿ ಮೆಡಿಕಲ್​ ಸೀಟ್​ ಪಡೆದ ಯುವತಿ